ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಅಯ್ಯಾ ! ದಶದಿಕ್ಕು ಇತ್ತಿತ್ತ, ದಶಭುಜಗಳತ್ತತ್ತ.

ಚೆನ್ನಮಲ್ಲಿಕಾರ್ಜುನಯ್ಯಾ !

ನೀವೆನ್ನ ಕರಸ್ಥಲಕೆ ಬಂದು ಚುಳುಕಾದಿರಯ್ಯಾ !

ನಿರ್ಗುಣ ಸಾಕ್ಷಾತ್ಕಾರದ ಅವರ್ಣನೀಯ ಆನಂದ (ರಾಗ-ಜಂಗಲಾ, ತಾಲ-ಕೇರವಾಗಿ)

ಕಾಣಬಾರದಂಥಾ ವಸ್ತು ಕಂಡೆನೆ ಗುರುರಾಯ | ಕಂಡ ಸುಖವ ಕೇಳಿದರೆ ಹೇಳಲಿಕ್ಕೆ ಬಾರದಯ್ಯಾ || ಪ ||

ಕೈ ಇಲ್ಲಾ ಕಾಲು ಇಲ್ಲಾ | ಮೈ ಇಲ್ಲಾ ಮಾರಿ ಇಲ್ಲಾ |

ಭವಬಂಧನದ ದುಃಖವು | ನಮಗಿಲ್ಲೊ ಗುರುರಾಯಾ

ಹೆಣ್ಣು ಅಲ್ಲಾ ಗಂಡು ಅಲ್ಲಾ | ಪೇಳಲಿಕ್ಕೆ ಅಳವು ಇಲ್ಲಾ ||

ಕಣ್ಣಿನಿಂದ ಕಂಡದ್ದನ್ನು ತಾನೆ ಬಲ್ಲಾ ಗುರುರಾಯಾ

ಜಪವಿಲ್ಲಾ ತಪವಿಲ್ಲಾ ! ನಿತ್ಯನೇಮಗಳು ಇಲ್ಲಾ ||

ಉಪವಾಸದ ತಾಪವು | ನಮಗಿಲ್ಲೋ ಗುರುರಾಯಾ

ಮುಟ್ಟಿ ಕೊಟ್ಟ ಗುರುರಾಯಾ | ತನ್ನ ಕೃಪಾದಯದಿಂದ ||

ಸೃಷ್ಟಿಯೊಳು ಕೂಡಲೂ ರೇಶಾ | ಬಟ್ಟ, ಬೈಲ ಪ್ರಜ್ಞೆಯಾದಾ