ಪುಟ:ಕನ್ನಡದ ಬಾವುಟ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೪ ಪುಣ್ಯನಾಗುವೆ ಇಲ್ಲಿ ; ಪೂರ್ಣನಾಗುವೆ ಇಲ್ಲಿ ; ಬೆಟ್ಟದಲ್ಲಿ. ಬೆಂಗದಿರ ಮುಳುಗುತಿರೆ ಬೈಗುಗೆಂಪಳಿಯುತಿರೆ, ಮುಚ್ಚಂಜೆ ಮುಸುಗುತಿರೆ ಕತ್ತಲೆಯು ಕವಿದುಬರೆ ಪಯಣಿಗನೆ, ಬಾ, ಇಲ್ಲಿ ನಿಂತು ನೋಡು ! ಮೂಡಲನು, ಪಡುವಲನು, ತೆಂಕಲನು, ಬಡಗಲನು, ಗಗನವನು, ಭೂಮಿಯನು, ಮನದಣಿಯೆ, ಕಣ್ ತಣಿಯೆ, ಎದೆಯರಳಿ ಮೈಮರೆಯೆ, ತೂಣಗೊಂಡವನಂತೆ ನಿಂತು ನೋಡು ! ಕಂಬನಿಗಳಿಳಿಯುತಿರೆ, ಮೈನವಿರು ನಿಮಿರುತಿರೆ, ಎದೆಯಲರು ಅರಳುತಿರೆ, ಮೇಣಂತರಂಗದಲಿ ಹೊಸ ಬೆಳಕು ಮೂಡಿಬರೆ, ಬಣ್ಣನೆಗೆ ಬಾರದಿಹ ಚೆಲುವನವಲೋಕಿಸಲು ಮಾತು ಮೈದೆಗೆಯುತಿರೆ, ಬಾಳೆಲ್ಲ ಹಿಗ್ಗಿ ಬರೆ, ದೇಹಪಂಜರದಲ್ಲಿ ಜೀವ ಹೋರಾಡುತಿರೆ, ಬಾ ಇಲ್ಲಿ, ನೇಹಿಗನೆ, ಮೌನದಲಿ ಮಮತೆಯಲಿ ನಿಂತು ನೋಡು !