ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದ ನಿಲ್ಲಿಸಿದರು ; ಬದಲಾಗಿ ಕಮ್ಯೂನಿಸ್ಟ್ ಪಕ್ಷದ ಅವಹೇಳನದಲ್ಲಿ ಮಾರ್ಕ್ಸ್ ಏಂಗೆಲ್ಪರ ವಾದವನ್ನು ತಿರುಗುಮುರುಗು ಮಾಡುವುದರಲ್ಲೂ ತಲ್ಲೀನರಾದರು. ಸೋವಿಯಟ್ ರಷ್ಯಾದ ದೂಷಣೆ ಇವರ ನಿತ್ಯದ ಪಾರಾಯಣೆ ಯಾಯಿತು. ಇವರುಗಳು ಬಗೆದಂತೆ ಕಾರ್ಮಿಕವರ್ಗಕ್ಕೆ ಶಾಸನ ಸಭೆಯಲ್ಲಿ ಬಹುಮತ ದೊರೆಯಲೂ ಇಲ್ಲ, ಮತ್ತು ವಾಸ್ತವವಾಗಿ ಸ್ವಾಮ್ಯದ ಆಧಾರದಮೇಲೆ ನಡೆಯುವ ರಾಜಕೀಯದಲ್ಲಿ ಕಾರ್ಮಿಕ ವರ್ಗ ಚುನಾವಣೆಗಳಲ್ಲಿ ಬಹುಮತಗಳಿಸಲು ಸಾಧ್ಯವೂ ಇರಲಿಲ್ಲ. ಬಂಡ ವಾಳವರ್ಗಕ್ಕೆ ಇದ್ದ ವಿಶೇಷ ಸೌಲಭ್ಯಗಳಾದ ಹಣ, ಮುದ್ರಣಾಲಯ, ಪ್ರಚಾರ ಸೌಕರ್ಯ, ಪ್ರತಿಯಾಗಿ ಕಾರ್ಮಿಕವರ್ಗಕ್ಕಿದ್ದ ಆಜನ್ಮದೌರ್ಬಲ್ಯ. ಎಲ್ಲವೂ ಸುಧಾರಕ ಮುಖಂಡರುಗಳ ಕನಸನ್ನು ಭಗ್ನಗೊಳಿಸಿದವು. ಸುಧಾರಕ ಸಮಾಜವಾದೀ ಮುಖಂಡರು ಸಮಾಜವಾದೀ ವ್ಯವಸ್ಥೆಯನ್ನು ನಿರೀಕ್ಷಣೆಮಾಡಿ ಬೇಸತ್ತರು, ತಮ್ಮ ವಾದದಲ್ಲಿ ತಪ್ಪೇನೂ ಇಲ್ಲವೆಂದು ಬಂಡವಾಳಶಾಹಿ ಸರ್ಕಾರಗಳಲ್ಲಿ ಮಂತ್ರಿಗಳಾಗಲು ಒಪ್ಪಿದರು; ಬಂಡ ವಾಳಶಾಹಿ ವ್ಯವಸ್ಥೆ ಶಾಶ್ವತವೆಂದರು. ಸುಧಾರಕ ಸಮಾಜವಾದಿ ತತ್ತ್ವದ ಮತ್ತು ಅದರ ಮುಖಂ ಡರ ಆಶೋತ್ತರಗಳನ್ನು ಭಂಗಮಾಡುವಂತೆ ಎರಡು ಪ್ರಾಮುಖ್ಯ ಘಟನೆಗಳು ನಡೆದವು. ಈ ಎರಡು ಮುಖ್ಯ ಘಟನೆಗಳು ಸುಧಾರಕ ಸಮಾಜವಾದೀ ತತ್ತ್ವದ ನಿಷ್ಟ್ರಯೋಜಕತೆಯನ್ನು ಬಯಲುಮಾಡಿದವು. ಒಂದನೇ ಘೋರ ಯುದ್ಧಾನಂತರ ಸುಧಾರಕ ಸಮಾಜವಾದಿಗಳು ಬಗೆ ದಂತೆ ಬಂಡವಾಳಶಾಹಿ ವ್ಯವಸ್ಥೆ ಸುವ್ಯವಸ್ಥಿತವಾಗಿರುವುದರ ಬದಲು ಪುನಃ ದಿನಚರಿಯಲ್ಲಿ ರೋಗಗ್ರಸ್ತವಾಯಿತು. 1926 ರಲ್ಲಿ ಆರ್ಥಿಕ ಮುಗ್ಗಟ್ಟು ಪ್ರಾರಂಭವಾಗಿ ಬಂಡವಾಳಶಾಹಿ ದೇಶಗಳಲ್ಲಿರುವ ಕಾರ್ಮಿಕವರ್ಗವನ್ನು ಪುನಃ ನಿರುದ್ಯೋಗದ ಸಾಗರದಲ್ಲಿ ಮುಳುಗಿಸಿತು. ಅಗಾಧ ಸಂಪಿತ್ತಿನ ನಡುವೆ ದಾರಿದ್ರ ಮತ್ತು ದುಃಸ್ಥಿತಿ ತಾಂಡವಾಡಲಾರಂಭಿಸಿದವು. ಇಂತಹ ಸನ್ನಿವೇಶದಲ್ಲಿ ಯಾವ ಆರ್ಥಿಕದುಃಸ್ಥಿತಿಗೂ ಈಡಾಗದೆ ಆರ್ಥಿ ಕಾಭಿವೃದ್ಧಿಯನ್ನು ಗಳಿಸುತ್ತಿದ್ದ ದೇಶವೆಂದರೆ ಸಮಾಜವಾದಿ ಆರ್ಥಿಕ ವ್ಯವಸ್ಥೆಯ ಸೋವಿಯಟ್ ರಷ್ಯಾ ಮಾತ್ರವಾಗಿತ್ತು.