ಪುಟ:ಕನ್ನಡದ ಬಾವುಟ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೬ ಮುಪ್ಪು ಹರೆಯ ಮರೆಯುತ, ಬೆಪ್ಪ, ಜಾಣ ಬೆರೆಯುತಲಗ್ಗೆ ಚೆಂಡು, ಚಿಣ್ಣಿ ಕೋಲು, ಏಣಿ ಉಯ್ಯಲಾಡಿರೈ, ಹಬ್ಬದೂಟ ಉಣುವ ಮುನ್ನ ಬೇವು ಬೆಲ್ಲ ಸವಿಯಿರಣ್ಣ: * ನೂರು ವರುಷ ಬಾಳುವ, ಸಾವ ದೂರ ಮಾಡುವ, ವಜ್ರಕಾಯರಾಗುವ, ಸಿರಿಯ ಸುಖವ ಕಾಣುವ ಎಂದು ಬೆಲ್ಲ ಮು೦ದು ಮಾಡಿ ಬೇವು ಬೆಲ್ಲ ಮೆಲ್ಲಿರಣ್ಣ. ಹಿರಿಯ ಜನಕೆ ನಮಿಸಿರಯ್ಯ, ಹರಸಿ ' ಸುಖಿಸಿ' ಎಂಬರಯ್ಯ ಗಂಟೆನಾದ ಕೇಳಿರೆ, * ಗುಡಿಗೆ ನಡೆವ ಬನ್ನಿ ರೈ. ಭಕ್ತಿಗೂಡಿ ನಲವನದುಮಿ, ಆಸೆ ಸಲಿಸು, ಭಯವನೊರಸು, ಇಂಥ ಹಬ್ಬ ನೂರ ಕರೆಸು ಎಂದು ಕರವ ಮುಗಿಯರೆ. ಅಕ್ಕ ! ಬಲ್ಲೆ ನಿಮ್ಮ ಮನವ ಹಳೆಯ ವರುಷದಳಲ ನಲವ ನಿಂದು ನೆನೆದುಕೊಳ್ಳಿರಯ್ಯ, ಮುಂದ ನೋಡಿ ಇರುಳ ಕಂಡು, ಬೆಳಕನರಸಿ ದುಗುಡಗೊಂಡು ಅಳಲಿ, ಬೆದರಿ, ಸುರಯ್ಯ, ಬೆದರಲೇಕೆ ? ಸುಯ್ಯಲೇಕೆ ? ಭುಜವ ತಟ್ಟಿ ನಿಲ್ಲಿರಯ್ಯ. ನಮ್ಮ ಹಕ್ಕು ಹರುಷವಯ್ಯ, ಹೋದುದೆಲ್ಲ ಹೋದುದೈ.