ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಕಲಬುರಗಿಯ ಸಿದ್ದೇಶ್ವರನ | ಬಾಲರಾಗಿ ಪಡಕೊಂಡೇವೂ

ಶರೀರದಲ್ಲಿ ರೋಮಂಗಳೆಲ್ಲ ಕಂಗಳಾಗಿ ಪರಮಾತ್ಮನ ದರ್ಶನಾನಂದವನ್ನು ಪಡೆಯುವವು (ವಚನ)

ನಿಮ್ಮ ನೋಟ ಅನಂತ ಸುಖ ಕೂಟ ಪರಮ ಸುಖವಯ್ಯಾ.

ಅಷ್ಟಕೋಟಿ ರೋಮಂಗಳೂ ಕಂಗಳಾಗಿ ನೋಡುತ್ತಿದ್ದೆನು.

ಕೂಡಲಸಂಗಮದೇವಯ್ಯಾ! ನಿಮ್ಮ ನೋಡಿ ನೋಡಿ ಮನದಲ್ಲಿ ರತಿ ಹುಟ್ಟಿ ನಿಮಿರ್ದುವನ್ನ ಕಂಗಳು.

ಸಾಧುಸಂತರ ಸಭೆಯ ದರ್ಶನ ( ರಾಗ-ಮಿಶ್ರ ಕಾಫಿ, ತಾಲ-ಕೇರವಾ)

ಸೈ ಸೈ ಸೈ ಕುಂತಿದೆನೆ | ಕುಂತ ಜಾಗದಾಗೆಲ್ಲರನೆ

ಎಲ್ಲರ ಮುಖವ ಕಂಡೆನೆ | ಅಲ್ಲಿ | ಸಭೆಯೊಳಗೆ ಶಿವನ ನೋಡಿದೆನೆ

ಸಾಧುಸಂತರ ಸಭಾ ಕಂಡೆನೆ | ಯೋಗಿ ಜೋಗಿಯಿರುವದು ನೋಡಿದೆನೆ ||

ಸಾಗ್ರದಲ್ಲಿ ಸಾಂಬನ ಕಂಡನೆ | ಈ | ಯೋಗ ಮಾಡಿಕೊಂಡವ ಧನ್ಯನೆ

ಸಭಾದೊಳಗಿನ ಆರ್ಥೇನ ಹೇಳಲಿ | ಗುಲಾಲ ಝುಮ್ಮರ ಹಾರಿತರಿ |

ಸುತ್ತೆಲ್ಲ ತಾರಕ ವರ್ಣದರೀ | ಇದು | ತಿಳಿದವರಿಗೆ ವೈಕುಂಠದರಿ

ಹಸರು ಹಳದಿ ಕುಶಲಾದೆಂದು | ಶೇಷನ ವರ್ಷಾ ತೋರುವದು ||

ಈಶನ ರೂಪವು ಒಂದೊಂದು | ಏನು | ಹೇಳಲಿ ನಾನು ಆ ಛಂದು