ಪುಟ:ಕನ್ನಡದ ಬಾವುಟ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡದ ಸೊಂಪು ಸವಿಯುಗುವ ರಸ ಕಾವ್ಯಗಳ ಬರೆವ, ಬರೆಯಿಸುತಿರುವ ಸುಂದರಿಯರೇ, ಆರ್ ಮಹಿಳೆಯರೇ, ಸ್ವಾಗತವು ನಿಮಗಿಂದು ಮೈಸೂರಿಗೆ ! ನಾವೆಲ್ಲರೊಡಗೂಡಿ, ಒಡನಾಡಿ, ಕಲೆತು, ಕನ್ನಡದ ಸೇವೆಯಲ್ಲಿ ನಮ್ಮ ಮೈ ಮರೆತು, ಕುಂದು ಕೊರತೆಗಳೊಂದಕಿಂಬಿಲ್ಲದಂತೆ, ನಮ್ಮ ಸಖ್ಯದ ಮೊಗ್ಗು ಬಿರಿದರಳುವಂತೆ, ದೇವಿ ಕರುಣಿಸಲಿ ವರವ !- ಕನ್ನಡದ ದೇವಿ ಕೈಕೊಳಲಿ ಫಲವ ! ಕನ್ನಡಿಗ ಸೋದರರೆ, ಸ್ವಾಗತವು ನಿಮಗೆ ! ಕನ್ನಡದ ಸಿರಿಬಳ್ಳಿ ಹೊಮ್ಮಿಸಿರುವರಳುಗಳೆ, ಇಂದು ಸ್ವಾಗತವು ನಿಮಗೆ !-ನಿಮಗಾಗಿ ಕಾದಿರುವ ಮೈಸೂರಿಗೆ ! ತೀನಂ. ಶ್ರೀಕಂಠಯ್ಯ ೩. ಮೈಸೂರು ಮಕ್ಕಳು ನಿಮ್ಮ ನಾಡಾವುದು ? ಮೈಸೂರು. ನಿಮೂರದಾವುದು ? ಮೈಸೂರು. ಕನ್ನಡದ ಕಣ್ಣದು, - ಮೈಸೂರು. ನಾಲುಮಡಿ ಕೃಷ್ಣನ ಮೈಸೂರು. ಅಲ್ಲೆಲ್ಲಿ ನೋಡಿದರು ಬಾನ ಕರೆಯಲಿ ಹುದುಗಿ ಕಾರಮುಗಿಲಂತಿಹುವು

  • ಬೆಟ್ಟ ಹಬ್ಬಿ ; ತೆರೆ ಎದ್ದು ಬಿದ್ದು ಬಹ ಬಯಲಲ್ಲಿ ಹಳ್ಳಿಗಳು, ತಾವರೆಯ ಕೆರೆ, ತೋಟ,

ಹೊಲದ ಹಸುರು ;