ಪ್ರಕರಣ ಹದಿಮೂರು ಪರಮಾತ್ಮನ ನಾಮ (ಭಾಗ ೨)
ದೇವರ ನಾಮವನ್ನು ಕುರಿತು ಉದ್ಯಾನವಿದ್ಯೆಯ ಮಹಾರೂಪಕ ( ರಾಗ-ಬಿಹಾರ, ತಾಲ-ಕೇರವಾ )
ಹರಿನಾರಾಯಣ | ಗುರು ನಾರಾಯಣ | ಹರಿನಾರಾಯಣ ಎನು ಮನವೆ ||
ನಾರಾಯಣವೆಂಬೊ ನಾಮದ ಬೀಜವ | ನಾರದ ಬಿತ್ತಿದ ಧರೆಯೊಳಗೆ
ತರಳ ಧ್ರುವನಿಂದಂಕುರಿಸಿತು ಅದು | ವರ ಪ್ರಹ್ಲಾದನಿಂ ಮೊಳಕ್ಕಾಯಿತು ||
ಧರುಣಿಪ ರುಕ್ಕಾಂಗದನಿಂದೆ ಚಿಗುರಿತು | ಕುರುಪಿತಾಮಹನಿಂದ ಹೂವಾಯಿತು
ವಿಜಯನ ಸತಿಯಿಂದ ಕಾಯಾಯಿತು ಆದು | ಗಜರಾಜನಿಂದ ದೊರೆ ಹಣ್ಣಾಯಿತು ||
ಶ್ರೀ ಶುಕಮುನಿಯಿಂದೆ ಫಲ ಪಕ್ವವಾಯಿತು | ಅಜಾಮಿಳ ತಾನುಂಡು ರಸ ಸವಿದಾ .
ಕಾಮಿತ ಫಲವೀವ ನಾಮವೊಂದಿರಲಿಕ್ಕೆ | ಹೋಮ ನೇಮ ಜಪ ತಪನ್ಯಾಕೆ ||
ಸ್ವಾಮಿ ಶ್ರೀ ಪುರಂದರ ವಿಠಲನ ಪಾದವ | ಏಕೋ ಭಾವದಿ ನೆನೆ ಮನವೆ
ಪರಮಾತ್ಮನ ದಿವ್ಯನಾಮವು ಸಮ್ಮನೆ ದೊರೆಯಲರಿಯದು ( ರಾಗ-ಆನಂದಭೈರವಿ, ತಾಲತ್ರಿಪುಟ)
ಸುಮ್ಮನೆ ದೊರಕುವದೇನೋ ಶ್ರೀರಾಮನ ದಿವ್ಯನಾಮವು | ಜನ್ಮ ಜನ್ಮಾಂತರದಾ ದುಷ್ಕರ್ಮ ಹೋದವಗಲ್ಲದೆ
ಕಂತುವಿತನ ದಿವ್ಯನಾಮ ಅಂತರಂಗದೊಳಗಿಟ್ಟು ! ಚಿಂತೆಯೆಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ
ಭಕ್ತಿರಸದಲ್ಲಿ ತನ್ನ ಚಿತ್ತ ಪರವಶವಾಗಿ | ಅಚ್ಯುತನ್ನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