ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ ದೈವಿ ಪರಷವು ಅಂತರಂಗದಲ್ಲಿ ನೆಲೆಸಿರುವಾಗ ಬೇರೆಯವರೆದುರು ಸೆರಗೊಡ್ಡು ಎದೇಕಯ್ಯ? ( ರಾಗ-ದೇಸ, ತಾಲ-ದೀಪಚಂದಿ ) ಏನು ಹೇಳಲಿ ಎನ್ನ ಅಜ್ಞಾನವಶದಿಂದ | ನಾನು ನನ್ನನು ಮರೆತೆ ನಾನಾ ಜನ್ಮವ ತಿರುಗಿ ತಿರುಗಿ | ಹೀನ ಮನೆ ಸಂಸಾರಕಾಗಿ || ಶ್ವಾನಸಕರನಂತೆ ಮನೆಮನೆ | ನವಿಲ್ಲದೆ ವ್ಯರ್ಥ ತಿರುಗಿದೆ ೧೭. || ಪ || || ಅ.ಪ. || ಆತ್ಮನ ಅರಿಯದೆ ಯಾತಕು ಬರದಾದ ಭೂತಪಂಚತತ್ವ ದೇಹವನು ಮೆಚ್ಚಿ | ಏತರಿಂದಲಿ ಬಂದಿವೆನಗಿದು | ಜೀವಶಿವರೆಂದೆಂಬ ಭೇದವು | ಮಾತುಮಾತಿಗೆ ಶಬ್ದ ಸೂತಕ | ಪಾತಕದೊಳು ಮುಳುಗಿಹೋದೆ || ೧ || ಭಾನುಕೋಟಿಪ್ರಕಾಶ ಬ್ರಹ್ಮಾಂಡ ತುಂಬಿ | ತಾನಾಗಿ ಹೊಳೆಯುತದೆ || ಏನು ಕಾರಣ ಕಾಳಕತ್ತಲೆ | ಮಾಯಮುಸುಕು ತೋರಗೊಡದಿದು | ನಾನು ನೀನೆಂದೆಂಬ ಭೇದವು | ಏನು ಕಾರಣ ತಿಳಿಯಗೊಡದಿದು 0 || G || ಪರುಷವು ತನ್ನಲ್ಲಿ ಪರಿಪೂರ್ಣವಿರಲಿಕ್ಕೆ! ಸೆರಗೊಡ್ಡಿ ಬೇಡುವರೆ ಬಡವರನು || ಹರನು ತಾನೆಂದಾದ ಮೇಲೆ | ನರರ ಬಾಧೆಗೆ ಸಿಲುಕುದೇಕೆ | ಗುರು ಕೂಡಲೂರೇಶನ | ಕರುಣವಿಲ್ಲದೆ ಚರಣ ಕಾಣವು || a || ಕ. ಜೆ. ೩