೧೨
ಪರಿಗೆಯ ಬಂಧುಗಿಯರ್ ಈ ಊರ್ಗೆ ಬಂದು ಆರಿದರೊಳ್ ಛಲಮೆನೆ ನಾಲ್ಕೆ ೞ್ತುನ ಬಲನ ಕಿಡಿಸಿ ಆೞ್ತೞ್ತು ಮಾಡಿ ಮತ್ತಂ ನಿಲಲಾಱದೆ ಓಡಿದ ಅದನ್ವೞಿಕೆ ಕುಲಮುದ್ದಗಾಮಿಗಾಗೆ ಅರಸರ್ ದಯೆಗೆಯ್ದು ಪೂರ್ವಾಚಾರದ ನಾಲ್ಕೆೞ್ತು ನೊಳ್ವೊೞಿಸಿ ಗೞ್ದೆಯನಳದು ದಯೆಗೆಯ್ದು ಬಿಟ್ಟ ಕುಂದಗೆ ಸೇವೆಯಕಲಿಯಮ್ಮ ಬೆಣ್ಮಣಿಯ ಪದುಮಣ್ಣನ್ ಕರ್ಬುರಸೋಮದಿ ಮಿಟ್ಟಿಸೆಯ ನರಸಿಂಗನ್ ಸಿಮ್ಮನೂರ ಕಿಳ್ಳಮ್ಮನ್ ಆ೦ಡುಗಿಯರಟ್ಟಿ ಗನ್ ಬೆದೆಮೆಟ್ಟಿ ಯಾಲಮ್ಮಾನ್ ಬಳ್ಳಿಗಾಮೆಯಗಾಮುಂಡನ್ ಗು೦ದುಗಡೆಯಾ ಸಾತ್ತುಗಾಮುಂಡ ಇಂತೀ ಎನೆಬರು ಶ್ರೀಕರಣ ಸಹಿತಂ ಬಿಟ್ಟಾರಿದನ್ ಕೆಡಿಪೋನುಂ ಕೆಡೆ ಬಾಲ್ವೋನುಂ ಪಂಚಮಹಾಪಾತಕಸಂಯುಕ್ತನಕ್ಕುಂ ಬಾರಣಾಸಿಯೊಳ್ ಸಾಸಿರ ಕವಿಲೆಯನ್ ಕೊಂದೋನ ಲೋಕಕ್ಕೆ ಸಂದೋನುಮಕ್ಕುಂ.
೭. ದೇವಾಲಯದ ದತ್ತಿ ೧೦೨೧
ಶ್ರೀ ಸ್ವಸ್ತಿ ಸಕವರಿಷ ವೊಂಬಯ್ನೂಱ ನಾಲ್ವತ್ತಮೂಱನೆಯ ರೌದ್ರಿ ಸಂವತ್ಸರದ ಆಷಾಡಮಾಸದ ಪುಣ್ಣನೆ ಉತ್ತರಾಷಾಡ ನಕ್ಷತ್ರಂ, ಮಕರ ಚಂದ್ರಂ ಬೃಹಸ್ಪತಿವಾರಂ ಶ್ರೀ ಮುಡಿಗೊಂಡ ರಾಜೇಂದ್ರ ಚೋೞಂ ರಾಜ್ಯಂ ಗೆಯ್ಯುತ್ತಿರೆ ಇಯಾಂಡು ಒಂಬತ್ತಾವುದಱುಳ್ ನುಗುನಾಡ ಒಱೆಯ ಬೆಳತೂರ ಒಡೆದು ಬಿೞ್ದು ಭೂಮಿಲಬ್ಬವಾಗಿ ಕೆಟ್ಟ ದೇಗುಲಮಂ ಮಾಡಿಸಿ ಕಿೞ್ತು ಪಟ್ಟ ಲಿಂಗಮಂ ಪ್ರತಿಷ್ಠೆಗೆಯು ಮುರುಗಪೆಟ್ಟ ಯ ಮಗಂ ಬಸವಯ್ಯಂ ರುದ್ರ ಹೋಮಂ ಗೆಯ್ದು ಸಹಸ್ರ ಭೋಜನಂ ಮಾಡಿ ಬಲಿಯಂ ಕಳೆದು ಧರ್ಮಂ ಗೆಯ್ದು ಬೆಳತೂರ ಜವನಿಗಾವುಂಡನ ಮಗಂ ಜಯಂಗೊಂಡ ಚೋೞಪೆರ್ಮಾಡಿಗಾವುಂಡನಲ್ಲಿ ಮುರುಗಸೆಟ್ಟಯ ಮಾಗ್ಗ ಬ್ಬೆಯ ಮಗಂ ಸುಪುತ್ರಂ ಪುಟ್ಟಿದ ಬಸವಸೆಟ್ಟ ಪದಿನಯ್ಗುಳ ನೀರ್ಮಣ್ಣು ಅಯ್ಗು ಳ ಪೂಂಬೊಲನುಂ ಪೊನ್ನ ಆ ಕೊಟ್ಟು ಮಣ್ಣಱಂ ಕೊಂಡು ಧಾರಾಪೂರ್ವಕದಿಂದ ಮೂರುಂ ಅಯ್ಮಣ್ಣಿಗರುಮಱಿಯ ಈ ದೇಗುಲಕ್ಕೆ ಬಿಟ್ಟಂ ಬಸವಸೆಟ್ಟ ನಂದಾದೀವಿಗೆಗೆ ಕೊಟ್ಟಂ ಈ ದತ್ತಿಯನೞಿದವಂ ಈ ದೇಗುಲವುಂ ಕವಿಲೆಯುಂ ವಾರಣಾಸಿಯುಮನೞಿದ ಪಾತಕಕ್ಕೆ ಸಂದಂ.
೮. ಬುಕ್ಕರಾಯನ ಧರ್ಮ ಸಮದೃಷ್ಟಿ ೧೩೬೮
ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ
ಶ್ರೀರಂಗರಾಜ ಚರಣಾಂಬುಜ ಮೂಲದಾಸಃ
ಶ್ರೀ ವಿಷ್ಣುಲೋಕ ಮುನಿಮಂಟಪ ಮಾರ್ಗದಾಯೀ
ರಾಮಾನುಜೋ ವಿಜಯತೇ ಯತಿರಾಜರಾಜ!