ಪುಟ:ಕನ್ನಡದ ಬಾವುಟ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ಎಳವೆಯೊಳ್ ಪರಿದಾಟ ಯೌವನದೊಳು ಎಳವೆಣ್ಣಳೊಡನಾಟ ಬಳಿಕ ವಾರ್ಧಿಕದೊಳು ಹಲವೆಡರಿನ ಕಾಟ ತಿಳಿಯೆ ಕರ್ಮಯೋಗ ತೀರದೆಂದಿಗು ರ೦ಗ ವೇದಾಂತಗಳು ಪಲವು ಅವಳು ವಿವಾದಂಗಳವು ಕೆಲವು ಭೇದಿಸಿ ನೋಡಲು ವೇದ್ಯವಾಗದು ತಲವು ಓದುಗಳಿ೦ ಜ್ಞಾನಯೋಗ ಸಾಗದೆಂದಿಗು ತನುವ ದಂಡಿಪುದರಿದು ಕರಣಂಗಳ ತಡೆವುದು ಮಿಗೆಯರಿದು ಮನವ ಬಿಡಿವುದು ಮತ್ತಮರಿದರಿದು ನೆನಹಿನೊಳ್ ವೈರಾಗ್ಯ ನೆಲೆಗೊಳ್ಳದೆಂದಿಗು ಸಿರಿಯಾಸೆ ಕಡುನಿಡಿದು ಸಗ್ಗ ದ ನಾಡ ಸೆ೬ತಿಯಾಸೆಯೆಡೆಗೂಡದು ಮರಳಿ ಕೈವಲ್ಯದ ಮರುಳು ಬೆನ್ನ ಬಿಡದು ಪರಮ ಭಕುತಿ ಯೋಗ ಬಲಿಯದೆಂದಿಗು ರಂಗ (iii) ತಪ್ಪು ಯಾರದು ? ತಪ್ಪ ದಾರದು | ತಿಳಿದು ನೋಡೆ ತಪ್ಪ ದಾರದು ! ತಪ್ಪು ನೆಪ್ಪುಗಳ ವಿಕಲ್ಪಿಸದೆಲ್ಲವ ! ನೊಪ್ಪುಗೆಯೇನ್ನ ನೋಲಿದು ಪಾಲಿಸು ಕೃಷ್ಣ || ಪ || ಆರಯ್ಕೆ ನುಗ್ಗಿರಿವಂಧನ ತಪ್ಪೋ ದಾಜಿದೊಲವ ದಂಡಧಾರನ ತಪ್ಪೆ ಮೇರೆಯ೫೦ಯದೆನ್ನ ಮೇಲಣ ತಪ್ರೊ ನಾರಾಯಣ ನಿನ್ನ ನಟನೆಯ ತಪ್ಪೋ ತೊಂಡು ಮೇವ ಹಸುವಿಂಡಿನ ತಪ್ಪೆ ಕಂಡು ಕಾಯದ ತುಗಾವನ ತಪೋ ಗಂಡು ಮಾಯವೆನ್ನ ಗೆಯ್ಕೆಯ ತಪ್ಪೋ ಕೊಂಡಾಳುವ ನಿನ್ನ ಕೂರ್ಮೆಯ ತಪ್ಪೋ ಬಾವಿಯ ಬಳಸುವ ಹಸುಳೆಯ ತಪ್ಪೋ | ತಾ ವಂದು ತಡೆಯದ ತಾಯದು ತಪ್ಪೆ ಈ ವಿಷಯಕೆ ಮುದ್ದು ನನ್ನ ದು ತಪ್ಪೆ ಆ ವೇಳೆಗಾಪುಗೆಯ್ಯದ ನಿನ್ನ ತಪ್ಪೋ