ಪ್ರಕರಣ ಐದು ಸದ್ಗುರುವಿನ ಸ್ವಭಾವ ದೇವ ಸದ್ಗುರುಗಳ ಅಭೇದ ( ರಾಗ-ಭೂಪ, ತಾ-ದೀಪಚಂದಿ ) ದೇವನಲ್ಲವೇನೋ | ಸದ್ಗುರು ಮಹಾ- | ದೇವನಲ್ಲವೇನೋ ಆದಿಯೊಳು ಸಿದ್ದರು | ಹೋದ ದಾರಿಯ ತೋರಿ | . ಭೇದವ ಬಿಡಿಸಿದ | ಸಾಧುಮೂರುತಿ ಗುರು || ಅ.ಪ. || ನರಜನ್ಮದೊಳಗೆ ಬಂದು | ಪ್ರಪಂಚದ | ಕಡಲಮಧ್ಯದಲಿ ನಿಂದು || ಅರಿತು ಮರೆತು ಒಮ್ಮೆ | ಗುರುವೆಂದು ನೆನೆದರೆ | ಗುರುತಿಟ್ಟು ಅವರಿಗೆ | ಪರತತ್ವ ತೋರಿದ || 0 || ಆಶಾಪಾಶವ ಬಿಡಿಸಿ | ಮಾಡಿದ ಬಹು | ದೋಷಕರ್ಮವ ಕೆಡಿಸಿ || ನ್ಯಾಸಧ್ಯಾಸದಿ ಜಪ | ಮಾಡೆಂದು ಬೋಧಿಸಿ | ಪ್ರಕಾಶ ತೋರಿದ | ಈಶ ಮಹೇಶನು || 9 |! ಭಕ್ತಿಭಾವವ ನೋಡದೆ | ನಂಬಿದವರಿಗೆ | ಮುಕ್ತಿಯ ಪಾಲಿಸುವ || a || ಕರ್ತು ಸದ್ಗುರು ಭವ- | ತಾರಕ ದೇವನು | 0 ಪ್ರತ್ಯಕ್ಷನಾದಂಥ | ಪರಬ್ರಹ್ಮರೂಪನು 5 ಸದ್ದು ರುವಿನ ಅನುಗ್ರಹದ ರೀತಿ-ಪರಿಣಾಮಗಳು ( ರಾಗ-ಕಾಫಿ, ತಾಳ-ಕೇರವಾ ) ಎಂಥಾ ಗಾರುಡಿಗಾ ಸದ್ಗುರು ಗುರುವಿನ ನಂಬಿ ನಾ ಗುಣವೆಲ್ಲ ಕಳಕೊಂಡೆ ಶರಣು ಮಾಡೆಂದರೆ ಶರಣು ಮಾಡಲು ಪೋದೆ 1 ಕರದೊಳು ಇದ್ದ ನಿಜಭೂತಿ || ಶಿರದ ಮೇಲೆ ಎನ್ನ ಮೈ ಮೇಲೆ ಎಳೆಯಲು | ಶರೀರವ ಮರೆತು ನಾ ಸಾಕ್ಷಿಯಾದೆನು CO || ಅ.ಪ. || 0
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೮
ಗೋಚರ