78 ಕಥಾಸಂಗ್ರಹ-೪ ನೆಯ ಭಾಗ ಣೆಯನ್ನು ನಿರೀಕ್ಷಿಸಿಕೊಂಡಿದ್ದಾರೆ, ಅವರೆಲ್ಲರ ಗಣಿತಿಯನ್ನು ಪರಾಮರ್ಶಿಸಿ ಚಿತ್ರಕ್ಕೆ ಒಪ್ಪಿಗೆಯಾದ ರೀತಿಯಿಂದ ಅಪ್ಪಣೆ ಕೊಡಿಸಬೇಕೆಂದು ವಿಜ್ಞಾ ಪಿಸಿ ಸರ್ವಸೇನಾಪತಿತ್ವ ವನ್ನು ಹೊಂದಿರುವ ಅಗ್ನಿ ಯ ಮಗನಾದ ಸೀಲನ ಮುಖವನ್ನು ನೋಡಲು; ಆಗ ಆತನು ಶ್ರೀರಾಮಚಂದ್ರನಿಗೆ ಗಣಿತಿಯನ್ನೂ ಪ್ಪಿಸುವುದಕ್ಕಾಗಿ ತಮ್ಮ ತಮ್ಮ ಸೇನೆಗಳೊಡನೆ ಬರುವಂತೆ ಸರ್ವಸೇನಾಪತಿಗಳಿಗೂ ಆಜ್ಞಾಪಿಸಿದನು. ಆ ಬಳಿಕ ನದೀ ಪ್ರದೇಶಗಳಲ್ಲೂ ಪರ್ವತಪ್ರದೇಶಗಳಲ್ಲೂ ಕಡಲ ದಡಗ ಳಲ್ಲೂ ವನಸ್ಥಳಗಳಲ್ಲೂ ವಾಸಮಾಡುತ್ತಿದ್ದವುಗಳೂ ಬೆಟ್ಟ ದಂತೆ ದೊಡ್ಡ ಮೈಯುಳ್ಳು ವುಗಳೂ ಕೂರವಾದ ಹಲ್ಲುಗಳುಳ್ಳು ವುಗಳೂ ಬಾಲಸೂರ್ಯನೋಪಾದಿಯಲ್ಲಿ ಕೆಂಬ ಣ್ಣವುಳ್ಳು ವುಗಳೂ ತಾವರೆಗಳ ಕೇಸರಗಳಂತೆ ಹೊಂಬಣ್ಣವುಳ್ಳು ವುಗಳೂ ಚಂದ್ರನಂತೆ ಬಿಳುಪುಳ್ಳು ವುಗಳೂ ಆಗಿರುವ ಹತ್ತು ಕೋಟಿ ಕಪಿಗಳಿಂದ ಕೂಡಿದ ಶತಬಲಿ ಎಂಬ ಕಪಿನಾಯಕನು ಬಂದು ರಾಮನನ್ನು ಕಂಡು ವಂದಿಸಿ ತನ್ನ ಸೇನೆಗಳನ್ನು ತೋರಿಸಿ ದನು, ಆ ಬಳಿಕ ತಾರೆಯ ತಂದೆಯಾದ ಸುಷೇಣನೆಂಬುವನು ಮೇರುಮಂದರಸರ್ವತ ಗಳಿಗೆ ಸಮಾನಗಳಾದ ಕಪಿಗಳಿಂದೊಪ್ಪುತ್ತಿರುವ ಅನೇಕ ಕೋಟಿ ಸೇನೆಗಳನ್ನು ತಂದು ರಾಮಚಂದ್ರನಿಗೆ ಗಣಿತಿಯೊಪ್ಪಿಸಿದನು, ಆ ಮೇಲೆ ರುಮೆಯ ತಂದೆಯ ಸುಗ್ರೀವನ ಮಾವನೂ ಆದ ರುಮಣನೆಂಬ ಸೇನಾಪತಿಯು ಅನೇಕ ಕೋಟಿ ಕಪಿಸೇನೆಗಳನ್ನು ತೆಗೆ ದುಕೊಂಡು ಬಂದು ರಾಘವನಿಗೆ ಕಾಣಿಸಿದನು, ಹನುಮಂತನ ತಂದೆಯಾದ ಕೇಸರಿ ಯೆಂಬ ಕಪಿನಾಯಕನು ತನ್ನ ಅಗಣ್ಯವಾದ ಕಪಿಸೇನೆಗಳನ್ನು ಕರತಂದು ರಾಮ ಚಂದ್ರನ ಮುಂದೆ ನಿಲ್ಲಿಸಿದನು, ಆ ಬಳಿಕ ಮಹಾ ಪರಾಕ್ರಮಶಾಲಿಯಾದ ಗವಾಕ್ಷ ನೆಂಬ ಕಪಿಸೇನಾನಾಯಕನು ತನ್ನ ಗೋಲಾಂಗೂಲಸೇನೆಗಳನ್ನು ರಘುನಾಥನಿಗೆ ತೋರಿಸಿದನು, ಅದರಂತೆ ಧೂಮ್ರ ಜಾಂಬವಂತರೆಂಬವರು ತಮ್ಮ ಕರಡಿಗಳ ಸೇನೆಗೆ ಳನ್ನೂ ನೀಲ ಸನಸರೆಂಬವರು ತಮ್ಮ ಮುಸಿಯ ಸೇನೆಗಳನ್ನೂ ತೋರಿಸಿದರು. ಗವಯ ದರೀಮುಖ ಯದಸ ಗಜ ಗಂಧಮಾದನ ಯುವರಾಜನಾದ ಅ೦ಗದ ಇಂದ್ರಜಾನು ರಂಭ ದುರ್ಮುಖ ಹನುಮಂತ ನಳ ದಧಿಮುಖ ಶರಭ ಕುಮುದರೆಂಬುವರೂ ಇನ್ನೂ ಅನೇಕ ಕಪಿಸೇನಾಧಿಪತಿಗಳೂ ರಾಮನಿಗೆ ತಮ್ಮ ತಮ್ಮ ಸೇವೆಗಳನ್ನು ತೋರಿಸಿ ಕೈಗ ಳನ್ನು ಮುಗಿದರು. ಆಗ ಶ್ರೀರಾಮನು ಆ ಸೇನಾಪತಿಗಳನ್ನೂ ಅವರವರ ತೇಜಸ್ಸುಗಳನ್ನೂ ಆಕೃತಿಗಳನ್ನೂ ಕೊಬ್ಬನ್ನೂ ನೋಡಿ ಬಹಳ ಸಂತೋಷಪಟ್ಟು ಅವರನ್ನೆಲ್ಲಾ ಆಲಿಂಗನ ಹಸ್ತಲಾಘವ ಕುಶಲವಚನಾಲೋಕನಗಳಿಂದ ಸನ್ಮಾನಿಸಿ ಸುಗ್ರೀವನನ್ನು ಆಲಿಂಗಿಸಿ ಕೊಂಡು--ಎಲೈ ಮಿತ್ರನೇ, ಈ ನಿನ್ನ ಸೇನೆಗಳ ಸಹಾಯದಿಂದ ಸಕಲಲೋಕಗಳನ್ನೂ ಜಯಿಸಬಲ್ಲೆನು. ಹೀಗಿರುವಲ್ಲಿ ರಾವಣನೆಷ್ಟು ಮಾತ್ರ ದವನು ? ಆ ದುಷ್ಟನು ಎಲ್ಲಿರು ವನೋ ? ಅದನ್ನು ಗೊತ್ತು ಮಾಡಿಸಿ ಆ ಸುದ್ದಿಯನ್ನು ತರಿಸಿದರೆ ಆ ಮೇಲೆ ಮುಂಧಣ ಕಾರ್ಯವನ್ನು ಯೋಚಿಸಬಹುದು, ಆ ಕೆಲಸಕ್ಕೆ ಕಪಿಸೇನಾಪತಿಗಳನ್ನು ನೇಮಿಸು ಅಂದನು. ಆ ಕೂಡಲೆ ಸುಗ್ರೀವನು ರಾಮಲಕ್ಷ್ಮಣರ ಮುಂದೆಯೇ ಪೂರ್ವದಿಕ್ಕಿಗೆ
ಪುಟ:ಕಥಾ ಸಂಗ್ರಹ - ಭಾಗ ೨.djvu/೮೮
ಗೋಚರ