ಪುಟ:ಕಮ್ಯೂನಿಸಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ - ವ -೨ ವೈಜ್ಞಾನಿಕ ಸಮಾಜವಾದ ವರ್ಗದ ಪೀಳಿಗೆಗಳನ್ನು ಧ್ವಂಸಮಾಡಲಾಯಿತು. ಈ ಸಮಯದಲ್ಲಿ ರಷ್ಯಾದ ಕಾರ್ಮಿಕವರ್ಗಕ್ಕೆ ಅಂತರರಾಷ್ಟ್ರೀಯ ಕಾರ್ಮಿಕವರ್ಗ ನೀಡಿದ ಬೆಂಬಲ ಕೊಟ್ಟ ಪ್ರೋತ್ಸಾಹ ಮತ್ತು ತೋರಿಸಿದ ಸಹಾನುಭೂತಿ ಚಿರಸ್ಮರಣೀಯ ವಾಗಿವೆ. ಇತಿಹಾಸದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಪ್ರಪಂಚದ ಆರನೇ ಒಂದು ಭಾಗದಷ್ಟು ಪ್ರದೇಶದಲ್ಲಿ ಸಮಾಜವಾದೀ ವ್ಯವಸ್ಥೆ ಸ್ಥಾಪನೆ ಯಾಯಿತು. ಕೂಡಲೇ ಕಮ್ಯೂನಿಸ್ಟ್ ಪಕ್ಷ ವಿರಸಗಳಿಗೂ, ಆರ್ಥಿಕ ದುಃಸ್ಥಿತಿಗೂ ಶೋಷಣೆಗೂ, ನಿರುದ್ಯೋಗಕ್ಕೂ ಆವಾಸಸ್ಥಾನವಾಗಿದ್ದ ಬಂಡವಾಳ ಆರ್ಥಿಕ ವ್ಯವಸ್ಥೆ ಮತ್ತು ಅದರ ಪ್ರತಿನಿಧಿಯಾದ ಬಂಡವಾಳವರ್ಗದ ವಿನಾಶಕ್ಕೆ ಗಮನಕೊಟ್ಟಿತು ದೇಶದ ಸಂಪತ್ತು ಮತ್ತು ಉತ್ಪಾದನಾ ಸಾಧನಗಳು ಸಮಾಜದ ಸ್ವತ್ತೆಂದು ಘೋಷಿಸಲಾಯಿತು. ದೇಶದ ಕೈಗಾರಿಕಾ ಉದ್ಯಮ ಗಳು, ಸಂಚಾರ ಮಾರ್ಗಗಳು ಬ್ಯಾಂಕುಗಳು, ಗಣಿಗಳು, ಭೂಮಿ ಇತ್ಯಾದಿ ಎಲ್ಲವೂ ರಾಷ್ಟ್ರೀಕರಣವಾದವು. ಪ್ರತಿಯೊಬ್ಬನೂ ಅವನವನ ಯೋಗ್ಯತಾ ನುಸಾರ ದುಡಿಯಲು ಮತ್ತು ಪ್ರತಿಫಲ ಹೊಂದಲು ಶಾಸನವಾಯಿತು. ಎಲ್ಲರೂ ದುಡಿಮೆಯವರಾದರು. ಉತ್ಪಾದನೆಯಿಂದ ದೊರಕುವ ಹೆಚ್ಚು ಸಂಪತ್ತು ಸಮಾಜಕ್ಕೆ ಸೇರುವಂತಾಯಿತು, ಉಳುವವನಿಗೆ ಮಾತ್ರ ಭೂಮಿ ಎಂದು ಘೋಷಿಸಲಾಯಿತು. ಜಮಾನ್ದಾರವರ್ಗಕ್ಕೆ ಸೇರಿದ ಭೂಮಿಯನ್ನು ಯಾವ ಪರಿಹಾರವನ್ನೂ ಕೊಡದೆ ವಶಪಡಿಸಿಕೊಂಡು ರೈತರಿಗೆ ಮುಫ ತಾಗಿ ಹಂಚಲಾಯಿತು. ಬಡರೈತರಿಗೆ ಸಹಾಯಕ ಬೇಸಾಯ ಸಾಮಗ್ರಿ ಗಳನ್ನೂ ಸಹ ಕೊಡಲಾಯಿತು. ನಿರುದ್ಯೋಗವನ್ನು ಹೋಗಲಾಡಿಸಲು, ಬಡತನವನ್ನು ನೀಗಿಸಲು ಮತ್ತು ದೇಶದ ಆರ್ಥಿಕ ಅಭಿವೃದ್ಧಿಯನ್ನು ಶೀಘ್ರವಾಗಿ ಸಾಧಿಸಲು ಉತ್ಪಾದನೆಯಕಡೆ ಗಮನಕೊಡಲಾಯಿತು. ಈ ಉದ್ದೇಶ ಸಾಧಿಸಲು ಯೋಜನೆ ಮತ್ತು ಯೋಜನೆಗೆ ಒಳಪಟ್ಟ ಕೈಗಾರಿಕಾ ಮತ್ತು ಬೇಸಾಯ ರಂಗಗಳ ಅಭಿವೃದ್ಧಿ ರಾಷ್ಟ್ರದ ಪ್ರಮುಖ ಅಂಗವಾಯಿತು. ಮೂಲಕೈಗಾರಿಕೆಗಳನ್ನು (Capital Industries) ಸ್ಥಾಪಿಸುವುದಕ್ಕೆ ಹೆಚ್ಚು ಗಮನಕೊಡಲಾಯಿತು. ವ್ಯವಸಾಯ ಕ್ಷೇತ್ರದಲ್ಲಿ ಸಾಮೂಹಿಕ ವ್ಯವಸಾಯದಿಂದ ಆಗುವ ಪ್ರಯೋಜನಗಳನ್ನು ಸಣ್ಣ ಪುಟ್ಟ ಸ್ವಾವಲಂಬೀ ಹಿಡುವಳಿದಾರರಿಗೆ ತಿಳಿಸಿ ಅವರುಗಳನ್ನು ಪರಸ್ಪರ ಸಹಾಯದ