ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nov ವೈಜ್ಞಾನಿಕ ಸಮಾಜವಾದ ಸ್ವಾತಂತ್ರ್ಯವನ್ನೂ ಮತ್ತು ಪ್ರತಿನಿಧಿಯಾಗಿ ಚುನಾವಣೆಗೆ ನಿಲ್ಲುವ ಸ್ವಾತಂತ್ರ್ಯದ ಹಕ್ಕನ್ನೂ ಪಡೆದಿದ್ದಾರೆ, ಆದರೆ ಯಾವ ವ್ಯಕ್ತಿಗೂ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಪುಷ್ಟಿಕರಿಸಿ ಪ್ರಚಾರಮಾಡುವ ಸ್ವಾತಂತ್ರ್ಯಕ್ಕೂ ಅಥವಾ ಆ ರೀತಿಯ ವ್ಯವಸ್ಥೆಯನ್ನು ತರುವ ಉದ್ದೇಶ ದಿಂದ ರಾಜಕೀಯಪಕ್ಷವೊಂದರ ನಿರ್ಮಾಣಕ್ಕೂ ಅವಕಾಶವಿಲ್ಲ, ಏಕೆಂದರೆ, ಶೋಷಣೆ ಮತ್ತು ಬಂಡವಾಳ ಆರ್ಥಿಕ ವ್ಯವಸ್ಥೆ ಯ ನಿರ್ಮೂಲಕ್ಕಾಗಿ ಕ್ರಾಂತಿಯು ನಡೆದಿದೆ. ಆದುದರಿಂದ ಕ್ರಾಂತಿಯ ರಕ್ಷಣೆ, ವ್ಯವಸ್ಥೆ ಹೊಂದು ತಲಿರುವ ಸಮಾಜವಾದೀ ವ್ಯವಸ್ಥೆಯ ಸಂರಕ್ಷಣೆ ಕಾರ್ಮಿಕವರ್ಗದ ಪ್ರಥಮ ಕರ್ತವ್ಯವಾಗಿದೆ. ಸ್ವಾಮ್ಯದ ಪುಷ್ಟಿಕರಣದ ಬಗ್ಗೆ ಅಭಿಪ್ರಾಯ ಸ್ವಾತಂತ್ರ ಪ್ರಚಾರ ಸ್ವಾತಂತ್ರ್ಯ, ಇತ್ಯಾದಿ ಕೂಡಲು ಕಾರ್ಮಿಕವರ್ಗ ಇನ್ನೂ ಸಿದ್ಧವಾಗಿಲ್ಲ. ಆದುದರಿಂದ ಕ್ರಾಂತಿಯ ವಿರುದ್ಧ ವರ್ತಿಸುವವ ರನ್ನು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜವಾದೀ ವ್ಯವಸ್ಥೆಗೆ ಚ್ಯುತಿ ತರುವೆ ಕ್ರಿಯಾತ್ಮಕರನ್ನು ದಂಡಿಸಲಾಗುವುದು, ನಾಲ್ಕ ಯದಾಗಿ, ಸೋವಿಯಟ್ ಪ್ರಜಾಪ್ರಭುತ್ವದಲ್ಲಿ ವಿವಿಧ ರಾಜ ಕೀಯ ಪಕ್ಷಗಳ ರಚನೆಗೆ ಸ್ವಾತಂತ್ರ್ಯವಿಲ್ಲ; ಒಂದೇ ಒಂದು “ಮುಂದಾಳು ಸಮೂಹ ” (Vanguard) ಇರಲು ಅವಕಾಶವಿದೆ. ಇದಕ್ಕೆ ಕಾರಣ ಗಳನ್ನು ಕೊಡಲಾಗಿದೆ. ಕೇವಲ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದಾ ಗಿದ್ದರೆ ವಿವಿಧ ಮತ್ತು ಪ್ರತಿ (Counter) ರಾಜಕೀಯ ಪಕ್ಷಗಳ ನಿರ್ಮಾಣ ಈ ಮುಂದಾಳು ಸಮೂಹವನ್ನು ಪಕ್ಷ (Party) ಎಂಮ ಸಂಭೋದಿಸು ವುದೂ ಉಂಟು. ಆದರೆ ಇದು ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ ರಾಜ ಕೀಯ ಪಕ್ಷಗಳಂತೆ (Political Parties) ರಾಜಕೀಯ ಪಕ್ಷವಲ್ಲ, ಸಮಾಜವಾದೀ ವ್ಯವಸ್ಥೆಯಲ್ಲಿ ವರ್ಗಗಳು ನಾಶ ಮಾಡಲ್ಪಟ್ಟಿರುವುದರಿಂದ ವರ್ಗ ಹಿತವನ್ನು (clas8-interest) ಸಂರಕ್ಷಿಸಲಿಕ್ಕೆ ಯಾವ ರಾಜಕೀಯ ಪಕ್ಷದ ಆವಶ್ಯಕತೆಯೂ ಇಲ್ಲ. ವರ್ಗರಹಿತ (class-less) ಸಮಾಜದಲ್ಲಿ ಸಮಾಜವಾದೀ ವ್ಯವಸ್ಥೆಯ ಅಭಿವೃದ್ಧಿಗಾಗಿ ಮುಂದಾಳತ್ವವನ್ನು ನಿರ್ವಹಿಸುವ ಪ್ರಶ್ನೆ ಮಾತ್ರ ಇರುತ್ತದೆ. ಆದುದರಿಂದ ಈ ಮುಂದಾಳು ಸಮೂಹದ ನೇತೃತ್ವವನ್ನು ಏಕಪಕ್ಷದ ಸರ್ಕಾರ ನಂದು ಬಗೆಯುವುದು ತಪ್ಪಾಗುತ್ತದೆ. ಸಮಾಜವಾದೀ ವ್ಯವಸ್ಥೆಯಲ್ಲಿ ಪಕ್ಷದ ಆವಶ್ಯಕತೆಯೇ ಇಲ್ಲದಿರುವಾಗ ಏಕಪಕ್ಷದ ಸರ್ಕಾರದ (one party Government) ಸಮಸ್ಯೆಯೇ ಉದ್ಭವಿಸುವುದಿಲ್ಲ. 1 1.