ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕನ್ನಡ ಪರಮಾರ್ಥ ಸೋಪಾನ
ಕಂಗಳ ಕಾಂತಿಯಿಂ ಈರೇಳು ಭುವನಮಂ ಬೆಳಗುವ ದಿವ್ಯ ಸ್ವರೂಪನ ಕಂಡೆ ನಾನು;
ಕಂಡೆನ್ನ ಕಂಗಳ ಬರ ಹಿಂಗಿತ್ತಿಂದು. ಜಗದಾದಿಶಕ್ತಿಯೊಳು, ಬೆರಸಿಯೊಡನಾಡುವ
ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು.
ಸಗುಣದೇವವಾದಿಯ ನಿರ್ಗುಣ ಬ್ರಹ್ಮನ ವರ್ಣನೆ (ರಾಗ-ದರಬಾರಿ ಕಾನಡಾ, ತಾಲ-ತಾಲ)
ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯ
ಮೂಡದು ಕೂಡದು ಉಣ ದು ಮಾಣದು | ಕಾಡದು ಬೇಡದು ಕಂಗೆಡದು ||
ನಾಡ ಮಾತುಗಳ ಬಲ್ಲದು ಆಡದು | ರೂಢಿಯೊಳಗಿರುತಿಹುದೇನಯ್ಯ
ಪೊಡವಿಗಧಿಕರೆಂಬುವರಿಗೆ ಬಲ್ಲದು | ಕಡೆ ಮೊದಲಿಲ್ಲದ ಒಡಲಿಹುದು ||
ಬೆಡಗನರಿದೆವೆಂಬವರಿಗಗೋಚರ | ಪೊಡವಿಯೊಳಗಣ ಭಕ್ತರ ಬಲ್ಲುದು
ನಿಲ್ಲದು ನಿಲುಕದು ಎಲ್ಲಿಗೆ ಪೋಗದು | ಬಲ್ಲೆನೆಂಬವರಿಗೆ ಅಳವಡದು ||
ಬಲ್ಲಿದ ನಮ್ಮ ಪುರಂದರ ವಿಠಲಗಲ್ಲದೆ | ತಿಳಿಯದು ಮಜಗದೊಳಗೆ
ದೇವರು ಅಣೋರಣೀಯಾನ್ ಮಹತೋ ಮಹಿಯಾನ್ ಇರುವನು (ವಚನ)
ಅಯ್ಯಾ ! ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ.
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತ.