ಕನ್ನಡ ಪರಮಾರ್ಥ ಸೋಪಾನ
ಸೂರ್ಯನಿಲ್ಲದೆ ಸುಪ್ರಕಾಶ ತುಂಬಿದೆ ಹೇಳಲೇನಾ | ತುರಿಯಾವಸ್ಥೆಯಲ್ಲಿ ಬೆರಿತು ಕೂಡುವ ಜ್ಞಾನಿ ಬಲ್ಲ ಮೀನಾ ||
ಬರಿಯ ಮಾತನಾಡಿ ಹೊರೆಯ ಹೇಳುವದಲ್ಲಿ ಅರಿವು ಸ್ಥಾನಾ | ಪರಿಯಾಯದಿಂದಲಿ ಪರಿಣಮಿಸಿ ನೋಡೋ ಪರಮ ಪ್ರಾಣ
ಚಂದ್ರನಿಲ್ಲದೆ ಬೆಳದಿಂಗಳ ಬಿದ್ದದೆ ಬಹು ಭಾಳಾ | ಇಂದ್ರಿಯಾದಿಗಳೆಲ್ಲ ಹರುಷಾಗಿ ನೋಡುವವು ಸರ್ವಕಾಲಾ |
ಸುಂದರವಾದ ಸುವಸ್ತುವೊಂದೊಳಗದ ಬಲು ಮೇಲಾ | ಸಾಂದ್ರವಾದ ಸುಖ ತುಂಬಿ ತುಳುಕುತ್ತದೆ ಥಳಥಳಾ
ಮನದ ಕೊನೆಯಲ್ಲಿದ್ದ ಘನಸುಖ ನೋಡಿರಿ ನೆನೆದು ಬೇಗಾ | ಅನುಭವಿಗಳಿಗಿದು ಅನುಕೂಲವಾಗಿದೆ ಬ್ರಹ್ಮಭೋಗಾ ||
ನಾನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ | ಅನುದಿನ ಮಹಿಪತಿ ತಾನೆ ತಾನಾದನು ಸದ್ದು ರುವೀಗ
ಆತ್ಮಾನುಭಾವದ ಅಮೂಲ್ಯ ಆನಂದವನ್ನು ಬಣ್ಣಿಸಲು ಸರಿಯಾದ ಶಬ್ದಗಳೇ ದೊರೆಯಲರಿಯವು ( ರಾಗ-ಕಾಫಿ, ತಾಲ-ದಾದರಾ )
ಪೇಳಲಳವೆ ಸ್ವಾನುಭವದ ಸುಖವ ಮಾನಿನಿ | ಭಾನುಕೋಟಿ ಪ್ರಭೆಗೆ ಮಿಗಿಲು ಕಂಡೆ ಕಾಮಿನೀ
ಮೂಲದ್ವಾರ ಮೆಟ್ಟಿ ಮೂಲ ಕೊನೆಗೇರಿದೆ | ಮೇಲು ಮಂಟಪ ಆದಿ ಮೂಲ ಮೂರ್ತಿ ಹೊಳೆದಿದೆ ||
ಲೀಲೆಯಿಂದ ಭ್ರಮರನದ ನಾದ ನುಡಿದಿತೆ | ಮೋಲವಿಲ್ಲದಂಥಾ ಸ್ನಾನಂದವಾಯಿತೆ
ನಾದದೊಳು ಸೂಸು ನಾದಾ ಎದ್ದು ದಿಮ್ಮಿತೆ | ಬೋಧವಡಗಿ ಬ್ರಹ್ಮದೊಳಗೆ ಐಕ್ಯವಾದಿತೆ ||
ಸೌಖ್ಯನುಂಡು ಸುಖಕೆ ಮೆಚ್ಚಿ ಮೈಯ ಮರೆತಿದೆ | ಆದಿ ಅನಾದಿಯಾಗಿ ತಾನೆ ನಿಂತಿತೆ
ಉಣದ ಉಡದೆ ಉದರ ತುಂಬಿ ಉಕ್ಕಲೇರಿತೆ | ಉಕ್ಕಲೇರಿ ಇಂದ್ರಿಯಗಳ ಉಲವು ಅಡಗಿತೆ ||
ಉಲವು ಅಡಗಿ ಸೂಸುಗಾಳಿ ಸುಮ್ಮ ನಿಂತಿತೆ | ಒಳಗೆ ಹೊರಗೆ ಒಂದೆ ಸವನೆ ಕಮ್ಮಿ ಬೆಳಗಿವೆ