ಕನ್ನಡ ಪರಮಾರ್ಥ ಸೋಪಾನ
ಎಂಥ ಸುಲಭ ಇದ್ದಾನೊ ದೇವ | ಅಲ್ಲಿ ಏರಿ ಮಾಡಿ ಆತನ ಧಾವಾ ||
ದ್ವಾರ ತೆರೆದು ನೋಡುವೆ ಅವನ | ಪರ | ನಾದ ದಿಮ್ಮದೊಳು ಮುಳುಗುವೆ ನಾ
ಇಷ್ಟ ಅರ್ಥವು ಎಲ್ಲಿ ಅದ | ಫಣಿ ನೇತ್ರ ಮಧ್ಯದ ನಡುವದ
ಮೂರು ಮೀರಿದವಗ ತೋರೇದ | ಗುರು | ಸಾರಿ ಹೇಳಿದರ ತಿಳಿದದ
ಆತ್ಮನ ಅನುಭವ ಬಲ್ಲವರು | ಯೋಗದ ಮಾರ್ಗ ತಿಳಿದವರು | ಗುರು |
ಗುರು ನಿಂಬರಗಿ ಮಹಾರಾಜ ಸಾಧುರು || ಲಿಂಗ ಜಂಗಮ ಕೂಡಿದವರು
ಅಯ್ಯ ಮನವೇ! ಉರಿಯುವ ಕರ್ಪುರದಂತೆ ಬೆಳಗು! ಅಮೃತವ ಕುಡಿ! ನೀಲ ಮಂಟಪದಲ್ಲಿ ಆಡು ! ಬಯಲ ತೊಟ್ಟಿಲಲ್ಲಿ ಮಲಗಯ್ಯ! ( ರಾಗ-ಮಿಶ್ರಕಾಫಿ, ತಾಲ-ಕೇರವಾ)
ಬಾ ಬಾ ಬಾ ಎನ್ನ ಮೋಹದ ಮನಸ
ಯತಿ ಮುನೀಶ್ವರರಿಗೆ ಗತಿಚ್ಚುವ ಕೂಸ
ಹರಗುರುವಿನ ಒಲಿಸುವದು ಬಿರಿಯಲ್ಲೂ ಮನಸ | ನೀನೊಲಿದರೆ ಮೂರು ಲೋಕ ಒಲಿಯುವವು ಕೂಸ
ಮೂಲ ಸಾಲಿ ಬೀಜಮಂತ್ರಾ ಓದು ಕಲಿ ಮನಸ | ಆದಿ ಅನಾದಿ ಆಚಿಕಿನ ಸುದ್ದಿ ಕದ್ದು ಹೇಳು ಕೂಸ
ಸಾಧನ ಮಾಡಿ ನಾದ ಬಿಂದುಕಳೆ ತಿಳಿಯುವ ಮನಸ | ನೀಲ ಮನೆಯೊಳು ಮೇಲು ಮಂಟಪದಿ ಲೋಲ್ಯಾಡು ಕೂಸ || ೩ ||
ಅರಿತು ಅಮೃತ ಗಟಗಟ ಕುಡಿಯುವ ಮನಸ | ಬಿಟ್ಟಿ, ಬೈಲ ತೊಟ್ಟಿಲದೊಳು ಮಲಗುವ ಕೂಸ
ಉರಿ ಉಂಡ ಕರ್ಪುರದಂತೆ ಬೆಳಗುವ ಮನಸ | ಸಂಗ ಲಿಂಗ ಅಂಗಸಹಿತ ನುಂಗುವ ಕೂಸ