ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧go ವೈಜ್ಞಾನಿಕ ಸಮಾಜವಾದ ವಾದದ್ದು. ಸಮಾನತೆ ಎಂದರೆ ಎಲ್ಲಾ ವಿಷಯದಲ್ಲಿ ಸಮಾನತೆ ಎಂದೂ, ವ್ಯಕ್ತಿ ವ್ಯಕ್ತಿಗಳಿಗೆ ಯಾವ ವ್ಯತ್ಯಾಸವೂ ಇಲ್ಲವೆಂದೂ, ವೈಯುಕ್ತಿಕ ವ್ಯಕ್ತಿ ತ್ವಕ್ಕೆ ಅವಕಾಶವೇ ಇಲ್ಲವೆಂದೂ ವಿವರಣೆಗಳು ಬಂದವು. ಲೆನಿನ್ನನ ಮರಣಾ ನಂತರ ರಷ್ಯಾದ ಕಮ್ಯೂನಿಸ್ಟ್ ಪಕ್ಷದ ನಾಯಕನಾಗಿ ನಿಂತ ಸ್ಟಾಲಿನ್ ಈ ತಪ್ಪು ಅಭಿಪ್ರಾಯವನ್ನು ಮೂದಲಿಸಿದನು, ಸಮಾನತೆಯಬಗ್ಗೆ ಆತನು ಕೊಟ್ಟಿರುವ ವಿವರಣೆ ಬಹು ಮುಖ್ಯವಾದದು : “ಸಮಾನತೆಯನ್ನು ತರಲು ಹೊರಟಿರುವ ಸಮಾಜವಾದ ವ್ಯಕ್ತಿಗಳ ಆವಶ್ಯಕತೆಗಳನ್ನೂ ಮತ್ತು ಅವರುಗಳ ಜೀವನವನ್ನೂ ಸಮಗೊಳಿಸುವುದಾಗಿದೆ ಎಂದು ಯೋಚಿಸುವವರು ಇದ್ದಾರೆ. ಇಂತಹ ಭಾವನೆಗಳು ಮಾರ್ಕ್ಸ್-ಲೆನಿನ್ನರ ವಾದದೊಡನೆ ಯಾವ ಸಂಬಂಧ ವನ್ನೂ ಹೊಂದಿಲ್ಲವೆಂದು ಹೇಳಬೇಕಾಗಿದೆ, ಮಾರ್ಕ್ಸ್‌ವಾದದ ಪ್ರಕಾರ, ಸಮಾನತೆ ಎಂದರೆ ವ್ಯಕ್ತಿಗಳ ಅವಶ್ಯಕತೆಗಳನ್ನೂ ಅವರ ಜೀವನವನ್ನೂ ಸಮ ಗೊಳಿಸುವುದಲ್ಲ, ವರ್ಗಗಳನ್ನು ನಾಶಪಡಿಸುವುದಾಗಿದೆ. ಎಂದರೆ : (1) ಬಂಡವಾಳವರ್ಗವನ್ನು ಉರುಳಿಸಿ, ಅವರಿಗೆ ಸೇರಿರುವುದನ್ನು ವಶಪಡಿಸಿ ಕೊಂಡು, ಎಲ್ಲಾ ದುಡಿಮೆ ಮಾಡುವ ಜನರನ್ನೂ ಶೋಷಣೆಯಿಂದ ತಪ್ಪಿಸು ವುದು, (2) ಉತ್ಪಾದನಾ ಸಾಧನಗಳನ್ನು ಸಮಾಜದ ವಶಕ್ಕೆ ತಂದು ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನು ನಾಶಮಾಡುವುದು, (3) ಪ್ರತಿಯೊಬ್ಬನೂ ತನ್ನ ಶಕ್ತಾನುಸಾರ ಕೆಲಸಮಾಡುವ ಸಮಾನಕರ್ತವ್ಯ ವನ್ನು ಮತ್ತು ಎಲ್ಲ ದುಡಿಮೆಯ ಜನರು ಕೆಲಸಕ್ಕೆ ತಕ್ಕ ಪ್ರತಿಫಲವನ್ನು ಪಡೆ ಯುವ ಸಮಾನ ಹಕ್ಕನ್ನು (ಸಮಾಜವಾದೀ ಸಮಾಜ) ಹೊಂದುವುದು ? ಮಾರ್ಕ್ಸ್‌ವಾದವು ಸಮಾಜವಾದೀ ವ್ಯವಸ್ಥೆಯ ಕಾಲವಲ್ಲಾಗಲೀ ಅಥವಾ (1) ಕೆಲವು ಕಾಲ ಹಿಂದುಳಿದ ರಷ್ಯಾದಲ್ಲಿ ಸಮಾಜವಾದೀ ವ್ಯವ ಸಾಧ್ಯವೇ ಎಂಬುದರ ವಿಷಯವಾಗಿ ಬಹಳ ಜಿಜ್ಞಾಸೆ ನಡೆಯಿತು. ಈ ಜಿಜ್ಞಾಸೆ ಯನ್ನು 9 ಮತ್ತು 10 ನೇ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. (2) ಸಮಾಜವಾದೀ ಕ್ರಾಂತಿಯಾದ ಕೂಡಲೆ ಸಮಾಜವಾದೀ ಸಮಾಜ (Socialist Society) ವ್ಯವಸ್ಥೆ ಹೊಂದುತ್ತದೆ. ತದನಂತರ ಸಮ ವಾದೀ (ಕವನಿಸ್ಟ್) ಸಮಾಜ ರೂಪಗೊಳ್ಳುತ್ತದೆ. ಈ ಸಂದರ್ಭದಲ್ಲಿ ಸಮಾಜವಾದೀ ಮತ್ತು ಸಮುವಾದೀ (ಕವನಿ) ಎಂಬ ಹಬ್ಬಗಳ ಪ್ರಯೋಗಾರ್ಥಕ್ಕೂ ಮತ್ತು ವಿವರಣೆಗೂ ಪುಟ 29 ನೋಡಿ,