ಪುಟ:ಕಥಾ ಸಂಗ್ರಹ - ಭಾಗ ೨.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸೀತಾಪಹಾರದ ಕಥೆ 61 ಎಲ್ಲಿ ಹೋದೆ ? ಏಕೆ ನನ್ನೊಡನೆ ಮಾತಾಡುವುದಿಲ್ಲ? ಎಂದು ಪ್ರಲಾಪಿಸುತ್ತ, ಎಲ್ಕೆ ಲಕ್ಷ್ಮಣನೇ, ನಾವು ರಾಕ್ಷಸರಲ್ಲಿ ಹಗೆತನವುಳ್ಳವರಾದುದರಿಂದ ಅವರು ಈ ರೀತಿ ಯಾಗಿ ನಮ್ಮನ್ನು ಮೋಸಗೊಳಿಸಿ ಸೀತೆಯನ್ನು ತಿಂದುಬಿಟ್ಟರೋ ? ಅಥವಾ ಎತ್ತಿ ಕೊಂಡುಹೋಗಿ ತಮ್ಮ ಮನೆಗಳಲ್ಲಿಟ್ಟು ಕೊಂಡಿದ್ದಾರೋ ತಿಳಿಯ ದಲ್ಲಾ? ಹಾಗೇನಾ ದರೂ ಒಂದು ಪಕ್ಷದಲ್ಲಿ ಇಟ್ಟು ಕೊಂಡಿದ್ದರೆ ಆ ಕ್ರೋರಾತ್ಮರಾದ ರಾಕ್ಷಸರ ಮಧ್ಯ ದಲ್ಲಿ ಸಿಕ್ಕಿದ ನನ್ನ ಪ್ರಾಣವಲ್ಲಭೆಯು ಹುಲಿಗಳ ಮಧ್ಯದಲ್ಲಿ ಸಿಕ್ಕಿದ ಹೆಣ್ಣು ಹುಲ್ಲೆಯ ಹಾಗೆ ವ್ಯಥಿತಳಾಗಿ ಪ್ರಾಣಗಳನ್ನು ಬಿಡುವಳು, ನಾನು ಪ್ರಿಯೆಯಾದ ಸೀತೆಯನ್ನು ನೋಡದೆ ಒಂದು ನಿಮೇಷಕಾಲವಾದರೂ ಬದುಕಲಾರೆನು. ಎಲೈ ಲಕ್ಷಣನೇ, ಗೋದಾವರೀನದಿಗೆ ಸ್ನಾನಕ್ಕಾಗಿ ಹೋಗಿರುವಳೋ ? ಹಾ ! ಇರಬಹುದು, ನೋಡು. ವಣ, ಬಾ, ಎಂದು ಅಲ್ಲಿಗೆ ಹೋಗಿ ಚೆನ್ನಾಗಿ ನೋಡಿ, ಎಲ್ಲೂ ಕಾಣದೆ ಕಡೆಗೆ ಹುಚ್ಚನಂತೆ--ಆ ನದಿಯಲ್ಲಿರುವ ತಾವರೆಯನ್ನು ನೋಡಿ.ಎಲೈ ತಾವರೆಯೇ, ನಿನ್ನಂತೆ ಮುಖವುಳ್ಳ ನನ್ನ ಪ್ರಿಯೆಯಾದ ಸೀತೆಯನ್ನು ಕಾಣೆಯಾ ? ಎಲೈ ಬಿಳಿದಾ ವರೆಯೇ, ನಿನ್ನ ಬಣ್ಣದಂತಿರುವ ಮುಗುಳ್ಳ ಗೆಯುಳ್ಳ ನನ್ನ ಪ್ರಾಣಕಾಂತೆಯು ಎಲ್ಲಿ ರುವಳು ? ಎಲೈ ಹೊಂದಾವರೆಯೇ, ನಿನ್ನ ಕಾಂತಿಯಂತೆ ಮೈಸಿರಿಯುಳ್ಳ ನನ್ನ ಮಡದಿಯನ್ನು ನೀನೆಲ್ಲಾದರೂ ಕಂಡಿದ್ದರೆ ಹೇಳಬಾರದೇ ? ಎಲೈ ಕನ್ನೈದಿಲೆಯೇ, ನಿನ್ನೆ ಸಳಿನಂತೆ ಕಣ್ಣುಳ್ಳ ನನ್ನ ಪ್ರಾಣಕಾಂತೆಯನ್ನು