ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಪ್ರೇಮದ ಹರಿಭಕ್ತ ಪುಂಡಲೀಕಾ | ರಾಮ ರಾಮ ರಾಮ ಸಾರ್ವ ಜನಕ

ಆತ್ಮನ ಸವಿಯನ್ನು ನೋಡಿದವರು | ತುಂಬರ ನಾರದ ಪುರಂದರದಾಸರು |

ಅಂಬರೀಷ ಋಷಿಗಳು ದುರ್ವಾಸರು | ತುಂಬಿಕೊಂಡರು ತಾವು ವ್ಯಾಸರಾಯರು

ಹರಿ ಹರಿ ಹರಿಯ ಸ್ಮರಣೆ ಮಾಡಬೇಕು | ಮೂರು ಗುಣಗಳಳಿದಿರಬೇಕು ||

ಬಿರುದ ಸಾರುತಿವೆ ವೇದ ನಾಲ್ಕು | ಪರಮ ಭಕ್ತ ಭೀಮದಾಸ ಸಾರ್ವ ಜನಕೆ

ದೇವರ ನಾಮವು ಕಾಮ ಪೂರೈಸುವ ಕಾಮಧೇನು

ಕರೆಯದಲೆ ಬಂದಿಹುದು- ಕರದುಣ್ಣಲಿಲ್ಲ ಹರಿನಾಮ ಕಾಮಧೇನುವನು

ನೆನವರ ಹೊರಿಯಲು ಅನುವಾಗಿ ಬಂದಿರಲು | ಮನುಜ ಮೈಮರೆವರೆ ನೀನು

ಮನವೆಂಬ ಕರುಬಿಟ್ಟು, ಘನಭಕ್ತಿ ಮುರವಿಟ್ಟು | ತನುವಿನ ಪಾತ್ರಿಲಿ ನೀನು

ಕರುಣ ಕೆಚ್ಚಲ ತೊರೆದು ಭೋರ್ಗರೆಯಲು | ಅರುವೆಂಬ ಕೈಯಿಂದ ನೀನು

ಗುರು ಮಹಿಪತಿ ಕಂದಗರುಹಿದ ನಿಜಾನಂದ | ಸಿರಿಸುಖ ಪಡಿಯ ನೀನು

ಡಾಂಭಿಕ ಸಂತರೂ ನಿಜವಾದ ಸಂತರೂ (ರಾಗ-ಪುರಿಯಾಧನಾಶಿ, ತಾಲ-ದೀಪಚಂದಿ)

ದಾಸನೆಂದರೆ ಪುರಂದರ ದಾಸನಯ್ಯ ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ

ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು | ದಾಸನೆಂದು ತುಲಸಿಮಾಲೆ ಧರಿಸಿ ||

ಬ್ಯಾಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ | ಕಾಸು ಗಳಿಸುವ ಪುರುಷ ಹರಿದಾಸನೇ ?