ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಬಿಡದೆ ಇನ್ನಡಿಗಡಿಗೆ, ನೀರಲಕೇರಿ ಮೃಡ ಪಂಚಾಕ್ಷರ ನುಡಿಗೆ ||

ಬಿಡದೇಳು ಕೋಟಿಮಂತ್ರಕ್ಕೆ ತಾಯಿ ಒಡಲಿದು | ಬೆಡಗಿನ ಶಿವನಾಮ ದೃಢದಿಂದ ಭಜಿಸಿರೋ


ಷಡಕ್ಷರೀ ಮಂತ್ರದ ಎಲ್ಲ ಅಕ್ಷರಗಳ ಅರ್ಥ

ಆರು ಅಕ್ಷರ ಭೇದ ಹರಿ ಕೇಳಲು ಬಂದ | ಸುರಮುನಿಗಳ ಕೇಳಿರಣ್ಣಾ ||

ಮೂರು ಲೋಕದ ವರಮಂತ್ರ ತಂದನು | ಸಿದ್ಧ ರಾಮೇಶನು ತಿಳಿಯಿರಾ ||

ಓಂ ಎಂಬುವ ಅಕ್ಷರ ಬಲ್ಲವನಾದರೆ | ಓಂ ಕಾರ ಬೀಜ ನೋಡುವಿರಾ

ನ ಎಂಬುವ ಅಕ್ಷರ ನೀವರಿತಿರೆಂದರೆ | ನಿರಹಂಕಾರ ಬೀಜ ಕಾಣುವಿರಣ್ಣಾ ||

ಮ ಎಂಬುವ ಅಕ್ಷರ ಬೀಜವ ತಿಳಿದರೆ | ಈರೇಳು ಲೋಕದ ಮರ್ಮ ನೋಡೀರಾ ||

ಶಿ ಎಂಬುವ ಅಕ್ಷರ ಆಕಾಶ | ಆ ಕಾರಣ ಬೀಜವ ಕಾಣಣಾ ||

ವಾ ಎಂಬುವ ಅಕ್ಷರ ವಾವ್ಯಾದಿಗಳ | ಗುರುತ ಹೇಳುವದಣ್ಣಾ ||

ಜ ಎಂಬುವ ಅಕ್ಷರ ಯಾರಿಗೆ ನಿಲುಕಿಲ್ಲ | ತಾನು ತನ್ನನು ಬಲ್ಲನಾ ||

ಷಡಕ್ಷರ ಮುನಿಗಳು ಹೊಸ ಮಂತ್ರ ಹೇಳಿದರು | ಮರುಳ, ಕಾಡಸಿದ್ದ, ಷಣ್ಮುಖ, ಸಿದ್ಧರಾಮ || ಬಬಲಾದಿಯಲ್ಲಿ ಇರುತಾರಣ್ಣಾ ||

ಅಲ್ಲಮ ಪ್ರಭುವಿನ ನಾಮದ ಮಹಿಮೆ (ವಚನ)

ಆ ಎಂಬ ವರ್ಣ ಐಶ್ವರ್ಯ ವರ್ಧಿಪುದು. ಲ ಎಂಬ ವರ್ಣ ಲಕುಲೀಶ ಘನಪದಮಕ್ಕು.