ಕನ್ನಡ ಪರಮಾರ್ಥ ಸೋಪಾನ
ಜಾಣತನದಿ ಅನ್ನ ಉಂಡು | ಅಮೃತವನ್ನು | ಪಾನವ ಮಾಡುವ ಕಾಲಕ್ಕೆ ಮನವೆ
ಬೆಟ್ಟವನೇರುವಾಗ | ಕಾಲೂರಿದಲ್ಲಿ | ಥಟ್ಟನೆ ಬೀಳುವಾಗ ||
ಛಳಿಜ್ವರ ಕೆಮ್ಮು ಉಬ್ಬ ಸರೋಗ ಬಂದಾಗ | ಮಳೆಗಾಳಿ ಸಿಡಿಲಿನಾರ್ಭಟದಲ್ಲಿ ಮನವೆ
ಬಿಸಜಾಕ್ಷಿ ನೋಡುವಾಗ | ಕುಳಿತು ನಿತ್ಯ | ಒಸೆದು ಮಾತಾಡುವಾಗ ||
ಅಷ್ಟಭೋಗದಲ್ಲಿ ನಿತ್ಯ ಲೋಲುಪ್ತಿ ಪಡೆಯುವಾಗ | ನಷ್ಟ ದಾರಿದ್ರವು ಬಂದಾಗಲು ಮನವೆ
ಸುಲಿಯುವ ಕಳ್ಳನು ಬಂದಾಗ ಘೋರಾರಣ್ಯದೊಳು | ವ್ಯಾಘ್ರವು ಹರಿಯುವಾಗ
ಗುರುವೆ ಗುರುವೆ, ಕಲ್ಪತರುವೆ ಪಾಲಿಸು ! ಎಂದು | ಗುರುಮಹಾಲಿಂಗನ ನೆನಿಯಲ್ಲೋ ಮನವೆ
ಸಂತರ ಸಂಗದಲ್ಲಿ ಉತ್ಸಾಹಿತರಾಗಿ, ಪರಮಾತ್ಮನಲ್ಲಿ ಬೆರೆಯಬೇಕು ( ರಾಗ-ಶಂಕರಾಭರಣ, ತಾಲ-ದೀಪಚಂದಿ )
ನಿನ್ನ ನಿಜವ ನೀ ನೋಡೋ | ಅನುಮಾನಿಸ ಬ್ಯಾಡೋ
ತನು ನೆನಪ ಪೋಗಿ | ಘನ ಸುಖವಾಗಿ ||
ಜನನ ಮರಣ ಭಯ ನೀಗಿ | ಪರಬ್ರಹ್ಮ ತಾನಾಗಿ
ಮರಳಿ ಮರಳಿ ಹುಟ್ಟಿ | ಮರವಿಗೆ ಮೈ ಕೊಟ್ಟ ||
ಗರಿಗಟ್ಟಿ, ಶರಣರೊಳಾಡೊ | ಅನುಭವಕ್ಕೆ ಕೂಡೊ
ಒಡೆಯ ನೀರಲಕೇರಿ | ನುಡಿ ಪಂಚಾಕ್ಷರಿ ||
ಒಡೆಯನ ಒಲಿಸಿ ಒಡಗಡೆ | ಸಂಸಾರಕ ಕೆಡೋ