ಪುಟ:ಕನ್ನಡದ ಬಾವುಟ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫ ೬ ನಾನು ಎಂಬುದ ಬಿಟ್ಟು ಜ್ಞಾನಿಗಳೊಡಗೂಡಿ ಏನೆಲ್ಲಕೆ ದೇವಪ್ರೇರಣೆಯೆಂದು | ಧ್ಯಾನಿಸಿ ಮೌನದಿ ಪುರಂದರವಿಠಲನ ಕಾಣದೆ ಮಾಡಿದ ಕಾರ್ಯಗಳೆಲ್ಲವು (iv) ಹುಚ್ಚು ಹಿಡಿಯಿತು ಎನಗೆ ಹುಚ್ಚು ಹಿಡಿಯಿತು ಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ 11 ಪ || ವಾಸುದೇವನೆಂಬ ನಾಮ ವದನದಲಿ ಒದರುವ ಮಾಯಾ ಪಾಶವೆಂಬ ಅಂಗಿಯನ್ನು ಹರಿದು ಹರಿದು ಬಿಸುಡುವೆ ಕ್ಷೇಶವೆಂಬ ಮುಡಿದ ಹೂವ ಕಿತ್ತು ಕಿತ್ತು ಬಿಸುಡುವೆ ಕೆಟ್ಟ ದೋಷವೆಂಬ ಗೋಡೆಯನ್ನು ಕೆರೆದು ಕೆರೆದು ಹಾಕುವಂಥ ಕೃಷ್ಣ ನಂಘಿಕಮಲಕೆರಗಿ ಸೊರಗಿ ಸೊರಗಿ ಬೀಳುವೆ ಎನ್ನ ಕಷ್ಟವೆಂಬ ಕುಂಭವನ್ನು ಒಡೆದು ಒಡೆದು ಹಾಕುವೆ ನಿಷ್ಠ ರನ್ನು ಕಂಡರವರ ಹಿಂದೆ ಹಿಂದೆ ತಿರುಗುವ ಸಲೆ ದುಷ್ಟರನ್ನು ಕಂಡ ಕಡೆ ಕಲ್ಲು ಕಲ್ಲು ಬೀಸುವಂಥ ಮಂದಮತಿಗಳನ್ನು ಕಂಡರೆ ಮೂಕನಾಗುವೆನು ಹರಿಯ ನಿಂದೆ ಮಾಡುವವರಮೇಲೆ ಮಣ್ಣತಂದು ಚೆಲ್ಲುವೆ ತಂದೆ ಸಿರಿ ಪುರಂದರವಿಠಲನ ಪಾದವನ್ನು ಹೊಂದಿಸುವ ಜನರ ಸೇರಿ ಹಾಡಿ ಹಾಡಿ ಕುಣಿಯುವಂಥ (v) ಮಾನವಜನ್ಮ ದೊಡ್ಡದು ಇದ ಹಾನಿಮಾಡಲುಬೇಡಿ ಹುಚ್ಚಪ್ಪಗಳಿರ || ಪ || ಕಣ್ಣು ಕೈ ಕಾಲ್ ಕಿವಿ ನಾಲಗೆ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ ಉಣ್ಣದೆ ಉಪವಾಸ ಇರುವರೆ ನೋಡಿ ಕಾಲನ ದೂತರು ಕಾಲ್ಸಿಡಿದೆಳೆವಾಗ ತಾಳು ತಾಳೆಂದರೆ ತಾಳುವರೆ ದಾಳಿ ಬಾರದ ಮುನ್ನ ಧರವ ಗಳಿಸಿರೋ ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲು ಬೇಡಿ