ಪುಟ:ಕಮ್ಯೂನಿಸಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ ೮೯ ಸಚೇತನಗೊಳಿಸಲು ಹೋರಾಟಕ್ಕೆ ಸಿದ್ಧಪಡಿಸಲು, ಗತಿಸಿದ ಮೊದಲನೆಯ ಅಂತರರಾಷ್ಟ್ರೀಯ ಪುನಃ 1889 ರಲ್ಲಿ “ ಎರಡನೆ ಅಂತರರಾಷ್ಟ್ರೀಯ” (Second International) ಎಂಬ ಹೆಸರಿನಿಂದ ಜನ್ಮ ತಾಳಿತು. ಈ ಮಧ್ಯೆ 1883 ರಲ್ಲಿ ಮಾರ್ಕ್ಸ್ ಮತ್ತು 1895 ರಲ್ಲಿ ಆತನ ಸಹೋ ದ್ಯೋಗಿ ಏಂಗೆಲ್ಸ್-ವೈಜ್ಞಾನಿಕ ಸಮಾಜವಾದೀ ತತ್ತ್ವದ ಪ್ರತಿಪಾದಕರೂ, ಕಾರ್ಮಿಕವರ್ಗದ ಗುರುಗಳೂ, ಆಜನ್ಮ ಕ್ರಾಂತಿಕಾರಿಗಳೂ, ಇತಿಹಾಸ ಪುರುಷರೂ-ಮರಣ ಹೊಂದಿದರು. ಇಲ್ಲಿಗೆ ಮಾರ್ಕ್ಸ್-ಏಂಗೆಲ್ಪರ ಜೀವಿತ ಕಾಲದಲ್ಲಿ ರೂಪಗೊಂಡ ಸಮಾಜವಾದೀ ಚಳವಳಿಯ ಹಿರಿಯ ಅಂಕ ಮುಗಿಯುತ್ತದೆ, ಮಾರ್ಕ್ಸ್-ಏಂಗೆಲ್ಸರ ಮರಣ ಮತ್ತು ಕಾರ್ಮಿಕವರ್ಗದ ಚಳವಳಿಯ ಇಳಿಮುಖ ಅಂತರರಾಷ್ಟ್ರೀಯ ಸಮಾಜವಾದದ ರಂಗದಲ್ಲಿ ಸೋಲಿನ ಮನೋಭಾವವನ್ನು ತಂದವು. ಕಾರ್ಮಿಕವರ್ಗದ ವಿಜಯದಲ್ಲಿ ಅಪನಂಬಿಕೆ ವ್ಯಕ್ತಪಡಿಸುವ ಮತ್ತು ಬಂಡವಾಳವರ್ಗದೊಡನೆ ಸಂಧಾನ ಮತ್ತು ಸುಧಾ ರಣೆಯು ತತ್ತ್ವವನ್ನು ಬೋಧಿಸುವ ವಾದಗಳಿಗೆ ಆಸ್ಪದ ಸಿಕ್ಕಿತು, ಹಲವರು ಮಾರ್ಕ್ಸ್-ಏಂಗೆಲ್ಸರ ವೈಜ್ಞಾನಿಕ ತತ್ತ್ವವನ್ನು ತಿರುಗುಮುರುಗು ಮಾಡಲು ಯತ್ನಿಸಿ, ಆ ವಾದದಲ್ಲಿರುವ ಚೈತನ್ಯವನ್ನು ಮರೆಮಾಚಿದರು; ಅಲ್ಲ ಸಲ್ಲದ ವಾದಗಳನ್ನು ಮಾರ್ಕ್ಸ್-ಏಂಗೆಲ್ಪರ ಮಡಲಿಗೆ ಕಟ್ಟಿದರು. ಇಂಥವರಲ್ಲಿ ಅತಿಮುಖ್ಯವಾದ ವ್ಯಕ್ತಿ ಎಂದರೆ ಜರ್ಮನೀ ದೇಶದ ಕಾರ್ಲ್ ಕಾಟ ಎಂಬ ಸಮಾಜವಾದಿ, ಇವರು ಕಾರ್ಮಿಕವರ್ಗದ ಸೋಲಿಗೂ ಚಳವಳಿಯ ಇಳಿಮುಖಕ್ಕೂ ಕಾರಣವನ್ನು ಅರಿಯಲು ಅಶಕ್ತರಾಗಿದ್ದು ದಲ್ಲದೆ, ಮಾರ್ಕ್ಸ್-ಏಂಗೆಲ್ಸ ರು ಪ್ರತಿಪಾದಿಸಿದಂತೆ ಬಂಡವಾಳ ಆರ್ಥಿಕ ವ್ಯವಸ್ಥೆಯ ಚ್ಯುತಿ ಅಸಂಭವೆಂದೂ ಬಂಡವಾಳಶಾಹಿ ವ್ಯವಸ್ಥೆಯನ್ನು ಚ್ಯುತಿ ಗೊಳಿಸಲಿಕ್ಕೆ ಕಾರ್ಮಿಕವರ್ಗದ ಚಳವಳಿ ಅನಗತ್ಯವೆಂದೂ ತೀರ್ಮಾನಿಸಿ ದರು. ಬಂಡವಾಳ ಆರ್ಥಿಕವ್ಯವಸ್ಥೆ ದೀರ್ಘಕಾಲದವರೆಗೆ ಸುವ್ಯವಸ್ಥಿತ ರೀತಿ ಯಲ್ಲಿ ಕೆಲಸಮಾಡುವುದೆಂದು ಪ್ರಚಾರಮಾಡಿದರು. ಮಾರ್ಕ್-ಏಂಗೆಲ್ಲರ ವಾದ ಮುಪ್ಪಾಗಿದೆ ಎಂದರು. ಮಾರ್ಕ್ಸ್-ಏಂಗೆಲ್ಪರ ವಾದದ ಉಪ ಯುಕ್ತತೆ ನಶಿಸಿದೆ ಎಂದರು. ಕೊನೆಗೆ ಮಾರ್ಕ್ಸ್-ಏಂಗೆಲ್ಸ್ರ ವಾದವೇ ತಪ್ಪೆಂದು ವಾದಿಸಲು ಯತ್ನಿಸಿದರು. ಹಲವು ಬಗೆಯ ಸಮಾಜವಾದಗಳು ಪ್ರಚಾರಕ್ಕೆ ಬಂದವು. ಮಾರ್ಕ್ಸ್-ಏಂಗೆಲ್ಸ ರು ಯಾವುದನ್ನು ಕಲ್ಪನಾ