೯೭ ರಷ್ಯಾದಲ್ಲಿ ಸಮಾಜವಾದ | ವ್ಯಕ್ತಿಯನ್ನು ಮುಖಂಡನನ್ನಾಗಿ ಪಡೆದದ್ದು ರಷ್ಯಾ ದ ಕಮ್ಯೂನಿಸ್ಟ್ ಪಕ್ಷದ ಭಾಗ್ಯವೆನ್ನಬಹುದು. ಮಾರ್ಕ್ಸ್ ತಮ್ಮ ಕಮ್ರನಿಸ್ಟ್ ಪಕ್ಷಕ್ಕೆ ತಾತ್ವಿಕ ತಳಹದಿಯಾಯಿತು. ಕನನಿಸ್ಟ್ ಪಕ್ಷವು ಕಾರ್ಯಾಚರಣೆಯಲ್ಲಿ ತೊಡಗಿ ಅಪಾರ ಅನುಭವವನ್ನು ಗಳಿಸಿತ್ತು; ಜನಪ್ರಿಯವಾಗಿತ್ತು. ಜನಸಮುದಾ ಯದ ಆಶೋತ್ತರಗಳಿಗೆ ಮಾರ್ಕ್ಸ್-ಏಂಗೆಲ್ಸ ರ ವಾದದಿಂದ ಭರವಸೆಯನ್ನು ದೊರಕಿಸಿಕೊಟ್ಟು, ಜನಸಮುದಾಯವು ರಾಜಕೀಯ ಜಾಗೃತಿಯನ್ನೂ ಮ: ಕಾ೦ತಿಕಾರ ತೀಕ್ಷಣತೆಯನ್ನೂ ಹೊಂದುವಂತೆ ಮಾಡಿತು. ಕವಿ.೯ಕರ ಕ್ರಾಂತಿಯು ಯಶಸ್ವಿಯಾದ ನಂತರ ಸಮಾಜವಾದೀ ಮಾರ್ಗ ದಲ್ಲಿ ಸಮಾಜದ ಪುನರಚನೆಯ ಕರ್ತವ್ಯಗಳ ಕಡೆಗೆ ಕಮ್ಯೂನಿಸ್ಟ್ ಪಕ್ಷ ಗಮನಕೊಟ್ಟಿತು. ಬಹುಶಃ ರಷ್ಯಾದ ಕಾರ್ಮಿಕವರ್ಗ ಸಾಧಿಸಿದ ಘಟನೆಯ ಮಹತ್ವ ವನ್ನು ಅದು ಅರಿಯುವುದಕ್ಕೆ ಸಮಯವಿತ್ತೋ ಇಲ್ಲವೋ ಕಾಣದು ಆದರೆ ರಷ್ಯಾದ ಸಮಾಜವಾದೀ ಕ್ರಾಂತಿ ವಿಶ್ವದ ಘಟನೆಯಾಗಿತ್ತು. ಅದುವರೆಗೂ ಶಾಶ್ವತವೆಂದು ನಂಬಿದ್ದ ಖಾಸಗೀ ಸ್ವಾಮ್ಯ, ಬಂಡವಾಳ ಆರ್ಥಿಕ ವ್ಯವಸ್ಥೆ, ಅವನ್ನು ಪುಷ್ಟಿಕರಿಸುವ ತತ್ರ್ಯ, ರಾಜಕೀಯ, ನ್ಯಾಯ ಎಲ್ಲವೂ ತಲೆ ಕೆಳಗಾದುದನ್ನು ರಾಜಕಾರಣ ಪಟುಗಳು ಕಂಡರು, ಅವರ ಪಾಲಿಗೆ ನಾಗರಿ ಕತೆ ಯೇ ಮುಕ್ತಾಯಗೊಂಡಂತೆ ಭಾಸವಾಯಿತು. ಖಾಸಗೀ ಸ್ವಾಮ್ಯದ ವಿರುದ್ದ ರಷ್ಯಾದ ಕಾರ್ಮಿಕವರ್ಗ ನಡೆಸಿದ ಕ್ರಾಂತಿ ಇತರ ಬಂಡವಾಳಶಾಹಿ ದೇಶಗಳ ಕಾರ್ಮಿಕವರ್ಗಕ್ಕೆ ಹರಡದಂತೆ ತಡೆಯಲೂ ಮತ್ತು ರಷ್ಯಾದ ಕಾರ್ಮಿಕ ಕ್ರಾಂತಿಯನ್ನು ಮುರಿಯಲೂ ಬಂಡವಾಳಶಾಹಿ ಸರ್ಕಾರಗಳಾದ ಅಮೆರಿಕಾ, ಇಂಗ್ಲೆಂಡ್, ಫ್ರ್ರಾನ್ ಇತ್ಯಾದಿ ದೇಶಗಳು ತಮ್ಮ ಸೈನ್ಯಗಳನ್ನು ನುಗ್ಗಿಸಿದವು. ರಷ್ಯಾದಲ್ಲಿ ವಿನಾಶಮಾಡಲ್ಪಟ್ಟಿದ್ದ ಬಂಡವಾಳವರ್ಗ ದಂಗೆ ಏಳುವಂತೆ ಪ್ರೇರೇಪಿಸಿದವು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಷ್ಯಾದ ಸಮಾಜ ವಾದೀ ಕ್ರಾಂತಿಯ ಅಳಿವು ಅಥವಾ ಉಳಿವು ತೀರ್ಮಾನವಾಗಬೇಕಾಗಿತ್ತು. ಆದರೆ ರಷ್ಯಾದ ಕಾರ್ಮಿಕವರ್ಗ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ದಿಟ್ಟತನದಿಂದಲೂ ಧೈರ್ಯದಿಂದಲೂ ಸರಿಸ್ಥಿತಿಯನ್ನು ಎದುರಿಸಿತು. ವಿದೇಶಿ ಸೈನ್ಯಗಳನ್ನು ಹಿಮ್ಮೆಟ್ಟಿಸಲಾಯಿತು, ದಂಗೆ ಎದ್ದಿದ್ದ ಬಂಡವಾಳ
ಪುಟ:ಕಮ್ಯೂನಿಸಂ.djvu/೧೦೯
ಗೋಚರ