ಪುಟ:ಕನ್ನಡದ ಬಾವುಟ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಟ್ಟಲಗಣ್ಣಿಲಿ ದಿಟ್ಟಿಸಿ ನೋಡ್ಯಾರ ಸಿಟ್ಯಾಕೊ ರಾಯ ನನಮ್ಯಾಲ ನಾ ಅಂಥ ಹುಟ್ಟಿ ಸ್ಯಾಡವರ ಮಗಳಲ್ಲ ರಾಯ ಬರತಾರಂತ ರಾತ್ರಿಯಲಿ ನೀರಿಟ್ಟ ರನ್ನ ಬಚ್ಚಲಕ ಮಣಿಹಾಕಿ 1 ಕೇಳೇನ ಸಣ್ಣವಳಮ್ಯಾಲ ಸಂವತ್ಯಾಕ ಯಾಲಕ್ಕಿಕಾಮ್ ಸುಲಿದು ಯಾವಡಗಿ ಮಾಡಲಿ ಊರಿಗೊಗ್ರಾರ ರಾಯರು | ಬಾರದೆ ಯಾವಡಗಿ ಮಾಡಿ ಫಲವೇನ ಅಳುವ ಕಂದನ ತುಟಿಯು ಹವಳದ ಕುಡಿಯಂಗ ಕುಡಿಹುಬ್ಬು ಬೇವಿನೆಸಳಂಗ 1 ಕಣೋಟ ಸಿವನ ಕೈ ಯಲಗು ಹೊಳೆದಂಗ ತಾಯಿದ್ರ ತವರೆಚ್ಚು ತಂದಿದ್ರ ಬಳಗ್ಗೆ ಚ್ಚು ಸಾವಿರಕೆ ಹೆಚ್ಚು ಪತಿಪುರುಷ ! ಹೊಟ್ಟಿಯ ಮಾಣಿಕದ ಹರಳು ಮಗ ಹೆಚ್ಚು ನನ್ನ ಅಂಗಳದಾಗ ಮಲ್ಲಿಗಿ ಗಿಡ ಹುಟ್ಟಿ ಝುಲ್ಲಿಸಬ್ಯಾಡೊ ಗಿಣಿರಾಮಾ | ನಿಮ್ಮಂಥ ಬಾಲರೊಗ್ಯಾರ ಝಳಕಾಕ ಬಾಲಕರಿಲ್ಲದ ಬಾಲಿದ್ಯಾತರ ಜನ್ಮ ಬಾಡೀಗಿ ಎಷ್ಟು ದುಡಿದಂಗ | ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂಗ ಕಂದನ ಕುಡು ಶಿವನೆ ಬಂಧನ ಬಡಲಾರೆ ಹಂಗೀನ ಬಾನ ಉಣಲಾರೆ ! ಮರ್ತ್ಯದಾಗ ಬಂಜೆಂಬ ಶಬುದ ಹೊರಲಾರೆ ೨. ಗೋವಿನ ಹಾಡು ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದೊ ಳಿರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು