ಪುಟ:ಕನ್ನಡದ ಬಾವುಟ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೫ ಹುಣ್ಣಿಮೆಯ ದಿನದಲ್ಲಿ ಪೂರ್ವ ದಿಗ್ಗೇಶದಲಿ, ದೂರ, ಬಹು ದೂರದಲಿ ಮಬ್ಬಿನ ದಿಗಂತದಲಿ ದುಂಡಾಗಿ, ಕೆ೦ಪಾಗಿ, ಸುಂದರ ಸುಧಾಕರನು ಮೂಡಿ ಮೇಲೇಳುತಿರೆ, ಸುತ್ತಲಿಹ ಬಯಲುಗಳ ಹಸುರಾದ ಹೊಲಗಳನು ಅಲ್ಲಲ್ಲಿ ಮೆರೆಯುತಿಹ ಬಿತ್ತರದ ಜಲಗಳನು ಕೌಮುದಿಯು ಮುತ್ತುತಿರೆ, ಚಂದಿಕೆಯು ಬೆಳಗುತಿರೆ, ಬೆ೦ಗಳೆಸೆಯುತಿರೆ, ಮೌನ ಮಿತಿಮಾರುತಿರೆ, ಧ್ಯಾನ ಬಗೆವುಗುತಲಿರೆ, ನಿಂತಿಲ್ಲಿ ನೇಹಿಗನೆ ಚೆಲುವ ನೋಡು ! ತಾರೆಗಳ ದಿಬ್ಬಣವು ಗಗನದಿಂದೈ ತಂದು ಬೆಟ್ಟ ದುದಿಯಲಿ ತಳುವಿ ಸೋಪಾನಗಳನಿಳಿದು ತಪ್ಪಲಲಿ ಮೇಳವಿಸಿ ಕವಿದು ಕಿಕ್ಕಿರಿದಂತೆ, ಬುವಿ ಬೆಸಿಯಾದಂತೆ ಚುಕ್ಕಿಗಳ ತಿಂತಿಣಿಯ ತೆಕ್ಕನೆಯೆ ಹೆತ್ತಂತೆ, ಸರ್ ನೆಲಕಿಳಿದಂತೆ, ಬಾಳೆಗೆ ಬಿದ್ದಂತೆ ನೂರಾರು ದೀಪಗಳು ಮಿಣುಕುತಿಹ ಸೊಡರುಗಳು, ಸಾಲಾಗಿ, ಡೊಂಕಾಗಿ,