ಕಂಡಿರುವೆಯಾ ? ಓ ಶೃಂಗವೇ, ನಿನ್ನಂತೆ ಶೋಭಿಸುತ್ತಿರುವ ಮುಂಗುರುಳುಳ್ಳ ನನ್ನ ಮಾನಿನೀಮಣಿಯು ಎಲ್ಲಿ ಮರೆ ಯಾಗಿರುವಳು ? ತೋರಿಸುವೆಯಾ ? ಎಲೈ ಮತ್ಮವೇ, ನನ್ನ ನಾರಿಯು ನಿನ್ನಂತೆ ನೀರಿನಲ್ಲೇನಾದರೂ ಮುಳುಗಿರುವಳೋ ? ಓ ಚಕ್ರವಾಕಪಕ್ಷಿಯೇ, ನೀನು ರಾತ್ರಿ ಯಲ್ಲಿ ನಿನ್ನ ಹೆಂಡತಿಯನ್ನು ಕಾಣದೆ ದುಃಖಪಡುವಂತೆಯೇ ನಾನೂ ದುಃಖಪಡು ತಿರುವೆನು. ಆದುದರಿಂದ ನೀನು ನನ್ನ ಮೇಲೆ ಕನಿಕರವಿಟ್ಟು ನನ್ನ ಮನೋರಮೆ ಯನ್ನು ತೋರಿಸಿಕೊಡುವೆಯಾ ? ಎಂದು ಪ್ರಲಾಪಿಸುತ್ತ ಅಲ್ಲಿಂದ ಹೊರಟು ಕಾಡಿ ನಲ್ಲಿ ಹುಡುಕಿಕೊಂಡು ತಿರುಗುತ್ತ ಕಂಡ ಕಂಡ ಮರಗಳ ಬಳಿಗೂ ಮೃಗಪಕ್ಷಿಗಳ ಬಳಿಗೂ ಓಡಿಯೋಡಿ ಹೋಗಿ ಸುಂದರಿಯಾದ ನನ್ನ ಪತ್ನಿ ಯನ್ನು ಕಾಣಿರಾ ? ಎಂದು ದೀನಭಾವದಿಂದ ಕೇಳುತ್ತ ಮತ್ತು ಎಲೈ ಸಿಂಹವೇ, ನಿನ್ನ ನಡುವಿನಂತೆ ನಡು ವುಳ್ಳವಳಾದ ನನ್ನ ಸುದತೀರತ್ನವನ್ನು ನಿನ್ನ ಗುಹಾಮಧ್ಯದಲ್ಲಿಟ್ಟು ಕೊಂಡಿರುವೆಯಾ ? ಎಲೈ ಜಿಂಕೆಗಳಿರಾ, ನಿಮ್ಮ ಕಣ್ಣುಗಳಂತೆ ಕಪ್ಪಾದ ಕಣ್ಣುಗಳುಳ್ಳ ನನ್ನ ಕಾಮಿ ನಿಯು ನಿಮ್ಮ ನಿವಾಸಸ್ಥಳದಲ್ಲಿರುವಳೋ, ಎಲೈ ಮದಕರಿಯೇ, ನಿನ್ನ ಸೊಂಡಲಿ ನಂತಿರುವ ತೊಡೆಗಳುಳ್ಳ' ನನ್ನ ತರುಣಿಯು ಎಲ್ಲಿರುವಳು ? ಎಲೈ ಅರಸ೦ಚೆಯೇ, ನಿನ್ನ ನಡೆಯಂತೆ ಮನೋಹರವಾದ ನಡೆಯುಳ್ಳ ನನ್ನ ಮೋಹದ ಶೋಭನಾಂಗಿಯನ್ನು ತೋರಿಸಬಾರದೇ ? ಎಲೈ ಕೋಗಿಲೆಯೇ, 'ನಿನ್ನ ಧ್ವನಿಯಂತೆ ಮಧುರಧ್ವನಿಯುಳ್ಳವ ಳಾದ ನನ್ನ ಪ್ರಿಯ ಕಾಂತೆಯನ್ನು ಕಾಣೆಯಾ ? ಎಲೈ ಅರಗಿಣಿಯೇ, ನಿನ್ನಂತೆ ಮುದ್ದು ಮಾತುಳ್ಳ ನನ್ನ ಚೆನ್ನರಸಿಯು ಎಲ್ಲಿ ಹೋದಳು ? ಎಲೈ ಪ್ರಿಯೆಯೇ, ನೀನು ನನ್ನಲ್ಲಿ