ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ ತಿರುವ ವಿರಸಗಳು ಮತ್ತಷ್ಟು ವಿಸ್ತರಣೆ ಮತ್ತು ಗಾತ್ರವನ್ನು ತಾಳಿ ಪ್ರಪಂಚವನ್ನೆಲ್ಲಾ ಅಡ್ಡ ಬಳಸಿವೆ ಎಂದನು 1 ಸಾಮ್ರಾಜ್ಯವಾದೀ ಬಂಡ ವಾಳ ಆರ್ಥಿಕ ವ್ಯವಸ್ಥೆ ಪೈಪೋಟಿಯಿಂದ ಪ್ರಪಂಚದಮಾರುಕಟ್ಟೆಯನ್ನೆಲ್ಲಾ ಆಕ್ರಮಿಸಿದೆ ಎಂದೂ, ಸ್ಥಳ ಸಂಕೋಚವಾಗಿ ಲಾಭಕ್ಕೆ ಧಕ್ಕೆ ಬಂದಿದೆ ಎಂದೂ ಹಿಂಗುತ್ತಿರುವ ಲಾಭದ ಅಂಚನ್ನು ತಡೆಗಟ್ಟಲು ಮತ್ತಷ್ಟು ವಸಾಹತು ಮತ್ತು ಮಾರುಕಟ್ಟೆಗಳ ಆಕ್ರಮಣಕ್ಕಾಗಿ ಬಂಡವಾಳಶಾಹಿ ರಾಷ್ಟ್ರಗಳು ಯತ್ನಿಸಿವೆ ಎಂದೂ, ಪೈಪೋಟಿಯ ವ್ಯಾಪಾರ ವೈಷಮ್ಯವನ್ನು ತಂದಿದೆ ಎಂದೂ, ಯುದ್ಧ ಅನಿವಾರ್ಯವಾಗಿದೆ ಎಂದೂ, ಒಂದನೇ ಮಹಾಘೋರ ಯುದ್ಧ (1914-18) ಬಂಡವಾಳ ರಾಷ್ಟ್ರಗಳಲ್ಲೇ ಉಂಟಾಗಿರುವ ಸಾಮ್ರಾಜ್ಯವಾದೀ ಯುದ್ಧವಾಗಿದೆ ಎಂದೂ ಲೆನಿನ್ ತಿಳಿಸಿದನು. ಸಾಮ್ರಾಜ್ಯವಾದೀ ಬಂಡವಾಳ ಆರ್ಥಿಕ ವ್ಯವಸ್ಥೆಯ ಕಾಲದ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಲೆನಿನ್ ವಿವರಿಸಿ ಕಾರ್ಮಿಕವರ್ಗದ ಕರ್ತವ್ಯದಬಗ್ಗೆ ವಿವರಣೆಯಿತ್ತನು ಸಾಮ್ರಾಜ್ಯವಾದೀ ರೂಪ ಬಂಡವಾಳ ಶಾಹಿ ವ್ಯವಸ್ಥೆಯ ಅತ್ಯಂತ ಕ್ರೂರ ರೂಪ, ಶೋಷಣೆಯ ಸರಮಾವಧಿ. ವಂಚನೆ, ಮೋಸ, ಮತ್ತು ಯುದ್ಧ ಸಾಮ್ರಾಜ್ಯವಾದೀ ವ್ಯವಸ್ಥೆಯ ಅಸ್ತ್ರಗಳು, ಇವು ಕಾರ್ಮಿಕ ವರ್ಗವನ್ನು ಮತ್ತಷ್ಟು ಆರ್ಥಿಕ ಅಭದ್ರತೆಯಲ್ಲಿ, ನಿರುದ್ಯೋಗ ದಲ್ಲಿ ಮತ್ತು ಶೋಷಣೆಗೆ ಸಿಲುಕಿಸುತ್ತವೆ. ಸಾಮ್ರಾಜ್ಯವಾದಿ ಬಂಡವಾಳಶಾಹಿ ವ್ಯವಸ್ಥೆ ವಿರಸಗಳಿಂದ ಪಾರಾಗಲು ಸದಾ ಯುದ್ದದಲ್ಲಿ ನಿರತವಾಗಿರುತ್ತವೆ, ಇಲ್ಲವೇ ಪ್ರಪಂಚವನ್ನು ಯುದ್ಧದ ಕಾರ್ಮೋಡಗಳಿಂದ ಹೆದರಿಸುತ್ತಿರು ತದೆ, ಜನಸಮುದಾಯವನ್ನು ಸದಾ ಯದ್ಧದ ವಾತಾವರಣದಲ್ಲಿಟ್ಟು ಅದು ತನ್ನ ಕಷ್ಟ ನಷ್ಟಗಳನ್ನು ಕುರಿತು ಯೋಚಿಸಲೂ ಸಹ ಸಮಯ ಸಿಗದ ಹಾಗೆ ಮಾಡುತ್ತಿರುತ್ತದೆ, ಅಲ್ಲದೆ, ಜನಸ್ತೋಮದಲ್ಲಿ ನಿರುದ್ಯೋಗವನ್ನು ತಪ್ಪಿಸಲು ಬಂಡವಾಳಶಾಹಿ ವ್ಯವಸ್ಥೆಗೆ ಯುದ್ಧವೇ ಹೆದ್ದಾರಿಯಾಗಿದೆ. ಆದುದೆ ರಿಂದ ಕಾರ್ಮಿಕರು ಜಾಗೃತಿಗೊಂಡು, ಸಾಮ್ರಾಜ್ಯವಾದೀ ಸರ್ಕಾರ (1) ಮಾರ್ಕ್ಸ್- ಏಂಗೆಲ್ಸರೂ ಸಹ ಬಂಡವಾಳ ಆರ್ಥಿಕ ವ್ಯವಸ್ಥೆಯ ಚಲನೆಯ ಬಗ್ಗೆ ಇದೇ ತೀರ್ಮಾನಕ್ಕೆ ಬಂದಿದ್ದರು, ಆದರೆ ಅವರು ತಮ್ಮ ವಿಮರ್ಶೆ ಯನ್ನು ಪ್ರಕಟಿಸಿದಾಗ ಈ ರೂಪ ವ್ಯಕ್ತವಾಗಿರಲಿಲ್ಲ,
ಪುಟ:ಕಮ್ಯೂನಿಸಂ.djvu/೧೦೫
ಗೋಚರ