ವಿಷಯಕ್ಕೆ ಹೋಗು

ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಕೃತಿ ಇಷ್ಟು ಬೇಗ ಖಂಡಿತವಾಗಿಯೂ ಹೊರಗೆ ಬರುತ್ತಿರಲಿಲ್ಲವೆಂದು ವಿನಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಕನಕದಾಸರು ನನ್ನ ಮೆಚ್ಚುಗೆಯ ಸಂತ ಕವಿಗಳಲ್ಲೊಬ್ಬರು. ಅವರಿಗೆ ಕೈಂಕಯ್ಯ ಸಲ್ಲಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಕ್ಕಾಗಿ ಕರ್ನಾಟಕ ಸರ್ಕಾರದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಸಂಪಾದಕಮಂಡಲಿಯ ಸದಸ್ಯ ಮಿತ್ರರು ತುಂಬ ಪ್ರೀತಿಯಿಂದ ಸೌಜನ್ಯದಿಂದ ನನ್ನೊಡನೆ ಸಹಕರಿಸಿದ್ದಾರೆ. ಅವರೆಲ್ಲರೂ ಕನ್ನಡನಾಡಿನ ಖ್ಯಾತ ವಿದ್ವಾಂಸರು, ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯದ ನಿರ್ದೆಶಕರಾದ ಶ್ರೀ ಐ. ಎಂ. ವಿಠಲಮೂರ್ತಿಯವರು ತರುಣರು, ಉತ್ಸಾಹಶೀಲರು, ದಕ್ಷರು, ಸುಸಂಸ್ಕೃತರು ; ಈ ಇಲಾಖೆಗೆ ಹೇಳಿ ಮಾಡಿಸಿದಂಥವರು. ಈ ಗ್ರಂಥ ಆದಷ್ಟು ಬೇಗ ಬರಬೇಕೆನ್ನುವ ದೃಷ್ಟಿಯಿಂದ ಮಂಡಲಿಗೆ ಎಲ್ಲ ಸಹಕಾರ ನೀಡಿದರು. ಸಹಾಯಕ ನಿರ್ದೆಶಕರೂ ಸ್ವಯಂ ಸಾಹಿತಿಗಳೂ ವಿವೇಕಿಗಳೂ ಆದ ಶ್ರೀ ಕಾ. ತ. ಚಿಕ್ಕಣ್ಣನವರ ಸಹಾಯ ಸಹಕಾರಗಳಿಂದ ಮಂಡಲಿಯ ಕೆಲಸ ಸುಸೂತ್ರವಾಗಿ ನಡೆಯಿತು. ಜಂಟಿ ನಿರ್ದೆಶಕರಾದ ಶ್ರೀ ದೇವರಸಯ್ಯನವರ, ಉಪನಿರ್ದೇಶಕರಾದ ಶ್ರೀ ಎಸ್. ವಿಶ್ವನಾಥ್ ಅವರ ಸೌಜನ್ಯ ಕಾರ್ಯೋತ್ಸಾಹ ಯಾವಾಗಲೂ ನೆನಪಿನಲ್ಲುಳಿಯು ವಂಥವು, ನಿರ್ದೆಶಕರ ಆಪ್ತ ಸಹಾಯಕಿ ಮೊದಲುಗೊಂಡು, ನಿರ್ದೇಶನಾಲಯದ ಸಿಬ್ಬಂದಿವರ್ಗದ ಜನರ ಮನಃಪೂರ್ವಕವಾದ ಸಹಾಯವನ್ನು ನಾನೆಂದೂ ಮರೆಯಲಾರೆ. ಇಂಥ ಬೃಹದಂಥ ವನ್ನು ಒಂದು ತಿಂಗಳಲ್ಲಿ ಅಚ್ಚುಕಟ್ಟಾಗಿ ಮುದ್ರಿಸುವುದೊಂದು ಸಾಹಸವೇ ಸರಿ. ಶ್ರೀ ಮೀರಾ ಪ್ರಿಂಟರ್‌ನ ಮಾಲೀಕರಾದ ಶ್ರೀ ಕೆ.ಪಿ. ಪುಟ್ಟಸ್ವಾಮಿಯವರು ಹಗಲಿರುಳು ದುಡಿದು ಈ ಅದ್ಭುತವನ್ನು ಸಾಧಿಸಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯ ಶ್ರೀ ಶಾರದಾಪ್ರಸಾದರು ಕರಡು ತಿದ್ದುವಲ್ಲಿ ತುಂಬ ಶ್ರಮ ವಹಿಸಿದ್ದಾರೆ. ಮಂಡಲಿಯ ಸದಸ್ಯರಲ್ಲದಿದ್ದರೂ, ನನ್ನ ಮೇಲಣ ಪ್ರೀತಿಯಿಂದ ಪ್ರಸಿದ್ಧ ಸಂಶೋಧಕರಾದ ಶ್ರೀ ಹ. ಕ, ರಾಜೇಗೌಡರು ನಾನಾ ರೀತಿಯಲ್ಲಿ ನನಗೆ ಸಹಾಯ ಮಾಡಿದ್ದಾರೆ. ಶ್ರೀ ಮೈ.ನಾ. ಶರ್ಮಾ ಅವರು ಸುಂದರವಾದ ಮುಖಪುಟವನ್ನು ರಚಿಸಿಕೊಟ್ಟಿದ್ದಾರೆ. ಈ ಎಲ್ಲ ಮಹನೀಯರಿಗೂ, ನಾನು ಹೃತೂರ್ವಕ ಧನ್ಯವಾದಗಳನ್ನರ್ಪಿಸುತ್ತೇನೆ. ೨-೨-೧೯೯೦ ಮೈಸೂರು ದೇ. ಜವರೇಗೌಡ