ಪುಟ:ಕನ್ನಡದ ಬಾವುಟ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦. ಕನ್ನಡಿಗರ ತಾಯಿ ತಾಯೆ ಬಾರ ಮೊಗವ ತೋರ, ಕನ್ನಡಿಗರ ಮಾತೆಯೆ ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ ! ನಮ್ಮ ತಪ್ಪನೆನಿತೊ ತಾಳೊ, ಅಕ್ಕರೆಯಿಂದೆಮ್ಮನಾಳ್ವೆ; ನೀನೆ ಕಣ್ ನಮ್ಮ ಬಾಳ್ವೆ, ನಿನ್ನ ಕರೆಯಲಮ್ಮೆವುತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು. ಹಣ್ಣನೀವ ಕಾಯನೀವ ಪರಿ ಪರಿಯ ಮರಂಗಳೊ, ಪತ್ರಮಾವ ಪುಷ ಮೂಾವ ಲತೆಯ ತರತರಂಗಳೊ, ತೆನೆಯ ಕೆನೆಯ ಗಾಳಿಯೊ, ಖಗಮೃಗೋರಗಾಳಿಯೊ, ನದಿ ನಗರ ನಗಾಳಿಯೊ ! ಇಲ್ಲಿಲ್ಲದುದುಳಿದುದೆ ?ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ ? ಬುಗರಿಯಾಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ? ಕನ್ನ ಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ ? ಪಾಂಡವರಜ್ಞಾತಮಿದ್ದ, ವಲಲಂ ಕೀಚಕನ ಗೆದ್ದ, ಕುರುಕುಲ ಮು೦ಗದನಮೆದ್ದ ನಾಡು ನೋಡಿದಲ್ಲವೇ ? ನಂದನಂದನನಿಲ್ಲಿ೦ದ ಸಂದಿಗಯ್ದನಲ್ಲವೇ ? ಶಕವಿಜೇತನಮರ ಶಾತವಾಹನಾಖ್ಯನೀ ಶಕಂ ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ! ಚಳುಕ್ಯ ರಾಷ್ಟ್ರಕೂಟರೆಲ್ಲಿ, ಗಂಗರಾ ಕದಂಬರೆಲ್ಲಿ, ಹೊಯ್ಸಳ ಕಳಚುರ್ಯರೆಲ್ಲಿ, ವಿಜಯನಗರ ಭೂಪರು ಆಳರಿಲ್ಲಿಯಲ್ಲದಲ್ಲಿ ತಾಯೇ ಮೇಣಲೂಪರು ?