________________
೯b ವೈಜ್ಞಾನಿಕ ಸಮಾಜವಾದ ಸಮಾಜವೆಂದು ಟೀಕಿಸಿದ್ದರೋ ಅದೇ ವಾದಸರಣಿಯನ್ನು ಮುಂದುವರಿ ಸಿದರು. ಸ್ನೇಹದ ಮೂಲಕ, ಕ್ರಿಸ್ತಮತದ ದೀನತ್ವದ ಮೂಲಕ, ಮನವನ್ನು ಒಲಿಸಿಕೊಳ್ಳುವುದರ ಮೂಲಕ, ದಾನದ ಮೂಲಕ ಅಲ್ಪ ಸ್ವಲ್ಪ ಸುಧಾರಣೆ ಗಳ ಮೂಲಕ ಮತ್ತು ಮುನಿಸಿಪಾಲಿಟಿಗಳ ಮೂಲಕ ಸಮಾಜವಾದದ ಸ್ಥಾಪನೆಗೆ ನಿಂತರು. ಈ ರೀತಿಯಲ್ಲಿ ಆರಂಭವಾದ ಸುಧಾರಣಾ ಧೋರಣೆ ವಿವಿಧ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಪ್ರಚಾರಕ್ಕೆ ಬಂದವು. ಹೀಗೆ ಪ್ರಚಾರಕ್ಕೆ ಬಂದವುಗಳಲ್ಲಿ ಇಂಗ್ಲೆಂಡ್ ದೇಶದಲ್ಲಿ ಸ್ಥಾಪನೆ ಹೊಂದಿದ ಫೇಬಿಯನ್ ಸಂಘ (Fabian Society) ಮತ್ತು ಫೇಬಿಯನ್ ತತ್ವದ ಅನುಯಾಯಿಯಾಗಿ ಹೊರಬಿದ್ದ ಬ್ರಿಟಿಷ್ ಕಾರ್ಮಿಕ ಪಕ್ಷ (British Labour Party) ಮುಖ್ಯವಾದವುಗಳು, 1871 ರ ನಂತರ ಕಾರ್ಮಿಕವರ್ಗದ ಚಳವಳಿ ಇಳಿಮುಖವಾಗಲು ಬಂಡವಾಳಶಾಹಿ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲು ಇದ್ದ ಅವಕಾಶ ಗಳೇ ಕಾರಣವಾಗಿದ್ದವು. ಮುಖ್ಯವಾಗಿ ಬಂಡವಾಳಶಾಹಿ ರಾಷ್ಟ್ರಗಳು ವಸಾ ಹತುಗಳ ಕಡೆ ನುಗ್ಗಿದವು. ಅತ್ಯಧಿಕ ಲಾಭವನ್ನು ವಸಾಹತುಗಳು ಕೊಟ್ಟವು. ಈ ಲಾಭದಿಂದ ಕಾರ್ಮಿಕವರ್ಗದ ಹಲವು ಬೇಡಿಕೆಗಳನ್ನು ಸಣ್ಣ ಪುಟ್ಟ ಪ್ರಮಾಣದಲ್ಲಿ ತಣಿಸಿ, ಕಾರ್ಮಿಕರ ಚಳವಳಿಯನ್ನು ಕುಗ್ಗಿಸಲು ಬಂಡವಾಳ ವರ್ಗಕ್ಕೆ ಸಾಧ್ಯವಾಯಿತು. ಆದರೆ ಇದು ಬಹುಕಾಲ ಸಾಗಲಿಲ್ಲ, ದೀರ್ಘ ಕಾಲ ವಸಾಹತುಗಳ ಶೋಷಣೆಯಾಗಲೀ ಅಥವ ಅಮಿತ ಪ್ರಮಾಣದಲ್ಲಿ ವಸಾಹತುಗಳನ್ನು ಹೊಂದುವುದಕ್ಕಾಗಲೀ ಸಾಧ್ಯವಿರಲಿಲ್ಲ. ಆದುದರಿಂದ ಅಳಿದುಳಿದ ವಸಾಹತುಗಳಿಗಾಗಿ ನೂಕುನುಗ್ಗಲು ಆರಂಭವಾಯಿತು. ವಸಾಹತುಗಳಿಗಾಗಿ ಬಂಡವಾಳಶಾಹಿ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರ್ರಾಸ್ ಮತ್ತು ಜರ್ಮನಿ ಯುದ್ಧಕ್ಕೆ ನಿಂತವು. ಸುಧಾರಕರು ಬಗೆದದ್ದೇ ಒಂದು ಆದದ್ದು ಇನ್ನೊಂದು, ಬಂಡವಾಳಶಾಹಿ ವ್ಯವಸ್ಥೆ ಸುವ್ಯವಸ್ಥಿತವಾಗಿ ಕೆಲಸ ಮಾಡುವ ಕನಸು ಭಗ್ನವಾಯಿತು. - 1900 ರ ನಂತರ ಯುದ್ಧ ಅನಿವಾರ್ಯವಾಗಿ ಯುದ್ಧದ ಕಾರ್ಮೊ ಡಗಳು ಆಚ್ಛಾದಿಸಿದವು. ಯುದ್ಧ ಪ್ರತಿ ಬಂಡವಾಳಶಾಹಿ ರಾಷ್ಟ್ರ ತನ್ನ ಬಂಡ ನಾಳಶಾಹಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಹೂಡುವ ಪರಸ್ಪರ ಯಾದ ನೀಕಲಹವಾಗಿತ್ತು. ಯುದ್ಧ ಸಂಭವಿಸಿದರೆ ವಿವಿಧ ದೇಶಗಳ ಕಾರ್ಮಿಕ