ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ ಹದಿನೆಂಟು

ಪರತರ ಅನುಭಾವ

ಪರಮಾತ್ಮನ ಜ್ಯೋತಿರೂಪವು ಬಣ್ಣಿಸಬಾರದ ವೈಭವದಿಂದ ನನ್ನೆದುರು ಬೆಳಗುತಿದೆ ( ರಾಗ-ಪಿಲೂ, ತಾಲ-ಕೇರವಾ )

ಸದಾ ಬೆಳಗುತದೆ | ಜ್ಯೋತಿ | ಸದಾ ಬೆಳಗುತ್ತದೆ

ಸದಾ ಬೆಳಗುತ್ತದೆ ಹೃದಯಕಮಲದೊಳು | ಆಕೆ ಇದೆ ಇಲ್ಯಾದ ನೋಡು ಸಖಿ

ತಾನೆ ತಾನು ಕುಳಿತು | ತನ್ನೊಳು | ಏನು ಕಳೆಯ ತುಂಬಿ |

ಏನು ಹೇಳಲಿ ಸ್ವಾನುಭವದ | ಟೂನ ತೋರಿಸಿದ ಜ್ಞಾನಮೂರುತಿ

ತನ್ನ ತಾನೆ ಬರೆದು | ನಿಜ ಸುಖ- | ದಲ್ಲೇ ಮೈ ಮರೆದು ||

ಅಲ್ಲ ಹೌದು; ಇಲ್ಲಿ ಉಂಟು | ಬಲ್ಲ ಜಾಣರಿಗೆ ಸೊಲ್ಲ ಸೂಕ್ಷ್ಮವಿದು

ನಿತ್ಯ ನಿರುಪಾಧಿಗೆ | ಹತ್ತದೆ | ಮೆರೆವುದು ಬಯಲೊಳಗೆ ||

ಸತ್ತು ಚಿತ್ತು ಆನಂದವಾಗಿ, ಎತ್ತ ನೋಡಲದು ಕರ್ತು ಮೂರುತಿ


ಬಗೆಬಗೆಯ ಆನಂದಮಯ ಅನುಭವಗಳ ಮುಖಾಂತರ ಆತ್ಮನನ್ನು ಸೇರುವ ಕಲೆಯನ್ನು ಸದ್ಗುರುಗಳಿಂದ ಕಲಿಯೋಣ ( ರಾಗ-ಆನಂದಭೈರವಿ, ತಾಲ-ದೀಪಚಂದಿ )

ಅರ್ಥಿಯಾಗಿ ಬನ್ನಿ ಅರಿತು ನೋಡುವ ಗುರುಮೂರ್ತಿಯಿಂದ | ನಿರ್ತವಾಗಿ ಪೂರ್ಣ ಬೆರೆತು ಕೊಡುವ ಬನ್ನಿ ಗುರ್ತದಿಂದ