ಕನ್ನಡ ಪರಮಾರ್ಥ ಸೋಪಾನ
ಮ ಎಂಬ ವರ್ಣ ಮಾಯಾಬಿಯನ್ನು ವಾಟಿಪುದು. ಪ್ರ ಎಂಬ ವರ್ಣ ಸತತ ಕಾಯದ ಹೀನ ಗುಣಗಳ ಕತ್ತರಿಸಿ ಬಿಸುಟಿಪುದು, ಪ್ರಭೆಯನು ಕಾಣಿಪುದು.
ಭು ಎಂಬ ವರ್ಣ ಭೂತೇಶ್ವರನ ಕಾಣಿಪುದು. ಒಯ್ಯಾರದಿಂ ನಂಬಿ ಅಲ್ಲಮ ಪ್ರಭು ಎಂಬ ಮಂತ್ರವನು ಜಪಿಸುವದು.
ಶ್ರೀಗುರು ಮಂತ್ರವನ್ನು ತುಂಬ ಪ್ರೀತಿಯಿಂದ ನೆನೆಯುತ್ತಿರು
ಶ್ರೀಗುರುಮಂತ್ರವ ರಾಗದಿ ಜಪಿಸಲು | ಭೋಗಸಂಪತ್ತು ಸುಖವಾಗುವದು
ಮಾಜದ ಮಂತ್ರದ ಮೊದಲಿನಕ್ಷರವನು | ತೇಜಸಿನಲಿ ನಿತ್ಯ ನಡಿಸುವದು
ಬಿಡದೆರಡಕ್ಷರ ನಡುವಿನ ಶೂನ್ಯದಿ | ದೃಢವಿಡಿದಾತ್ಮದಿ ನಿಲಿಸುವದು
ಬರಿದೆ ಮೂರಕ್ಷರ ನಿರುತ ಸೇವಿಸಲು | ದುರಿತಕೋಟಿಗಳೆಲ್ಲ ನೀಗುವವು
ನೀ ಕಲಿ ಸುಮ್ಮನೆ ನಾಲ್ಕು ಅಕ್ಷರಗಳ 1 ಬೇಕೆನಿಸುವ ವಸ್ತು ಸಿಗುತಿಹುದು
ಶಿಶುನಾಳಧೀಶನ ಹೆಸರಿನೈ ದಕ್ಷರ | ಬಿಡದೆ ಜಪಿಸಲಹುದೆನಿಸುವದು
ಎಲ್ಲ ಶಾರೀರಿಕ, ಮಾನಸಿಕ, ಆಕಸ್ಮಿಕ ಸ್ಥಿತಿಗಳಲ್ಲಿ ಪರಮಾತ್ಮನ ನಾಮವನ್ನು ನೆನೆಯಬಾರದೇ? ( ರಾಗ-ಭೂಪ, ತಾಲ- ದೀಪಚಂದಿ )
ಮಾತುಮಾತಿಗೆ ಶಂಕರಾ | ಶ್ರೀಗುರುವೆ | ಸರ್ವೋತ್ತಮನಬಾರದೆ ||
ಜ್ಯೋತಿ-ಸಂಗದಿ ಉರಿದು ಹೋಗುವ ಕರ್ಪುರದಂತೆ || ಪಾತಕ ರಾಶಿಯು ಉರಿದು ಹೋಗುವದಾಗಿ
ಸ್ನಾನಮಾಡುವಾಗ | ನೇಮದಿ ಆತ್ಮನ | ಧ್ಯಾನಮಾಡುವಾಗ ||