ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ವದಕ್ಕಿಲ್ಲವೆಂದೂ ಒಬ್ಬರೊಬ್ಬರಿಗೊಬ್ಬರು ಹೇಳಿಕೊಳ್ಳುತ ಕಂಗೆಟ್ಟು ಮೂರ್ಛಾಗತರಾಗಿ ಬಿದ್ದರು ! ಆ ಸಮಯ ದಲ್ಲಿ ಸಿಂಹದ ಹಕ್ಕಿನಂತೆಯ ವೃಷಭದ ಹೆಕ್ಕಿನಂತೆಯ ಹಕ್ಕತ್ತುಳ್ಳವನಾಗಿ ಘನಗಾತ್ರವಾಗಿ ನಿಡಿದಾಗಿ ಮವರ್ತುಳವಾದ ಭುಜಗಳುಳ್ಳವನಾಗಿ ಮಹಾ ಪ್ರಜ್ಞನಾಗಿ ಚಿಕ್ಕರಾಯನಾದ ಅಂಗದಕುಮಾರನು ವೃದ್ಧರಾಗಿ ಭಯದಿಂದ ಮೂರ್ಛಾಗತರಾದ ಆ ಕಪಿನಾಯಕರನ್ನು ಕುರಿತು ಅತ್ಯಂತ ಮೃದುನುಡಿಯಿಂದ “ ಎಳ್ಳೆ ಆಪಿನಾರು ಕರುಗಳರ, ನಾವೆಲ್ಲರು ಕಪೀಶ್ವರನಾದ ಸುಗ್ರೀವನ ಆಜ್ಞೆಯಿಂದ ನೀತಾದೇವಿಯನ್ನರಸುವದಕ್ಕೆ ತೆಂಕಣದಿಕ್ಕಿಗೆ ಬಂದು ಅನೇಕ ಸ್ಥಳಗಳಲ್ಲಿ ಅರಸಿ ಕಾಣದೆ ಆ ಬಿಲವನ್ನು ಹೊಕ್ಕು ನೋಡುವದರೊಳಗಾಗಿ ಸುಗ್ರೀವನು ಮಿತಿ ಮಾಡಿದ ಒಂದು ತಿಂಗಳು ತುಂಬಿತು ; ನೀವು ಅದನ್ನು ವಿಚಾರಿಸಿ ನೋಡೀ; ನಾವು ಆಶ್ವಿಜಮಾಸದ ಪ್ರಥಮದಿವಸ ದಲ್ಲಿ ಹೊರಟುಬಂದೆವು; ಆ ತಿಂಗಳು ತುಂಬಿತು ; ನೀವೆಲ್ಲರು ನೀತಿಮಾರ್ಗವನ್ನು ಬಲ್ಲವರು ; ಮುಂದಣ ಕಾರೈಸಿ ತಿಗೆ ತಕ್ಕ ಆಲೋಚನೆಯನ್ನು ಕಾಣಲೇ ; ನೀವು ಯಾವಾಗಲು ಒಡೆಯನಿಗೆ ಹಿತವಾದ ಕಗ್ಗದಲ್ಲಿ ಪ್ರೀತಿಯುಳ್ಳವ ರು ; ಅದಲ್ಲದೆ ಎಂಥಾ ಕಾರೈದಲ್ಲಿಯು ನಿಪುಣರೆಂದು ಲೋಕದಲ್ಲಿ ಪ್ರಸಿದ್ದಿಯನ್ನು ಪಡೆದವರು; ಅಂಥಾ ನೀವು ನನ್ನ ನ್ನು ಮುಂದಿಟ್ಟುಕೊಂಡು ಸುಗ್ರೀವನಿಂದ ಕಳುಹಿಸಿಕೊಂಡು ಬಂದಮೇಲೆ ಬಂದ ಕಾರೈವನ್ನು ಸಾಧ್ಯವಾಡದ ಮೇಲೆ ನನ್ನ ಶರೀರಗಳನ್ನು ತೊರೆದುಕೊಳ್ಳುವದೇ ಕಾಠ್ಯವು ; ಈ ಅರ್ಥದಲ್ಲಿ ಸಂಶಯವಿಲ್ಲ; ಸುಗ್ರೀವನು ಬಂದು ಕಾರ್ಯವನ್ನು ಇಷ್ಟು ದಿನಗಳೊಳಗಾಗಿ ಮಾಡಿಕೊಂಡು ಬರಬೇಕೆಂದು ಕಟ್ಟಳಮಾಡಿ ಕಳುಹಿಸಿದರೆ ಆ ಕಾಲವನ್ನು ಮೂಾರಿ ಲೋಕದಲ್ಲಿ ಬದುಕುವವರಾರು ! ಸುಗ್ರೀವನು ಸ್ವಭಾವದಿಂದ ಮಹಾ ಶೂರನು ; ಅದರಮೇಲೆ ನಮಗೆಲ್ಲರಿ ಗೂ ಒಡೆಯನು; ಆತನ ಕಾರೈವನ್ನು ಮಾಡದಿದ್ದರೆ ನಮಗೆ ಶರೀರವನ್ನು ಬಿಡುವದೇ ಕಾರೈವು ; ನನಗೆ ಶ್ರೀರಾ ಮನು ಚಿಕ್ಕರಾಯಪಟ್ಟವನ್ನು ಕೊಟ್ಟನಲ್ಲದೆ ಸುಗ್ರೀವನು ಕೊಡಲಿಲ್ಲ ; ಸುಗ್ರೀವನು ಮೊದಲೇ ನನ್ನಲ್ಲಿ ವೈರವು ಇವನು ; ಈಗ ಆತನ ಕಾರ್ಯವನ್ನು ಮಾಡದೆ ತಿರಿಗಿ ಹೋದೆನಾದರೆ ನನ್ನನ್ನು ಆಜ್ಞೆ ಮಾಡಿಸುವನು; ಈ ಅ ರ್ಥದಲ್ಲಿ ಸಂಶಯವಿಲ್ಲ ; ಸುಗ್ರೀವನು ನನಗೆ ಪ್ರೋಣಾಂತೃವಾದ ಆಜ್ಞೆಯನ್ನು ಮಾಡಿದರೆ ನನ್ನ ದುಃಖವನ್ನು ನೆ ಡುವಂಥಾ ನನ್ನ ಮಿತ್ರರಿಗೆ ದುಃಖವುಂಟಾಗುವದಾದ್ದರಿಂದ ನಾನು ಈ ಪುಣ್ಯಸ್ಥಳವಾದ ಸಮುದ್ರ ತೀರದಲ್ಲಿ ಶರೀರ ವನ್ನು ಬಿಡುವದೇ ಕಾರ್ಯವು ” ಎಂದು ನುಡಿದನು. ಆ ಮಾತನ್ನು ಕೇಳಿ ಹನುಮಂತನು ಮೊದಲಾದ ಆಪಿನಾಯಕರು ಅತಿ ದೈನ್ಯದಿಂದ ಆಂಗದಕುಮಾರನನ್ನು ಕುರಿತು “ ಎಲೈ ಅಂಗದಕುಮಾರನೆ, ಸುಗ್ರೀವನು ಪ್ರಭಾವದಿಂದ ಮಹಾ ಕೂರಬುದ್ದಿಯುಳ್ಳವನು ; ಮತ್ತೂ ಶ್ರೀರಾಮನಿಗೆ ಮಹಾ ಪ್ರಯಭಕ್ತನು ; ಆತನು ಹೇಳಿದ ಸಮಯವು ಮಿಾರಿತು ; ಸೀತಾದೇವಿಯನ್ನು ಕಾಣದೆ ನಾವು ಆತನ ಬಳಿಗೆ ಹೋದರೆ ಆತನು ಶ್ರೀರಾಮನಿಗೆ ತನ್ನ ವಿಶ್ವಾಸವನ್ನು ತೋರಿಸಬೇಕೆಂದು ನನ್ನನ್ನು ಕೊಲ್ಲಿಸುವ ನು; ಈ ಅರ್ಥದಲ್ಲಿ ಸಂಶಯವಿಲ್ಲ ; ಲೋಕದಲ್ಲಿ ಅಪರಾಧವನ್ನು ಮಾಡಿದವರು ಒಡೆಯನ ಸವಿಾರಕ್ಕೆ ಹೋಗು ವದು ಕಾರ್ಯವಲ್ಲ; ನಾವು ಸಾಮಾನ್ಯ ಪುರುಷರಲ್ಲ ; ಆತನ ಪ್ರಧಾನರಾದ ಗುರಿಕಾರರು ; ನಾವು ಇಲ್ಲೇ ಇದ್ದು ಸೀತಾದೇವಿಯನ್ನರಸುವದಕ್ಕೆ ತಕ್ಕ ಕಾರೈವನ್ನು ಕಾಣಬೇಕಲ್ಲದೆ ಸೀತಾದೇವಿಯನ್ನು ಕಾಣದೆ ಸುಮ್ಮನೆ ಹೋ ದರೆ ಯಮಲೋಕವನ್ನೋದುವವು ; ಈ ಅರ್ಥದಲ್ಲಿ ಸಂಶಯವಿಲ್ಲ” ಎಂದು ನುಡಿದರು. ಆ ಮಾತನ್ನು ಕೇಳ ಶಾರನು ಎಲ್ಲ ಕಪಿನಾಯಕರುಗಳರ, ನನ್ನ ದೊಂದು ಯೋಚನೆಯನ್ನು ಕೇಳಿ ನೀ ವು ದುಃಖವನ್ನು ಬಿಡೀ ; ದಾನವಶಿಲ್ಪಿಯಾದ ಮಯನಿಂದ ನಿರ್ಮಿಸಲ್ಪಟ್ಟು ಪ್ರಾಣಿಗಳಿಗೆ ಪ್ರವೇಶಮಾಡುವದಕ್ಕೆ ಅಸಾಧ್ಯವಾದ್ದಾಗಿ ಮನೋಹರವಾದ ವೃಕ್ಷಗಳೂ ಕಂದಮಲಫಲ ಸಾದಕಗಳ ಉಳ್ಳ ಆ ಬಿಲವನ್ನು ಹೊ “ಹೋಗಿ ಸುಖದಲ್ಲಿರೋಣ; ಈ ಬಿಲದಲ್ಲಿದ್ದರೆ ದೇವೇಂದ್ರನಿಂದಲಾದರೂ ಶ್ರೀರಾಮನಿಂದಲಾದರೂ ಸುಗ್ರೀವನಿಂ ದಲಾದರೂ ನಮಗೆ ಭಯವಿಲ್ಲ” ಎಂದು ನುಡಿದನು,