ಪುಟ:ಕನ್ನಡದ ಬಾವುಟ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೭ ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ ? ಅವರು ಸೋಲ್ ಸಾವರಿಯರು ! ಅವರು ಕಡುಗಲಿ ಗರಿಯರು ! ಅವರೆ ಕೊಡಗಿನ ಹಿರಿಯರು! ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್, ಹೆಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗೆ ದೋಲ್, ಬೊಮ್ಮಗಿರಿಯಿಂ ಪುಷ್ಪಗಿರಿ ಪರ್ಯ೦ತ ಬೆಳೆದೀ ದೇಶವು ಧರ್ಮ ದಾನದ ಕಟ್ಟು ಕಟ್ಟಳೆ ರೀತಿ ನೀತಿಯ ಕೋಶವು ! ನಮ್ಮ ಕೊಡಗಿದು ಜಮ್ಮದು ; ಜಮ್ಮ ಕೊಡಗಿದು ನಮ್ಮದು ; ನಮ್ಮೊಡಲ್ ಬಿಡಲಮ್ಮದು ! ಇದು ಅಗಸ್ಯನ ತಪದ ಮಣೆ, ಕಾವೇರಿ ತಾಯ ತವರ್ಮನೆ, ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದರವರ್ಮನೆ ! ಇದಕೊ ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು ! ಇದೆ ! ಇದೋ ! ಇಲ್ಲುರುಳ ಹಾಲೇರಿಯರ ಬಲಗಿರಿಶೃಂಗವು ! ವಿದಿಯ ಮಾಟದ ಕೊಡಗಿದು ! ಮೊದಲೆ ನಮ್ಮದು, ಕಡೆಗಿದು ಕದಲದೆಮ್ಮನು ; ಬೆಡಗಿದು. ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿ? ಸುಮ್ಮನಿತ್ತರೊ ದಟ್ಟಿ ಕುಪ್ಪಸ ? ಹಾಡುಹುತ್ತರಿಗೇಳಿರಿ ! ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ ! ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ ! ನೆಮ್ಮದಿಯನಿದು ತಾಳಲಿ ! ಅಮೆಯಾ ಬಲ ತೋಳಲಿ ! ನಮ್ಮ ಕೊಡಗಿದು ಬಾಳಲಿ ! ಕವಿಶಿಷ್ಯ (ಪಂಜೆ ಮಂಗೇಶರಾವ್) ೨೧. ತೆಂಕಣ ಗಾಳಿಯಾಟ ಬರಲಿದೆ ! ಅಹಹಾ! ದೂರದಿ ಬರಲಿದೆಬುಸುಗುಟ್ಟುವ ಪಾತಾಳದ ಹಾವೊ ? ಹಸಿವಿನ ಭೂತವು ಕೂಯುವ ಕೂವೊ ?