ಪುಟ:ಕನ್ನಡದ ಬಾವುಟ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೨ ಉಳಿದ ಊರು ಬರಿಯ ಜನದ ಬಾಳು ಬೀಳು, ಕೋಗಿಲೆ ಎಲರ ಮಲರ ಕಂಪು ಸೊಂಪು ಮೇಳವಿಸಿದ ತೊ೦ಟವು. ಪಾರಿವಗಳ ಕೂಜನದ ಗಿಳಿಯ ನಲವ ಕೂಗಿನ, ನೂರು ತೆರನ ಹಕ್ಕಿಯ ಉಲಿವ ಮೇಳ ಕೋಗಿಲೆ. ಹೇರಿಳೆ ಮಲ್ಲಿಗೆ ಜೇನುಹೂವ ಬಳ್ಳಿಯ ಬೇರಿನಿಂದ ಕಾವ ಹಲಸ. ತಾಣ ನಮ್ಮ ಕೋಗಿಲೆ. ನನ್ನ ಜನದ ಮನದ ನಯ - ಸಂತಸವನ್ನು ಸಾರುವ ಚಿನ್ನ ದಂತ ಹೆಸರ ಮೆರೆವ ಶಾಂತಿಯೋಣಿ ಕೋಗಿಲೆ. ಕೋಗಿಲೆ ! ಕೋಗಿಲೆ ! ಎಂತ ಹೆಸರು ಊರಿಗೆ ! ಹೋಗಿ ನೋಡು, ಉರನು, ಶಾಂತಿಯೋಂದು ನೆಲೆಯನು. ಶ್ರೀನಿವಾಸ (ಮಾಸ್ತಿ ವೆಂಕಟೇಶ ಐಯಂಗಾರ್) ೨೫. ಶಿವನಸಮುದ್ರ ಗಿರಿಯ ಕೆಲದಿ ಬನದ ನಡುವೆ ಝರಿಯ ತೆರದಿ ಸುಳಿದು ಬರುತ್ತೆ ತಲದ ಶಿಲೆಯನಿರಿದು ಕೊರೆದು ಕೆಲದ ನೆಲವನರೆದು ಮುರಿದು ವಿಮಲ ಜಲದ ವಿಪುಲಧಾರೆಯನ್ನು ತಲಹರಿಯಂತೆ ತೋರೆ ದಣಿವ ಕಳೆಯುವೆಲರ ಬೀರಿ ಮೃದುಲ ರವದಿ ಮುಂದೆ ಸಾರಿ ಅತ್ಯಲತ ಸುಳಿದು ಸುತ್ತಿ ಇತ್ತಲಿತ್ತ ಮೆಲ್ಲನೆ ಅಲ್ಲಿ ಬಳುಕುತಿಲ್ಲಿ ಬಾಗಿ ಅಲ್ಲಿ ಬಳಸುತ್ತಿಲ್ಲಿ ಸಾಗಿ