ಕನ್ನಡ ಪರಮಾರ್ಥ ಸೋಪಾನ
ಕದಿ ಹರಿಸ್ಮರಣೆಯ ಮಾಡಿ ಜನರ ಮುಂದೆ | ವ' ಸಂಭ್ರಮದಿ ತಾನುಂಬ ಊಟ ಬಯಸಿ ||
ಂಬುಜವ ಪಿತನ ಆಗಮಗಳರಿಯದೆ | ತಂಬೂರಿ ಮೀಟುವವ ಹರಿದಾಸನೇ ?
ಮಾಯವಾದನ ಮಾಡಿ ವಿಪ್ರರಿಗೆ ಮೃಷ್ಟಾನ್ನ | ಪ್ರಿಯದಲೆ ತಾನೊಂದು ಕೊಡದ ಲೋಭಿ ||
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು | ಗಾಯನವ ಮಾಡಿದವ ಹರಿದಾಸನೇ ?
ಪಾತಕನ ತೆರನಂತೆ ಪದಗಳನು ತಾ ಬೊಗಳಿ | ಕೂಟ ಜನರ ಮನವ ಸಂತೋಷಪಡಿಸಿ ||
ಗೂಟನಾಮವನಿಟ್ಟು ಕೊಟ್ಟರಿಗೆ ತಾನೆನುತ | ತೋಟಕ ಮಾಡಿದವ ಹರಿದಾಸನೇ ?
ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ | ವಾತಸುತನಲ್ಲಿಹನ ವರ್ಣಿಸುತಲಿ |
ಗೀತನರ್ತನದಿಂದ ಕೃಷ್ಣನ್ನ ಪೂಜಿಸುವ | ಪೂತಾತ್ಮ ಪುರಂದರದಾಸನಿವನಯ್ಯ
ಭಕುತಿ ಭಾವವಿಲ್ಲದ ಗಾನವು ಪರಮಾತ್ಮನಿಗೆ ರುಚಿಸದು (ರಾಗ-ಭೈರವಿ, ತಾಲ-ದೀಪಚಂದಿ)
ಹೇಳನೋ ಹರಿ ತಾಳನ ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ
ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು | ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ||
ತು೦ಬರ ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಿಕರ ಕೂಗಾಟ
ನಾನಾ ಬಗೆಯ ರಾಗ ಭಾವ ತಿಳಿದು ಸ್ವರ | ಜ್ಞಾನ ಮನೋಧರ್ಮ ಜಾತಿಯಿದ್ದು |
ದಾನವಾರಿಯ ದಿವ್ಯ ನಾಮರಹಿತವಾದ | ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು
ಅಡಿಗಡಿಗಾನಂದಬಾಷ್ಪ ಪುಳಕದಿಂದ | ನುಡಿ ನುಡಿಗೆ ಶ್ರೀಹರಿ ಎನ್ನುತ
ದೃಢ ಭಕ್ತರನು ಕೂಡಿ ಹರಿಕೀರ್ತನೆ ಮಾಡಿ | ಕಡೆಗೆ ಪುರಂದರವಿಠಲನೆಂದರೆ ಕೇಳುವ