ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕಾ ೦ ಡ೫೩ ನೆ ಆ ಧ ಯ , ಕಂಡು ನೀನು ಕೊಟ್ಟ ಕಂದಮಲ ಫಲಾಹಾರಗಳಿಂದ ಹಸಿವು ತೃಪೆಗಳನ್ನು ತೀರಿಸಿಕೊಂಡೆವು ; ನೀನು ಹಸಿವು ತೃಪೆಗಳಿಂದ ಕಂಗೆಟ್ಟು ಶರೀರವನ್ನು ಬಿಡುತ್ತಿದ್ದ ನಮ್ಮನ್ನು ಕೃಪೆಯಿಂದ ರಕ್ಷಿಸಿದೆ ! ಎಲ್ ಸ್ವಯಂಪ್ರಭೆಯ, ನಿನ ಗೆ ನಾವು ಮಾಡುವ ಪ್ರತ್ಯುಪಕಾರವೇನು ಹೇಳು ” ಎಂದು ಕೇಳಿದನು. ಆ ಮಾತನ್ನು ಕೇಳ ಸ್ವಯಂಪ್ರಭೆಯು ಈ ಎಲೈ ಹನುಮಂತನ, ಬಲವಂತರಾದ ನಿಮಗೆ ಆತಿಥ್ಯವನ್ನು ಮಾ ಡಿ ನಾನು ಸುಪ್ರೀತಳಾದೆನು ; ಧರ್ಮಾಚರಣೆಯನ್ನು ಮಾಡಿಕೊಂಡಿರುವ ನನಗೆ ಮತ್ತೊಬ್ಬರಿಂದ ಪಡೆಯತಕ್ಕ ಕಾರ್ಯವಿಲ್ಲ” ಎಂದು ನುಡಿದಳು. ಹನುಮಂತನು ಎಲ್ ಸ್ವಯಂಪ್ರಭೆಯು, ನಾವೆಲ್ಲರೂ ಧರ್ಮಾಚಾರಿಯಾದ ನಿನ್ನ ಮರೆಹೊಕ್ಕವು : ಸು ಗ್ರೀವನು ಒಂದು ತಿಂಗಳಳಗೆ ಬರಹೇಳಿ ನಮಗೆ ಇಟ್ಟುಮಾಡಿ ಕಳುಹಿಸಿದನು ; ನಮಗೆ ಆ ಗಡುವು ಮಾರಿಬಂತು ; ಈ ಬಿಲವನ್ನು ದಾಟಿಸಿ ಸುಗ್ರೀವನ ಭಯದಿಂದ ಕಂಗೆಟ್ಟಿರುವ ನಮ್ಮನ್ನು ರಕ್ಷಿಸು ; ನಾವು ಇಲ್ಲಿ ಬಂದದ್ದರಿಂದ ಕಾರವಿಳಂಬವಾಗಿ ಪ್ರವಣಾತೀತವಾದ ದಂಡನೆಯು ಬಂತು” ಎಂದು ನುಡಿದನು. ಆ ಮಾತನ್ನು ಕೇಳ ಸ್ವಯಂಪ್ರಭೆಯು ಹನುಮಂತನನ್ನು ಕುರಿತು “ ಎಳ್ಳೆ ಹನುಮಂತನೆ, ಈ ಬಿಲಕ್ಕೆ ಬಂದು ಬಿಸಿಯಾದರೂ ಬರುವದಿಲ್ಲ; ಬಂದ ಪಕ್ಷದಲ್ಲಿ ಜೀವಸಹಿತವಾಗಿ ತಿರುಗಿ ಹೋಗುವದಿಲ್ಲ ; ಹಾಗಾದರೂ ನಿಮ್ಮ ಮೇಲಣ ಕೃಪೆಯಿಂದ ನನ್ನ ತಪೋವನದಿಂದ ನಿಮ್ಮೆಲ್ಲರನ್ನು ಈ ಬಿಲದಿಂದ ದಾಟಿಸುತ್ತೇನೆ ; ನೀವೆಲ್ಲರೂ ಕಣ್ಣುಗಳನ್ನು ಮುಚ್ಚಿಕೊಳ್ಳಿ ; ಯಾರಿಗೂ ಕಣ್ಣು ಮುಚ್ಚದೆ ಈ ಬಿಲದಿಂದ ಹೊರಡುವದಕ್ಕೆ ಶಕ್ಯವಲ್ಲ” ಎಂದು ನುಡಿದಳು, ಆ ಮಾತನ್ನು ಕೇಳಿ ಹನುಮಂತನು ಮೊದಲಾದ ಕಪಿ ನಾಯಕರು ತಮ್ಮ ಕೋಮಲವಾದ ಬೆರಳುಗಳಿಂದ ಕಣ್ಣುಗಳನ್ನು ಮುಚ್ಚಿಕೊಂಡರು ; ಆಮೇಲೆ ಕಣ್ಣು ಮುಚ್ಚಿಕೊಂಡಿದ್ದ ಆ ಕಪಿನಾಯಕರನ್ನು ಧರ್ಮಾಚಾರಿ ಯಾಗಿ ತಪಸ್ಸಿನಿಯಾದ ಸ್ವಯಂಪ್ರಭೆಯು ಕಣ್ಣು ಮುಚ್ಚಿ ತೆರೆಯುವಹೊತ್ತಿನೊಳಗಾಗಿ ಬಿಲದಿಂದ ಹೊರಗೆ ಕರೆತಂ ದು ಅವರನ್ನು ಸಂತವಿಟ್ಟು ಅವರನ್ನು ಕುರಿತು “ ಎಲೈ ಕಪಿ ನಾಯಕರುಗಳಿರಾ, ನೀವಿನ್ನು ಕಣ್ಣು ತೆರೆದು ನೋಡಿ ; ಇದು ವಿಂಧ್ಯಪರ್ವತವು ; ಈ ಪರ್ವತವು ನಾನಾವೃಕ್ಷಗಳಿಂದಲೂ ಬಳ್ಳಿಗಳಿಂದಲೂ ಅತಿ ರಮಣೀಯವಾಗಿದೆ ! ಇದು ಮಾಲ್ಯವಂತವು ; ಇದು ತೆಂಕಣ ಸಮುದ್ರವು ; ಇನ್ನು ನೀವು ನಿಮ್ಮ ಮನಸ್ಸು ಬಂದಬಳಿಗೆ ಹೋಗಿ ಸುಖ ವಾಗಿರೀ ? ನಾನು ಸ್ವಯಂಪ್ರಕಾಶದೇಶಕ್ಕೆ ಹೋಗುತ್ತೇನೆ” ಎಂದು ಸ್ವಯಂಪ್ರಕಾಶದೇಶಕ್ಕೆ ಹೋದಳು. ಬಟ ೫೩ ನೆ ಅ ಧ್ಯಾ ಯು . ಅ೦ ಗ ದಾ ದಿ ಗ ಳ ತಾ ದೆ ವಿ ಯ ನ್ನು ಕನಿ ೧ ದೆ ಚಿ೦ ತಿ ನಿ ದ್ದು , ಆಮೇಲೆ ಹನುಮಂತನು ಮೊದಲಾದ ಕವಿನಾಯಕರು ನಾನಾವನ ಭೂಮಿಗಳಿಂದ ಸುತ್ತುವರಿಯಲ್ಪಟ್ಟದ್ದಾಗಿ ಆಳವರಿಯದ್ದಾಗಿ ಭಯಂಕರವಾಗಿ ಅಲ್ಲೋಲಕಲ್ಲೋಲವಾದ ಕೆರೆಗಳಿಂದ ಮೆರೆಯುತಿದ್ದ ವರುಣನ ಆವಾಸಸಣ್ಣ ನವಾದ ಸಮುದ್ರವನ್ನು ಕಂಡು ಮೊದಲು ಮಯನೆಂಬ ದೇವಶಿಲ್ಪಿಯಿಂದ ನಿರ್ಮಿಸಲ್ಪಟ್ಟ ಸ್ವಯಂಪ್ರಕಾಶದೇಶವ ನ್ನು ಹೊಕ್ಕು ಹೋದ್ದರಿಂದ ಸುಗ್ರೀವನು ಒಂದು ತಿಂಗಳೊಳಗಾಗಿ ಬರಬೇಕೆಂದು ಕಟ್ಟಳಮಾಡಿದ್ದನ್ನು ಸ್ಮರಿಸಿ ಆ ಕಾಲದ ಮಿತಿಯು ತಪ್ಪಿದ್ದರಿಂದ ಆತನಿಂದ ಏನು ಉಪದ್ರವ ಬರುವರೋ ಎಂದು ಚಿಂತಿಸುತ ಆ ವಿಂಧ್ಯಪರ್ವ ತದ ತಪ್ಪಲಲ್ಲಿ ಪುಸಿತವಾದ ವನದಲ್ಲಿ ಕುಸುಮಿತವಾದ ಆದಾರಗಂಚೀ ಗಿಡಗಳನ್ನು ನೋಡಿ ಆ ಗಿಡಗಳು ವಸಂತ ಕಾಲ ಬರದೇ ಕುಸುಮಿತವಾಗವಾದ್ದರಿಂದ ವಸಂತಕಾಲವು ಬಂತೆಂದೂ ಮುಂದೆ ಸುಗ್ರೀವನ ದಂಡದಿಂದ ಬದುಕಿರು