ಪುಟ:ಕನ್ನಡದ ಬಾವುಟ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

hV ಭೂಮಿಮದ ನೀಲಾಂಗಣದಲಿ ಕೆಂದರೆ ಮುಗಿಲಿನ ರಂಗೋಲಿ ರಂಜಿಸುತಿದೆ ಹೊಳೆ ತೆರೆಯಚೂತಿದ ಕೆಂಪಗೆ ನುಣ್ಳಲನು ಹೋಲಿ ! ಹಿಮಮಣಿ ಸಿಂಚಿತ ತೃಣವಿಸ್ತಾರದಿ ನೇಸರು ಕಿಡಿಬಲೆ ನೆಯ್ಯುತಿದೆ ; ವಿಹಂಗ ದಂಪತಿ ತರುಶಾಖಾಗ್ರದಿ ಪ್ರೇಮಾಲಾಪನೆ ಗೈಯುತಿದೆ ; ನವೀನ ಹೃದಯಗಳೇಳಿ, ನವೀನ ಗಾನವ ಕೇಳಿ ! ನಾಡಿನ ಪುಣ್ಯದ ಪೂರ್ವ ದಿಗಂತದಿ - ನವ ಅರುಣೋದಯ ಹೋಮುತಿದೆ ! ಚಿರ ನೂತನ ಚೇತನದುತ್ತಾ ಹದಿ ನವೀನ ಜೀವನ ಚಿಮುತಿದೆ ! ಕ. ವಿ. ಪುಟ್ಟಪ್ಪ ೪೬, ಯುಗಾದಿಯ ಹಾಡು ಏಳಿ ರವಿಯು ಮೂಡುವೊಳಗೆ ಬಾನ ತಳಿರು ಬಾಡುವೊಳಗೆ ಇಂದು ಮಧುರ ಜನವ, ಜಗವ ಮುದದಿ ತೇಲಿಸುತ್ತ ಬರುವ! ಇಂದು ಯು~ ಗಾದಿಯು, ಹೊಸ ವರ್ಷದಾದಿಯು ! ಬೇವು ಚಿಗುರ, ಹೂವು ಹಣ್ಣ, ಮಾವು ತಳಿರ ತನ್ನಿರಣ್ಣ ದಿಟ್ಟ ಕಚ್ಚೆ ಹಾಕಿ, ಶಿಖೆಗೆ ದವನ ಸುರಗಿ ಸೆಕಿರಣ್ಣ. ಹಜೊ ! ಯುಗಾದಿಯು, ಹರುಷಕೆಲ್ಲ ಗಾದಿಯು ! ಹಳೆಯದೆಲ್ಲ ಮರೆಯಿರೆ, ಹೊಸದು ಬಾಳ ತೆರೆಯಿರೆ, ಕಳೆದ ವರುಷ ಕಿಂದು ಒಂದೆ ಕಣ್ಣ ಹನಿಯ ಸಲಿಸಿರೈ.