ಪುಟ:ಕಬ್ಬಿಗರ ಕಾವಂ ೨.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೀಠಿಕೆ. - - - - - -ಕವಿಚರಿತ್ರೆಈ ಗ್ರಂಥಕರ್ತನ ಹೆಸರು ಆಂಡಯ್ಯನು. ಈತನು ಆಂಡಯ್ಯನ ಮಕ್ಕ ಳಾದ ಸಾಂತ, ಗುಮ್ಮಟ, ವೈಜಣರಲ್ಲಿ ಹಿರಿಯನಾದ ಸಾಂತನ ಮಗನು (೧೦) ಈತನ ತಾಯಿ ಬಲ್ಲವ್ವ (೧೧) ಈತನು ಜೈನಮತಕ್ಕೆ ಸೇರಿದವನು (೧೩) ಈ ತನು ತನ್ನ ತಾತನನ್ನು ಲೆಕ್ಕಿಗರಪಿರಿಯಂ” ಎಂದೂ (F), ತನ್ನನ್ನು ಲೆಕ್ಕಿಗರ ರಸಂ” (೧೧) ಎಂದೂ ಹೇಳಿಕೊಳ್ಳುತ್ತಾನೆ. ಈತನು ಗ್ರಂಧಾಂತದ ಗದ್ಯದಲ್ಲಿ ತನ್ನ ಗುರು, ಬಿರುದು ಮುಂತಾದುವನ್ನು ಹೇಳಿಕೊಂಡಿಲ್ಲ. ಈ ಗ್ರಂಥಾವತರಣ ದಲ್ಲಿ ಕನ್ನಡನಾಡನ್ನು ವಣರ್ಿಸಿರುವದರಿಂದಲೂ (೧೯), ಗ್ರಂಧಾಂತ್ಯದಲ್ಲಿ ಈ ಗ್ರಂಧವು “ಗೊಸಣಲೆ ಮಾವನ್ನ ಮಿದು ರಾಯನ ನಾಟ್ಕಳ್ಳಿರ್ಕ ನಿಚ್ಚ ಮುಂ• (೩೪೮) ಎಂದು ಹೇಳುವುದರಿಂದಲೂ, ಕನ್ನಡದೇಶವೇ ಈತನ ದೇಶವಾಗಿರಬಹುದು, ಈ ಕವಿಯು ಕ್ರಿ. ಶ. ೧೦ನೆಯ ಶತಮಾನದಲ್ಲಿದ್ದ ರನ್ನನನ್ನೂ, ೧೨ನೆಯ ಶತ ಮಾನದಲ್ಲಿದ್ದ ಅಗ್ಗಳನನ್ನೂ, ೧೩ನೆಯ ಶತಮಾನದ ಆದಿಯಲ್ಲಿದ್ದ (ಕೇಶಿರಾಜನ ಮಾವನಾದ) ಜನ್ನನನ್ನೂ (೪) ಹೊಗಳಿರುತ್ತಾನೆ. ಜನ್ನನ ಸಮಕಾಲಿಕನಾದ (ಕೇಶಿರಾಜನ ತಂದೆಯಾದ) ಮಲ್ಲಿಕಾರ್ಜುನನು ತನ್ನ ಆಸಕ್ತಿ ಸುಧಾರ್ಣವ ದಲ್ಲಿ ಈ ಗ್ರಂಥದ ೩೩೭೩೩೯,೩೪೦ನೆಯ ಪದ್ಯಗಳನ್ನು ಉದಾಹರಿಸಿರುತ್ತಾನೆ. ಆದುದರಿಂದ ಈ ಕವಿಯು ೧೩ನೆಯ ಶತಮಾನದ ಆದಿಯಲ್ಲಿದ್ದಿರ ಬಹುದು, ಈ ಕವಿಯಿಂದ ಉದ್ದಾಮಕವಿಗಳ ಗುಂಪಿನಲ್ಲಿ ಸೇರಿಸಲ್ಪಟ್ಟ ಕಣ್ಣಮಯ್ಯನು ಮಲ್ಲಿಕಾರ್ಜುನನಿಗಿಂತ ಆಧುನಿಕನೆಂದು ಮೇ || ರೈಸರವರು ಹೇಳುವದು ಸರಿ ಯಾಗಿ ಕಾಣುವದಿಲ್ಲ. ಈತನು ರಚಿಸಿದ ಇತರ ಗ್ರಂಥಗಳೇನೂ ಗೊತ್ತಿಲ್ಲ, ಈತನ ಕವಿತಾಶೈಲಿಯು ಬಹಳ ಸರಳವಾಗಿದೆ. ಈತನು ಪ್ರಯೋಗಿಸುವ ಪದಗಳ ಮೈತ್ರಿಯು ಬಹಳ ರಮಣೀಯವಾಗಿದೆ.