ಪುಟ:ಕನ್ನಡದ ಬಾವುಟ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೯ ಹಕ್ಕಿ ಹೂತಳಿರುಗಳ ಹರಡು ಸೌಂದರ್ಯಗಳ ಸುಗಿ ಸಂಭಮದೊಳಾಳಿ ಬನ್ನಿ ಮಧುಮಾಸದೀ ಸವಿಯ ಬೆಡಗು ಹೋಹುದು ಬೇಗ ನಡೆವಾಗ ಇದನುಣಲು ಓಡಿಬನ್ನಿ , ವಿ. ಸೀ. (ವಿ. ಸೀತಾರಾಮಯ್ಯ) ೨೮. ಮಡಿಕೇರೀಲಿ ರತ್ನ ಮಡಿಕೇರೀಲಿ ರತ್ನ ಕಂಡಾ ಒಸಾ ಮತ್ನ, * ಮಡಿಕೇರೀಲಿ ಮಡಿಕೆ ಯಂಡ ಈರ್ದಿದ್ ಅಲೀಗ್ ಓದೂ ದಂಡ ) ಅ೦ದಿ ರತ್ನ ಪಡಕಾನೇಗೆ ಒಂಟ, ಬೆಟ್ಟದ ನೆತ್ತಿ ಮೇಗೆ ಓಯ್ತಿದ್ದ೦ಗೆ ನಿಂತ ! ಕಲ್ಲಾದಂಗೆ ಕುಂತ ! ಸುತ್ತ ಸಾಯೋ ಬಿಸಿಲಿನ್‌ ಚಾಪೆ ! ಅಲ್ಲಲ್ಲೆ ಒಸಿ ನೆರಳಿನ್ ತೇಪೆ ! ಅಲೆಯಲೆಯಾಗಿ ಬಿಸಿಲಿನ್ ಜೊತೆಗೆ ಸುತ್ತಿನ್ ಗುಡ್ಡಗೊಳ್ ಕುಣದ‌ ಮೆತ್ತೆ ಮನಸೀಗ್ ಅರ್ಸ ತರ್ತ ರತ್ನ ಯೆಂಡ ಮರ್ತ ! * ಮುದುಕರ್ ಸಾವೇ ನೋಡಾಕ್, ಚಂದ! ಅಂದ್ರೆ ಸೂರ್ಯ ಸಾಯಿ೦ದ * ಸಾಯೋ ಮುದಕ ಸಂಜೆ ಸೂರ್ಯ ನೆಗತ ನಿಲ್ಲೋಕ್ ಇನ್ ಕಾರ್ಯ? ಅ೦ತ ಇ೦ದಕ್ ತಿರ್ಗಿ ನೋಡೋ - ಬತ್ತು ಗಿರ್ಕಿ ! ದೇವರದೊಂದು ಚೆಂದದ್ ಸೋತ್ರ ಕೊಡಗಿನ್ ಮೇಗಿನ್ ಒಂದ್ ನಕ್ಷತ್ರ ಕೊಡಗಿನ್ ಒಂದ್ ಊಗಾಳೀಲ್ ತೇಲ ಬಂದಂಗಿದ್ದು ಚಿತ್ರ ಕಾಲ್ಯಾನ್