ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕನ್ನಡ ಪರಮಾರ್ಥ ಸೋಪಾನ
ಅಯ್ಯಾ ! ದಶದಿಕ್ಕು ಇತ್ತಿತ್ತ, ದಶಭುಜಗಳತ್ತತ್ತ.
ಚೆನ್ನಮಲ್ಲಿಕಾರ್ಜುನಯ್ಯಾ !
ನೀವೆನ್ನ ಕರಸ್ಥಲಕೆ ಬಂದು ಚುಳುಕಾದಿರಯ್ಯಾ !
ನಿರ್ಗುಣ ಸಾಕ್ಷಾತ್ಕಾರದ ಅವರ್ಣನೀಯ ಆನಂದ (ರಾಗ-ಜಂಗಲಾ, ತಾಲ-ಕೇರವಾಗಿ)
ಕಾಣಬಾರದಂಥಾ ವಸ್ತು ಕಂಡೆನೆ ಗುರುರಾಯ | ಕಂಡ ಸುಖವ ಕೇಳಿದರೆ ಹೇಳಲಿಕ್ಕೆ ಬಾರದಯ್ಯಾ || ಪ ||
ಕೈ ಇಲ್ಲಾ ಕಾಲು ಇಲ್ಲಾ | ಮೈ ಇಲ್ಲಾ ಮಾರಿ ಇಲ್ಲಾ |
ಭವಬಂಧನದ ದುಃಖವು | ನಮಗಿಲ್ಲೊ ಗುರುರಾಯಾ
ಹೆಣ್ಣು ಅಲ್ಲಾ ಗಂಡು ಅಲ್ಲಾ | ಪೇಳಲಿಕ್ಕೆ ಅಳವು ಇಲ್ಲಾ ||
ಕಣ್ಣಿನಿಂದ ಕಂಡದ್ದನ್ನು ತಾನೆ ಬಲ್ಲಾ ಗುರುರಾಯಾ
ಜಪವಿಲ್ಲಾ ತಪವಿಲ್ಲಾ ! ನಿತ್ಯನೇಮಗಳು ಇಲ್ಲಾ ||
ಉಪವಾಸದ ತಾಪವು | ನಮಗಿಲ್ಲೋ ಗುರುರಾಯಾ
ಮುಟ್ಟಿ ಕೊಟ್ಟ ಗುರುರಾಯಾ | ತನ್ನ ಕೃಪಾದಯದಿಂದ ||
ಸೃಷ್ಟಿಯೊಳು ಕೂಡಲೂ ರೇಶಾ | ಬಟ್ಟ, ಬೈಲ ಪ್ರಜ್ಞೆಯಾದಾ