ಪುಟ:ಕಥಾ ಸಂಗ್ರಹ - ಭಾಗ ೨.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂ 85 ಆಂಜನೇಯನು ಸೀತೆಯನ್ನು ಕಂಡು '೦ಕಾ ಪಟ್ಟಣವನ್ನು ಸುಟ್ಟು ದು 85 ಯ ಕರ್ಣಕಠೋರವಾಗಿ ಮೊರೆಯುತ್ತಿರುವ ಆತನ ಉಸಿರನ್ನು ಆಲಿಸಿ ಕಡೆಗೆ ಆ ಶ್ವಾಸಮಾರುತಕ್ಕೆ ಸಿಕ್ಕಿ ಕೊಂಡು ಉಸಿರನ್ನು ಎಳೆದಾಗ ಮೂಗಿನೊಳಗೆ ಹೋಗುತ್ತ ಬಿಟ್ಟಾಗ ಹೊರಗೆ ಬರುತ್ತ ಕೆಲಹೊತ್ತು ಉಸಿರನ್ನು ಬಿಡದಿರಲು ಹೊರಗೆ ಬರುವು ದಕ್ಕೆ ಸಾಧ್ಯವಿಲ್ಲದೆ ಆಂಜನೇಯನು ದಿಗಿಲುಬಿದ ಕಡೆಗೆ ಅವನ ಫಗಿನ ರಂಧ್ರ ದಲ್ಲಿ ಗಿರಿಯಂತೆ ಬೆಳದು ಉಸಿರನ್ನು ತಡೆದು ನಿಲ್ಲಿಸಲು ; ಆಗ ರಸಸಿಗೆ ಉಬ್ಬಸ ವಾದುದರಿಂದ ಬರಸಿಡಿಲು ಸಿಡಿದಂತೆ ಹೆದ್ವನಿಯಿ೦ದ ಸೀತನು, ಆಂಜನೇ ಯನು ಉಲ್ಕಾಪಾತದಂತೆ ಸಿಡಿದು ಎದುರಿಗಿದ್ದ ವಜಸ್ತಂಭಕ್ಕೆ ಒಡಿದುದರಿಂದ ಬಹುಯಾತನೆಯನ್ನನುಭವಿಸಿ ಕೋಪಗೊಂಡು ಹಲ್ಲು ಕಡಿಯುತ್ತ ಇವನನ್ನು ಕೊಲ್ಲ ಬೇಕೆಂದು ನಿಶ್ಚಯಿಸಿ ಅಲ್ಲಿ ಇಟ್ಟಿದ್ದ ಶೂಲಾಯುಧವನ್ನು ತೆಗೆದು ಕೊಂಡು ಕುಂಭ ಕರ್ಣನ ಎದೆಯನ್ನು ತಿವಿಯಲು ; ಅದುಂದ ಅವನಿಗೆ ಒಂದು ನೋಣ ಕಡಿದಪ್ಪಾ ದರೂ ನೋವಾಗಲಿಲ್ಲ, ಆ ಮೇಲೆ ಆ೦ಜನೇಯನು ನಿದ್ರಿಸುವವರನ್ನು ಕೊಲ್ಲುವದು ಶೂರರಿಗೆ ವಿಹಿತವಲ್ಲ ಎಂದು ತನ್ನೊಳಗೆ ಯೋಚಿಸಿ ತಿಳಿದುಕೊಂಡು ಮುಂದೆ ಹೋಗಿ ಅವನ ಮನೆಯಲ್ಲೆಲ್ಲಾ ಹುಡುಕಿ ಸೀತೆಯನ್ನು ಕಾಣದೆ ಅಲ್ಲಿಂದ ಹೊರಟು ಗರು ಡಧ್ವಜದಿಂದಲೂ ರತ್ನ ಖಚಿತವಾದ ವಿಮಾನಗಳಿಂದಲೂ ಮಚ್ಚೆಯ ಕಲಶಗಳಿಂದ ಪ್ರಕಾಶಿಸುತ್ತಿರುವ ವಿಭೀಷಣನ ಮನೆಯನ್ನು ಹೊತ್ತು ಸೂಕ್ಷ್ಮ ರೂಪವನ್ನು ಧರಿಸಿ ಹುಡುಕುತ್ತಿರಲಾಗಿ--.