ಪುಟ:ಕಮ್ಯೂನಿಸಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೮ ವೈಜ್ಞಾನಿಕ ಸಮಾಜವಾದ ಯಲ್ಲಿ ರಾಜ್ಯಶಕ್ತಿಯ ಆವಶ್ಯಕತೆಯೇ ಇಲ್ಲವಾಗುತ್ತದೆ. ಅದು ನಶಿಸುತ್ತದೆ (The State withers away). ಏಕೆಂದರೆ ಶೋಷಣೆಗೆ ಒಳ ಪಟ್ಟಿರುವ ಕಾರ್ಮಿಕರು ಪ್ರತಿಭಟಿಸದ ರೀತಿಯಲ್ಲಿ ಅದುಮಿ ಇಟ್ಟಿರಲು ಮತ್ತು ಸ್ವಾಮ್ಯವನ್ನು ರಕ್ಷಿಸಿಕೊಳ್ಳಲು ಸ್ವಾಮ್ಯವರ್ಗ ರಾಜ್ಯಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಲಿತ್ತು. ಈಗಲಾದರೋ ಉತ್ಪಾದನಾ ಸಾಧನ ಗಳಲ್ಲಿ ಖಾಸಗೀ ಸ್ವಾಮ್ಯ, ಬಂಡವಾಳವರ್ಗ, ಕೂಲಿಗಾಗಿ ವಿಕ್ರಯವಾಗುವ ದುಡಿಮೆ ಎಲ್ಲವೂ ನಾಶಹೊಂದಿವೆ. ಉತ್ಪಾದನಸಾಧನಗಳು ಸಮಾಜೇ ಕರಣವಾಗಿವೆ. ಎಲ್ಲರೂ ಅವರವರ ಯೋಗ್ಯತಾನುಸಾರ ದುಡಿಯುವ ಸಮಾಜ ವ್ಯವಸ್ಥೆ ಬಂದಿದೆ, ಈ ವರ್ಗರಹಿತಸಮಾಜದಲ್ಲಿ ಕೋಷಣೆಯಾ ಗಲೀ, ಶೋಷಣೆಯನ್ನು ನಡೆಸುವ ವರ್ಗವಾಗಲೀ, ಸ್ವಾಮ್ಯ ಮತ್ತು ಶೋಷಣೆಗೆ ರಕ್ಷಣೆ ಬೇಕೆನ್ನುವವರಾಗಲೀ ಇಲ್ಲದಿರುವುದರಿಂದ ರಾಜ್ಯ ಶಕ್ತಿಯ ಪ್ರಯೋಗ ಬೇಕಿಲ್ಲವಾಗುತ್ತದೆ. ಸಮಾಜದ ಮೇಲ್ವಿಚಾರಣೆಯ ಕೆಲಸ ಮಾತ್ರ ಉಳಿಯುತ್ತದೆ (The Administration of Things). 1 1871 ರಲ್ಲಿ ಫ್ರಾನ್ಸ್ ದೇಶದಲ್ಲಿ ಆದ ಕಾರ್ಮಿಕರ ಕ್ರಾಂತಿಯ ಪರಾಜಯದಿಂದ ಆರಂಭ, ಯೂರೋ ಪುಖಂಡದಲ್ಲಿ ಕಾರ್ಮಿಕರ ಚಳವಳಿ ಇಳಿಮುಖವಾಯಿತು. ಕಾರ್ಮಿಕವರ್ಗ ಪರಾಜಯಗಳಿಂದ ಧೃತಿಗೆಡುವಂತಾ ಯಿತು. ಕ್ರಾಂತಿಯ ಇಳಿಮುಖದಲ್ಲಿ ಮೊದಲನೇ ಅಂತರರಾಷ್ಟ್ರೀಯ (First International) ಗತಿಸಿತು. ಅದರೆ ಕಾರ್ಮಿಕವರ್ಗವನ್ನು () ಇಲ್ಲಿ ಉಪಯೋಗಿಸಿರುವ “ ಸಮಾಜವಾದಿ ಸಮಾಜ ' ಕಮ್ರ ನಿಸ್ಟ್ ಸಮಾಜ' ವೆಂಬ ನಾಮಾಂಕಿತಗಳ ಸ್ವರೂಪವನ್ನು ಜ್ಞಾಪಕದಲ್ಲಿಡುವುದು ಅಗತ್ಯ, ಹಿಂದೆ (ಪುಟ.೨೯) ಕಮಸಿ' ಎಂಬ ಶಬ್ದವನ್ನು ತೀವ್ರಗಾಮಿ ಗಳು ಎಂಬ ಅರ್ಥದಲ್ಲಿ ಮಾರ್ಕ್ಸ್- ಏಂಗೆಲ್ಸರು ಉಪಯೋಗಮಾಡಿ ಇತರ ಸಮಾಜವಾದಿಗಳಿಂದ ತಾವು ಬೇರೆಯವರು ಎಂಬರ್ಥದಲ್ಲಿ ಉಪಯೋಗಿಸಿದರು. ಆದರೆ ಇಲ್ಲಿ ಕಾರ್ಮಿಕ ವರ್ಗದ ಕ್ರಾಂತಿಯ ನಂತರ ವ್ಯವಸ್ಥಿತವಾಗುವ ಸಮಾಜದ ಸ್ವರೂಪವನ್ನೂ ಮತ್ತು ಅದರ ಎರಡು ರೂಪಗಳನ್ನೂ ಬೇರ್ಪಡಿಸುವ ವಿಂಗಡಿ ಸುವ, ಅರ್ಥದಲ್ಲಿ ಸಮಾಜವಾದೀ ಮತ್ತು ಸಮವಾದೀ (ಕನನಿಸ್ಟ್) ಎಂಬ ನಾಮಾಂಕಿತಗಳನ್ನು ಉಪಯೋಗಿಸಿದ್ದಾರೆ. - ಸಮನಾದೀ (ಕಮ್ಯೂನಿಸ್ಟ್) ಸಮಾಜವೂ ಸಹ ಸಮಾಜವಾದೀ ಸಮಾಜವೇ, ಆದರೆ ಅದಕ್ಕಿಂತ ಮುಂದೆ ಹೋಗಿ ರೂಪಾಂತರ ಹೊಂದಿದೆ,