ಪುಟ:ಕನ್ನಡದ ಬಾವುಟ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೫ “ ನಿನ್ನ ಮಾತಿನಲಿಹುದು ಒಡಪಿನಂದ.' * ನನ್ನ ಹತ್ತಿರದೊಂದೆ ಉಳಿದಿಹುದು ಕ೦ದ. ” * ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು ? “ಸಾಜವಾದರು ಪಕ್ಷವಿದು ವದ್ಯವಹುದು.” * ಯಾವುದಾದರ ನಾಡದೇವಿಯೇ ನೀನು ?? * ಭಾವುಕರ ಕಂಗಳಿಗೆ ದೇವಿಯೇ ನಾನು.” * ಈಗ ಬ೦ದಿಹುದೇಕೆ ಏನು ಬೆಸನ ? ” * ಯೋಗವಿಲ್ಲದೆ ತಿಳಿಯದೆನ್ನ ವೆಸನ ! ? * ಹಾದಿ ಯಾವುದು ಹೇಳು ಯಾವ ಯೋಗ ? ? * ಆದಿ .ಅಂತವು ಇಲ್ಲದಂಥ ತ್ಯಾಗ! * ಬೇಡ ಬಂದಿಹೆ ಏನು ಏನಾದರೊಂದು ? ) * ಬೇಡಿದರೆ ಬೇಡಿದುದ ಕೊಡುವೆಯಾ ಇಂದು ? ? * ಅಹುದು ಕೊಡುವೆನು ಎಂದು ನಾನೆನ್ನ ಬಹುದೇ ? ? * ಬಹುದುಗಿಹುದಿನ ಶಂಕಿ ವೀರನಹುದೇ ? ) * ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ. ? * ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ.' * ಇಲ್ಲೆನ್ನ ಲಾರೆ ನಾನಹುದೆನ್ನ ಲಮ್ಮೆ, * ಬಲ್ಲವರು ದೈವವನು ಪರಿಕಿಸುವರೊಮ್ಮೆ.” * ಚಂಡಿ ಚಾಮುಂಡಿ ಪೇಳ್ ಬೇಕಾದುದೇನು ?? * ಗಂಡುಸಾದರೆ ನಿನ್ನ ಬಲಿಕೊಡುವೆಯೇನು ??

ಮನವು ನಡುಗಿತು ತನುವು ನವಿರಿಗೊಳಗಾಯ್ತು; ನೆನವು ನುಗ್ಗಿ ತು- ಹೊರಗೆ ಕಂಡೆ– ಬೆಳಗಾಯ್ತು. ಅಂಬಿಕಾತನಯದತ್ತ (ದ. ರಾ. ಬೇಂದ್ರೆ) ೩೮. ಭಾರತ ತಪಸ್ವಿನಿ ವೇದಋಷಿ ಭೂಮಿಯಲಿ ನಾಕನರಕಗಳೆಂದು ಸಾವು ಬದುಕಿನ ಕಟ್ಟ ಕಡೆಯ ಹೋರಾಟದಲಿ ಸಂಧಿಸಿವೆ. ಮಾನವನೆದೆಯ ಕಾಳಕೂಟದಲಿ ಅಮೃತವನೆ ಹಾರೈಸಿ ಬಲಿರಕ್ತದಲಿ ಮಿಂದು