ಎಲೈ ವಾನರಾಧೀಶ್ವರನೇ, ಸೀತೆಯನ್ನು ಹುಡುಕುವ ಸ್ಥಳವು ಇದಲ್ಲವೆಂದು ಅಶರೀರವಾಣಿಯುಂಟಾಗಲು ; ಆಂಜನೇಯನು ಆ ಧ್ವನಿಯನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ನವರತ್ನ ಗಳಿ೦ದ ಕೆತ್ತಲ್ಪಟ್ಟಿರುವ ಕೋಟೆಗಳ ಸಾಲುಗಳಿಂದಲೂ ಕನಕನಿರ್ಮಿತವಾದ ಕೊತ್ತಲುಗಳಿ೦ದಲೂ* ಸುವರ್ಣಕಲಶಗ ಳಿಂದಲೂ ಬಾಲಾರ್ಕಕೋಟಿ ತೇಜೋವಿರಾಜಮಾನಗಳಾದ ದಾರಬಂಧಗಳಿಂದಲೂ ರಂಜಿಸುತ್ತಿರುವ ರಾಕ್ಷಸ ರಾಜನಾದ ರಾವಣನ ಅರಮನೆಯನ್ನು ಹೊಕ್ಕು ಸ್ವರ್ಗದ ಅರಮನೆಯನ್ನು ತಿರಸ್ಕರಿಸ ತ್ತಿರುವ ಆತನ ಸಭಾಸ್ಥಾನಕ್ಕೆ ಬಂದನು. ಆ ಸಭಾಮಂದಿರವು ಸುವರ್ಣ ದಿಂದ ನಿರ್ಮಿಸಲ್ಪಟ್ಟು ನವರತ್ನಗಳ ತೋರಣ ಗಳಿ೦ದಲೂ ಮೇಲುಕಟ್ಟುಗಳಿಂದಲೂ ಶೋಭಿಸುತ್ತಿದ್ದಿತು. ಒಂದು ಕಡೆಯಲ್ಲಿ ಭೇರಿ ಮೃದಂಗ ಡಂಕ ನಗಾರಿ ರಣಮೌರಿ ಇವೇ ಮೊದಲಾದ ವಾದ್ಯಗಳು ಭೋರ್ಗರೆ ಯುತ್ತಿದ್ದುವು. ಇನ್ನೊಂದು ಕಡೆಯಲ್ಲಿ ಗಂಧರ್ವರು ದಿನಾಂಸ್ಕರಣಗಳ ಮೇಲೆ ಕುಳಿತು ಮುತ್ತಿನ ದಿಂಬುಗಳನ್ನು ಒರಗಿಕೊಂಡು ವೀಣೆ ತಂಬೂರಿ ಸಾರಂಗ ಇವು ಮೊದಲಾದ ವಾದ್ಯಗಳನ್ನು ಬಾರಿಸುತ್ತ ಗಾನಮಾಡುತ್ತಿದ್ದರು ಮತ್ತೊಂದು ಕಡೆ ಯಲ್ಲಿ ಬಡನಡು ಬಳುಕುತ್ತಿರಲು ಹುಬ್ಬುಗಳನ್ನು ಹಾರಿಸುತ್ತ ಝರ್ತಾರಿಯ ಸೀರೆ ಗಳನ್ನು ಟ್ಟು ರತ್ನ ಕಟ ಕಾದ್ಯನೇಕಾಭರಣಗಳನ್ನು ಧರಿಸಿಕೊಂಡು ವಾರವಿಲಾಸಿನೀ ಜನರು ನರ್ತಿಸುತ್ತಿದ್ದರು ಮತ್ತು ಅಲ್ಲಿ ವಿಶ್ವಕರ್ಮನೇ ಬಡಗಿಯು, ಕುಬೇರನೇ ಬೊಕ್ಕಸದವನು, ಬೃಹಸ್ಪತಿಯೇ ಜೋಯಿಸನು, ಇಂದ್ರಾದಿದೇವತೆಗಳೇ ಸೇವಕರು. ಮತ್ತು ಅಗಿಲು ಚಂದನ ಪುಣಗು ಕಸ್ತೂರಿ ಇವು ಮೊದಲಾದ ಪರಿಮಳದ್ರವ್ಯಗಳು