ಪುಟ:ಕಥಾ ಸಂಗ್ರಹ - ಭಾಗ ೨.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


72 ಕಥಾಸಂಗ್ರಹ-೪ ನೆಯ ಭಾಗ ಗಳಿಂದ ಒಪ್ಪುತ್ತಿರುವ ನೇರಿಲು ಮರಗಳಲ್ಲಿ ಬಂದು ಕೂತಿರುವ ಗಿಣಿಗಳ ಕೊಕ್ಕುಗ ಳನ್ನು ಮುತ್ತುಗದ ಹೂವುಗಳೆಂದು ಭ್ರಮಿಸಿ ಆರಡಿಗಳು ಬಂದು ಅವುಗಳ ಮೇಲೆ ಬೀಳುತ್ತಿರಲು ; ಗಿಣಿಗಳು ನೇಗಿಲುಹಣ್ಣುಗಳೆಂದು ಭಾಂತಿಪಟ್ಟು ತಮ್ಮ ಕೊಕ್ಕುಗ ಳಿಂದ ಅವುಗಳನ್ನು ಕುಟುಕುತ್ತಿರುವುವು ಬಾಯಿಂದ ಹೇಳದೆ ಕಾರ್ಯದಲ್ಲಿ ಉಪ ಕಾರವನ್ನು ಮಾಡಿ ತೋರಿಸುವ ಸತ್ಪುರುಷರಂತೆ ವಿಶೇಷವಾಗಿ ಹೂವುಗಳನ್ನು ತೋರ್ಪ ಡಿಸದೆ ಮಾಗಿ ಬಿರಿದು ಸುಗಂಧವನ್ನು ಬೀರುತ್ತಿರುವ ಬೃಹತ್ಪಲಗಳನ್ನು ಬುಡದಿಂದ ತುದಿಯ ವರೆಗೂ ಧರಿಸಿಕೊಂಡಿರುವ ಹಲಸಿನ ಮರಗಳು * ವಿರಾಜಿಸುತ್ತಿರುವುವು. ಹೊಂಬಾಳೆಗಳಿಂದಲೂ ಹರಳುಗಳಿಂದ ಕುರುಬೆಗಳಿಂದಲೂ ಎಳೆನೀರುಗಳಿಂದಲೂ ಮೋತೆಗಾಯಿಗಳಿಂದಲೂ ತಳಲುಗಳಿಂದಲೂ ಕೂಡಿ ಮನೋಹರವಾಗಿರುವ ಕೆಂದೆಂಗಿನ ಮರಗಳು ಸ್ವರ್ಗಲೋಕದ ನಂದನೋದ್ಯಾನದಲ್ಲಿರುವ ಕಲ್ಪವೃಕ್ಷಗಳಿಗೆ ತಮ್ಮ ಲೋಕೋತ್ತರವಾದ ಫಲರೂಪ ಸೌಭಾಗ್ಯವನ್ನು ತೋರಿಸಿ ಅವುಗಳನ್ನು ನಾಚಿಸಬೇ ಕೆಂದು ಹೊರಟಿರುವುವೋ ಎಂಬಂತೆ ಅತ್ಯುನ್ನತವಾಗಿ ಬೆಳೆದಿರುವುವು. ಸರಸ್ಸುಗಳು ತಾವರೆ ಕನ್ನೈದಿಲೆ ಕಲ್ಲಾರ ಈ ಮೊದಲಾದ ಹೂವುಗಳ ಮಕರಂದರಸಗಳಿಂದ ಬೆರೆ ದುದರಿಂದ ಸುಗಂಧ ಜಲಗಳಿಂದ ಕೂಡಿದುವುಗಳಾಗಿ ವಸಂತರಾಜನು ತನ್ನ ಅಂತಃ ಪುರಸ್ತ್ರೀಯರೊಡನೆ ಜಲಕ್ರೀಡೆಯಾಡುವ ಸ್ಥಳಗಳೋ ಎಂಬಂತಿರುವುವು ಮಾನಸ ಸರಸ್ಸನ್ನು ಬಿಟ್ಟು ಕಮಲಸಮೃದ್ಧಿಯಿಂದ ಮೆರೆಯುತ್ತಿರುವ ಇಲ್ಲಿನ ಪದ್ಮಾಕರಗಳಿಗೆ ಬಂದು ಆನಂದಿಸುತ್ತಿರುವ ಹಂಸಪಕ್ಷಿಗಳು ಬಡವರಾದ ಅರಸುಗಳನ್ನು ಬಿಟ್ಟು ಐಶ್ವ ರ್ಯವಂತರಾದವರನ್ನು ಸೇರುವ ಸೇವಕರನ್ನು ಅನುಕರಿಸುತ್ತಿರುವವು, ತೆಂಕಣ ಗಾಳಿ ಯೆಂಬ ಗುಡ್ಡನು ವನಸರಸ್ಸುಗಳಲ್ಲಿ ಮಿಂದು ಪುಷ್ಪಧೂಳಿಯೆಂಬ ಭಸ್ಮವನ್ನು ಧರಿಸಿ ಅನುಸರಿಸಿ ಬರುತ್ತಿರುವ ಶೃಂಗಗಳ ಝೇ೦ಕಾರವೆಂಬ ಬೊಬ್ಬೆಯಿಂದ ಕೂಡಿ ಸಂಪಿಗೆ ಹೂವುಗಳೆ೦ಬ ಕೆಂಡಗಳನ್ನು ತುಳಿಯುತ್ತ ವನದೇವತೆಯ ಮುಂದೆ ತೂಳಗ ಬಂದವ ನಂತೆ ಮೆರೆಯುತ್ತಿರುವನು ಇಂಥ ವಿನೋದಕರವಾದ ವಸಂತಕಾಲದಲ್ಲಿ ನನ್ನನ್ನ ಗಲಿ ಸೀತೆಯ ಸೀತೆಯನ್ನ ಗಲಿ ನಾನೂ ದುಃಖಪಡುತ್ತಿರುವೆವು, ಕಾಲಗತಿಯನ್ನು ಮೀರಬಲ್ಲವರಾರು ? ಎಂದು ಬಿಸುಸುಯ್ಯುತಿರಲು ; ಅಷ್ಟರೊಳಗೆ ಈ ವನರಾಜಿಯಲ್ಲಿ ಸಂಚರಿಸುತ್ತಿರುವ ಮನುಷ್ಯರಾರೆಂಬು ದನ್ನು ತಿಳಿದು ಬಂದು ಹೇಳುವಂತೆ ಸುಗ್ರೀವನಿಂದ ಮೊದಲೇ ನೇಮಿಸಲ್ಪಟ್ಟಿದ್ದ ಆಂಚ ನೇಯನು ಸನ್ಯಾಸಿವೇಷಧಾರಿಯಾಗಿ ಬಂದು ರಾಮಲಕ್ಷ್ಮಣರನ್ನು ಕಂಡು ವಂದಿಸಿ ನೀವು ಯಾರು ? ಮನುಷ್ಠಾಕಾರಗಳನ್ನು ಧರಿಸಿದ ಮನ್ಮಥವಸಂತರೋ ? ಜಯಂತ ನಳಕೂಬರರೋ ? ಅಶ್ವಿನೀ ದೇವತೆಗಳೋ ? ಮುನಿಪುತ್ರ ರೋ ? ಅಥವಾ ರಾಜ ಕುಮಾರರೋ ? ನಿಮ್ಮನ್ನು ನೋಡುವುದರಿಂದ ಇವರಿಂಥವರೇ ಎಂದು ನಿರ್ಧರಿಸಿ ತಿಳಿ ಯುವದಕ್ಕಾಗುವುದಿಲ್ಲ. ಏಕೆಂದರೆ, ನಿಮ್ಮ ಸೊಂಟಗಳಲ್ಲಿ ಪರೆಯನ್ನು ಬಿಟ್ಟ ಸರ್ಪ ಗಳಂತೆ ಒರೆಯಿಂದ ತೆಗೆದ ಕತ್ತಿಗಳು ಪ್ರಕಾಶಿಸುತ್ತಿರುವುವು, ನಿಮ್ಮ ಕೈಗಳಲ್ಲಿ ಇಂದ್ರಧನುಸ್ಸುಗಳಂತೆ ಹೊಳೆಯುತ್ತಿರುವ ಸಿಂಗಾಡಿಗಳು ಒಪ್ಪುತ್ತಿರುವುವು. ಹಾವು