ಕನ್ನಡ ಪರಮಾರ್ಥ ಸೋಪಾನ ಒಂದು ಹಿರಿದಾದ ಕೃಷಿ ರೂಪಕ ( ರಾಗ - ಸುರಟ, ತಾಲ- ದಾದರಾ ) ಶರೀರವೆಂಬುವ ಹೊಲನ ಹಸನ ಮಾಡಿ | ಪರತತ್ವ ಬೆಳೆಯನು ಬೆಳೆದುಣ್ಣಿರೋ ಶಮ ದಮ ಎಂದೆಂಬ ಎರಡೆತ್ತುಗಳ ಹೂಡಿ | ವಿಮಲ ಮಾನಸವ ನೇಗಿಲನೆ ಮಾಡಿ || ಮಮಕಾರವೆಂದೆಂಬ ಕರಿಕೆಯನು ಕಳೆದು | ಸಮತೆ ಎಂದೆಂಬ ಗೊಬ್ಬರವ ಚೆಲ್ಲಿ ಗುರುವರನುಪದೇಶವೆಂಬ ಬೀಜವ ಬಿತ್ತಿ | ಮೆರೆವ ಸಂಸ್ಕಾರ ಸೃಷ್ಟಿಯ ಬಲ || ಅರಿವೆಂಬ ಪೈರನ್ನು ಬೆಳೆಸುತೆ, ಮುಸುಕಿರ್ದ | ದುರಿತ ದುರ್ಗುಣವೆಂಬ ಕಳೆಯ ಕಿತ್ತಿ ಸ್ಥಿರಮುಕ್ತಿ ಎಂದೆಂಬ ಧಾನ್ಯವ ಬೆಳೆದುಂಡು | ಪರಮಾನಂದದೊಳು ದಣ್ಣನೆ ದಣಿದು || ಗುರುಸಿದ್ಧನಡಿಗರಗುತ್ತೆ ಭವವೆಂಬ ಬರುವನು ತನ್ನ ಸೀಮೆಗೆ ಕಳುಹಿ || ಪ || 10 11 || & 11 ಮೊದಲಿನ ಭಕ್ತಿಯು ಬದಲಾಗದಿರಲಿ ! ಆತ್ಮಾನಂದವು ಲಭಿಸುವವರೆಗೆ ಸಾಧನವು ಎಡೆಬಿಡದೆ ನಡೆಯಲಿ ! ( ರಾಗ-ದೇಸ, ತಾಲ-ದಾದರಾ ) ತಿಳಿಯಬೇಕು | ನಿಜಸುಖದ ನಿಲಯ ಸಹಜಾನಂದ ಮೊದಲ ಭಕ್ತಿಗೆ | ಬದಲವಾಗದೆ | ಮಧುರ ವಚನದಲ್ಲಿ ಮನಸು | ಕದಲದೇಕ ರೂಪವಾಗಿ ಸುಳುವು ಅರಿವು | ಒಳಗೆ ಮರೆವುದೆ || ಜಳಜಳಾದ ಮನದಿ ಬ್ರಹ್ಮ- | ನಾಳದೊಳಗೆ ಸತ್ಯವನ್ನು ಗುರುಬೋಧದಿ | ಅರಿತು ಮುದದಿ || ಪರಿಪರಿಯ ವಿಕಲ್ಪ ನಳಿದು | ನಿರುಪಾಧಿಯಾಗುವ ಕೀಲ || 6 || 110 || || 2 ||
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೬
ಗೋಚರ