ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾ ಪಟ್ಟಣವನ್ನು ಸುಟ್ಟು ದು 87 ಆ ಪುರದ ಮಧ್ಯದಲ್ಲಿ ನಾನಾವಿಧವಾದ ಪತಾಕೆಗಳಿಂದಲೂ ಸುರುಚಿರಕಲ ಶಾಳಿಗಳಿಂದಲೂ ಕೂಡಿ ಹದಿನಾರು ಯೋಜನವಳ್ಳುದಾಗಿ ಶೋಭಿಸುತ್ತ ಮೇರುಶಿಖ ರದಂತಿರುವ ಉಪ್ಪರಿಗೆಯನ್ನು ಕಂಡು ಬೆರಗಾಗಿ ಉದಯಾಚಲವನ್ನೇರುವ ಸೂರ್ಯ ನಂತೆ ಅದರ ಮೇಲೆ ಹಾರಿ ಕುಳಿತುಕೊಂಡು ಎಲ್ಲಿ ನೋಡಿದರೂ ಸೀತೆಯು ಸಿಕ್ಕಲಿಲ್ಲ ವಲ್ಲಾ ಎಂದು ಯೋಚಿಸುತ್ತ-ಘೋರಕರ್ಮಿಯಾದ ರಕ್ಕಸನು ಸೀತೆಯನ್ನು ಏನು ಮಾಡಿದನೋ ? ನಾನು ಬ್ರಹ್ಮನಂದನನಿಗೂ ರವಿನಂದನನಿಗೂ ರಘುನಂದನನಿಗೂ ಏನು ಹೇಳಲಿ ? ಎಲ್ಲರೂ ನನ್ನ ಬರುವಿಕೆಯನ್ನೇ ನಿರೀಕ್ಷಿಸಿಕೊಂಡಿದ್ದಾರಲ್ಲಾ! ನಾನು ಹೋಗಿ ಸೀತೆಯು ಸಿಕ್ಕಲಿಲ್ಲ ವೆಂದು ಹೇಳಿದ ಕೂಡಲೆ ರಾಮನು ಪ್ರಾಣಬಿಡು ವನು. ಅಗ್ರ ಜಮ್ಪತಿವ್ಯಸನದಿಂದ ಲಕ್ಷ್ಮಣನೂ ಆತನ ಗತಿಯನ್ನೇ ಹೊಂದು ವನು. ಅವರಿಬ್ಬರೂ ಸತ್ತ ಮೇಲೆ ಮಹಾವ್ಯಸನವನ್ನು ಸಹಿಸಲಾರದೆ ಸುಗ್ರೀವನೂ ಸಾಯುವನು, ಈತನ ಮರಣವಾರ್ತೆಯನ್ನು ಕೇಳಿದರೆ ಆತನ ಪತ್ನಿ ಯರೂ ಆತನ ಮಾರ್ಗವನ್ನೇ ಹಿಡಿಯುವರು. ಈ ಕಾರಣದಿಂದ ಅಂಗದನೂ ಪ್ರಾಣಗಳನ್ನು ತೊರೆದು ಕೊಳ್ಳುವನು. ಈ ಸಂಗತಿಯನ್ನು ಭರತಶತ್ರುಘ್ನರು ಕೇಳಿದರೆ ಆ ಕ್ಷಣದಲ್ಲಿಯೇ ಅಸುವನ್ನು ನೀಗುವರು. ತದನಂತರದಲ್ಲಿ ಕೌಸಲ್ಯಾ ಕೈಕೇಯಿ ಸುಮಿತ್ರೆಯರು ಜೀವವನ್ನು ಕಳಕೊಳ್ಳುವರು. ಇಂಥವರೆಲ್ಲರೂ ಸತ್ತು ಹೋದ ಮೇಲೆ ನಾವಿದ್ದು ಫಲವೇನೆಂದು ಸಾಕೇತನಗರದ ಪ್ರಧಾನಿಗಳೂ ಪುರನಿವಾಸಿಗಳೂ ಮರಣವನ್ನು ಹೊ೦ದುವರು. ಈ ಮಹಾ ವಿಪತ್ತಿಗೆ ಎನು ಮಾಡಬೇಕು ? ನನ್ನೊಬ್ಬನಿಂದ ಇಷ್ಟು ಪ್ರಳಯವಾಗುವುದಲ್ಲಾ! ಇಂಥ ಭಯಂಕರಕೃತ್ಯಗಳನ್ನು ನೋಡುವುದಕ್ಕಿಂತ ಮೊದ ಲು ನಾನೇ ಜೀವಹತ್ಯವನ್ನು ಮಾಡಿಕೊಳ್ಳುವುದು ಉತ್ತಮವೆಂದು ಯೋಚಿಸಿ ಪುನಃ ಧೈರ್ಯವನ್ನು ತಂದು ಕೊಂಡು--ನಾನು ಇಷ್ಟು ಮಾತ್ರಕ್ಕೇ ಪ್ರಾಣಗಳನ್ನು ತೊರೆದು ಕೊಳ್ಳುವುದರಿಂದ ಸ್ವಾಮಿ ಕಾರ್ಯವನ್ನು ನಿರ್ವಂಚನೆಯಿಂದ ಮಾಡಿದಂತಾಗುವ ದಿಲ್ಲ. ಈಗ ನಾನು ಯಮನ ಪಟ್ಟಣಕ್ಕೆ ಹೋಗಿ ಆ ಯಮನನ್ನೇ ಹಿಡಿದು ಶಿಕ್ಷಿಸಿ ದರೆ ಆತನಾದರೂ ಸೀತೆಯನ್ನು ತೋರಿಸುವನು. ಹಾಗಿಲ್ಲದಿದ್ದರೆ ಬ್ರಹ್ಮಲೋಕಕ್ಕೆ ಹೋಗಿ ಬ್ರಹ್ಮನನ್ನು ಹಿಡಿದು ಶಿಕ್ಷಿಸಿದರೆ ಆತನಾದರೂ ಸೀತೆಯನ್ನು ತೋರಿಸುವನು. ಅಥವಾ ಇಂದ್ರಾದಿ ದೇವತೆಗಳನ್ನು ಹಿಂಗಟ್ಟು ಕಟ್ಟಿ ಕೆನ್ನೆಗೆ ಹೊಡೆದು ಕೇಳಿದರೆ ಅವರಾದರೂ ತೋರಿಸುವರು. ಕಡೆಗೆ ಯಾರೂ ತೋರಿಸದೆ ಹೋದ ಪಕ್ಷದಲ್ಲಿ ಈ ಲಂಕಾದುರ್ಗವನ್ನೇ ನನ್ನ ಬಾಲದಿಂದ ಸುತ್ತಿ ಕಿತ್ತೆತ್ತಿ ಕೊಂಡು ಹೋಗಿ ರಾಮನ ಬಳೆಯಲ್ಲಿರಿಸಿಬಿಡು ವೆನು, ಆ ಮೇಲೆ ಆತನೇ ಸೀತೆಯನ್ನು ಹಡುಕಿಕೊಳ್ಳಲಿ ಎಂದು ಮನಸ್ಸಿನಲ್ಲಿ ನಿರ್ಧರಿಸಿ ಲಂಕಾಸಟ್ಟಣಸಮೇತವಾದ ತ್ರಿಕೂಟಾಚಲವನ್ನೇ ಕಿತ್ತು ಕೊಂಡು ಹೋಗುವುದಕ್ಕೆ ಉದ್ಯುಕ್ತನಾಗಲು ; ಆಗ ಅಶರೀರವಾಣಿಯುಎಲೈ ವಾನರಶ್ರೇಷ್ಠನೇ ನೀನು ಈ ಪರ್ವತವನ್ನು ಕೀಳಬೇಡ ; ನಿನ್ನ ಮನೋರಥವು ಸಿದ್ದಿಯಾಗುವುದು ಎಂದು ನುಡಿಯಲು ; ಆಗ ಆಂಜನೇಯನು ಸಂತ.ಷ್ಟನಾಗಿ ಸುತ್ತಲೂ ನೋಡುತ್ತಿರುವಷ್ಟರಲ್ಲಿ ಸೀತೆಯನ್ನು ತೋರಿಸುವುದಕ್ಕಾಗಿ ಬಂದನೋ