ಪುಟ:ಕಥಾ ಸಂಗ್ರಹ - ಭಾಗ ೨.djvu/೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


86 ಕಥಾಸಂಗ್ರಹ ೪ ನೆಯ ಭಾಗ ಮಘಮಘಿಸುತ್ತಿರುವುವ, ಆಂಜನೇಯನು ಇಂಥ ಸಭಾಸ್ಥಾನದಲ್ಲಿ ಸುತ್ತಲೂ ನೋಡಿ ಅಲ್ಲಿಂದ ಅಂತಃಪುರಕ್ಕೆ ಹೋಗಲು ; ಅದರ ಬಾಗಿಲಲ್ಲಿ ಹುಲಿ ಕರಡಿ ಸಿವಂಗಿ ಸಿಂಗಗಳೇ ಮೊದಲಾದ ಕ್ರೂರಮೃಗಗಳ ಮುಖಗಳಂತೆ ಮುಖಗಳುಳ್ಳ ಅನೇ ಕ ರಾಕ್ಷಸರು ವಿವಿಧಾಯುಧಗಳನ್ನು ಹಿಡಿದು ಕಾದು ಕೊಂಡಿದ್ದರು. ಅಲ್ಲಿ ಲಕ್ಷಾಂತರ ಜನ ಸ್ತ್ರೀಯರು ಸಾಲುಮಂಚಗಳ ಮೇಲೆ ಹೊಳೆಹೊಳೆವ ಕಿರುದಾಡೆಗೆ ಳಿಂದಲೂ ಥಳಥಳಿಸುವ ದೀರ್ಘನಯನಗಳಿಂದಲೂ ನಿಡುದೋಳುಗಳಿಂದಲೂ ಒಪ್ಪು ತಿದ್ದರು, ಮತ್ತೊಂದು ಕಡೆಯಲ್ಲಿ ನಿಶಿತವಾದ ಕೋರೆಹಲ್ಲುಗಳಿಂದಲೂ ಹುರಿಯಾದ ಹುಬ್ಬುಗಳಿಂದಲೂ ಕರವಾದ ಶರೀರಲಕ್ಷಣಗಳಿಂದಲೂ ಅತಿ ಭಯಂಕರಾಕಾರಿಣಿ ಯರಾದ ರಾಕ್ಷಸಸ್ತ್ರೀಯರು ಮಲಗಿ ನಿದ್ರಿಸುತ್ತಿದ್ದರು. ಇಂಥ ಹೆಂಗಸರ ಗುಂಪಿನ ಮಧ್ಯದಲ್ಲಿ ಸೌಂದರ್ಯಾತಿಶಯದಿಂದ ರಂಜಿಸುತ್ತಿರುವ ಮಂಡೋದರಿಯೊಡನೆ ನೀರ್ದುಂಬಿದ ಮೇಘ ಕಾಂತಿಯಂತೆ ಶೋಭಿಸುತ್ತಿರುವ ಶುರಕಾಂತಿಯಿಂದಲೂ ನಗೆ ಮೊಗದಿಂದಲೂ ಥಳಥಳಿಸುತ್ತಿರುವ ಕುಂಡಲಿಗಳಿಂದಲೂ ಭೂರಿಭುಜದಂಡಗಳಿಂದಲೂ ಕೂಡಿದ ರಾಕ್ಷಸಾಧಿಸನಾದ ರಾವಣನು ಮಲಗಿ ನಿದ್ರಿಸುತ್ತಿದ್ದನು. ಆಗ ಆ೦ಜ ನೇಯನು-ಹೊಳೆಹೊಳೆವ ಕಮಲನೇತ್ರಗಳಿಂದಲೂ ಸಂಪಿಗೆಯ ಹೂವಿನಂತಿ ರುವ ಮೂಗಿನಿಂದಲೂ ಹವಳದಂತೆ ಕೆಂಪಾಗಿರುವ ತುಟಿಗಳಿಂದ ಮುತ್ತು ಗಳಂತಿರುವ ಹಲ್ಲುಗಳಿಂದಲೂ ಸಿಂಹದ ನಡು ವಿನಂತೆ ಸೂಕ್ಷ್ಮವಾದ ನಡುವಿನಿಂದ ಲೂ ಆಮೆಯ ಹಾಗಿರುವ ಪಾದಗಳಿಂದಲೂ ಪ್ರಕಾಶಿಸುತ್ತ ಮುತ್ತಿನ ಸೆರಗುಳ್ಳ ಝರ್ತಾರಿಯ ಸೀರೆಯನ್ನು ಟ್ಟು ನೀರಾಜಿಯ ಕುಪ್ಪಸವನ್ನು ತೊಟ್ಟು ಕೊಂಡು ನೋಡುವವರಿಗೆ ರತಿದೇವಿಯೋ ಎಂಬ ಭಾಂತಿಯನ್ನು ಹುಟ್ಟಿ ಸುತ್ತ ನಿದ್ರಿಸುತ್ತಿರುವ ಮಂಡೋದರಿಯನ್ನು ಕಂಡು ಮನಸ್ಸಿನಲ್ಲಿ ಇವಳೇ ಸೀತೆಯೆಂದು ಸಂಶಯ ಪಟ್ಟು ಕಳವಳಿಸಿ ತಾಪಗೊಂಡು ನಿಜಾಂಶವನ್ನು ತಿಳಿಯಲಾರದೆ ಒಂದು ಗಳಿಗೆಯ ಪರ್ಯ ತರವೂ ಸ್ತಬ್ಬನಾಗಿದ್ದು ಆ ಮೇಲೆ ಕೋಪವುಳ್ಳವನಾದರೂ ಜ್ಞಾನವನ್ನು ತಂದು ಕೊಂಡು ನನ್ನೊಡೆಯನು ಹೇಳಿದ ಕೆಲವು ಗುರುತುಗಳು ಈ ಸ್ತ್ರೀಯಲ್ಲಿವೆ. ಇನ್ನು ಕೆಲವು ಅಡಕವಾಗಿವೆ, ಏನು ಮಾಡಲಿ ? ಎಂದು ಮನಸ್ಸಿನಲ್ಲಿ ಯೋಚಿಸುತ್ತ ಸಮಾ ಧಾನವನ್ನು ತಂದು ಕೊಂಡು ಚೆನ್ನಾಗಿ ಪರೀಕ್ಷಿಸಿ ನೋಡಬೇಕೆಂದು ನಿಶ್ಚಯಿಸಿ ಅಣು ಮಾತ್ರವಿರುವ ದೀವಿಗೆಯ ಬೆಳಕನ್ನು ತೆಗೆದು ಕೊಂಡು ಮಂಡೋದುಯ ಸರ್ವಾಂಗ ವನ್ನೂ ನೋಡಿ ರಾಮನು ಹೇಳಿದ ಗುರುತುಗಳನ್ನೆಲ್ಲಾ ಕಂಡು ಕಾಲಿನಲ್ಲಿ ಮಾತ್ರ ಕಾಕರೇಖೆಯಿರಲು ; ಇದು ವೈಧವ್ಯ ಲಕ್ಷಣವೆಂದು ತಿಳಿದು ಅರ್ಧಸಂಶಯವನ್ನು ಬಿಟ್ಟು ನವವ್ಯಾಕರಣಪಂಡಿತನಾದ ಆಂಜನೇಯನು ಅವಳ ಮುಖದಲ್ಲಿ ಸುಧಾಂಶು ರೇಖೆಯಿಲ್ಲದಿರುವುದನ್ನು ಕಂಡು ಇವಳು ಸೀತೆಯಲ್ಲವೆಂದು ತಿಳಿದು ಅಲ್ಲಿ ಸ್ವಲ್ಪ ಸ್ಥಳವನ್ನೂ ಬಿಡದೆ ಚೆನ್ನಾಗಿ ಹುಡುಕಿ ಸೀತೆಯನ್ನು ಕಾಣದೆ ಹೊರಗೆ ಬಂದು ಕುಬೇ ರನ ಪಷ್ಟಕದಲ್ಲಿ ನೋಡಿ ಅಲ್ಲಿಯ ಸೀತೆಯಿಲ್ಲದುದರಿಂದ ಚಿಂತೆಯನ್ನು ಹೊಂದಿ ಕಂದಿದ ಮುಖವುಳ್ಳವನಾಗಿ ಕಣ್ಣೀರನ್ನು ಸುರಿಸುತ್ತ- ಸೀತೆಯು ಏನಾದಳೋ ಹಾ ! ಎಂದು ಹಂಬಲಿಸಿ ಹಲುಬುತ್ತ ಅಲ್ಲಿಂದ ಹೊರಟು ಹುಡುಕುತ್ತ ಬರುತ್ತಿರಲು ;