ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದವೇ ಅಥವಾ ಬಂಡವಾಳವಾದವೇ ? ೧೧೯ ಎರಡನೆಯದಾಗಿ, 1921 ರಲ್ಲಿ ಇಟಲಿಯಲ್ಲಿ ಮತ್ತು 1933 ರಲ್ಲಿ ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದ ಫ್ಯಾಸಿಸ್ಟ್ ಸರ್ಕಾರಗಳು, ಖಾಸಗೀ ಸ್ವಾಮ್ಯಕ್ಕೆ ಅಪಾಯ ಒದಗಿರುವಾಗ ಪ್ರಜಾಸತ್ತೆಗಿಂತ ಬಂಡವಾಳಶಾಹಿ ವ್ಯವಸ್ಥೆಯ ಸಂರಕ್ಷಣೆಯೇ ಬಂಡವಾಳವರ್ಗದ ಅಂತರಾಳವೆಂದು ಪ್ರಕಟನೆ ಮಾಡಿದುವು. ಚುನಾವಣೆಗಳ ಮೂಲಕ ಜನತಾಭಿಪ್ರಾಯವನ್ನು ನಿರೀಕ್ಷಿಸು ವುದೂ ರಾಜ್ಯ ನಿರ್ವಹಣೆಯನ್ನು ಜನಸಮುದಾಯಕ್ಕೆ ಬಿಡುವುದೂ ಅಪಾಯ ವೆಂದು ಬಂಡವಾಳವರ್ಗ ಬಗೆಯಿತು. ಪ್ರಜಾಸತ್ತೆ ಚುನಾವಣೆಗಳನ್ನು ಫ್ಯಾಸಿಸ್ಟ್ ಸರ್ಕಾರಗಳು ಧೂಳಿಪಟ ಮಾಡಿದವು. 8 ಈ ರೀತಿಯಾಗಲು ಇಟಲಿ, ಜರ್ಮನಿ, ಆಸ್ಟ್ರಿಯಾ ಮತ್ತು ಇತರ ದೇಶ ಗಳಲ್ಲಿ ಇದ್ದ ಆರ್ಥಿಕ ಪರಿಸ್ಥಿತಿಯೇ ಮೂಲಕಾರಣವಾಗಿತ್ತು. ಯುದ್ಧಾ ನಂತರ ಅಧಿಕಾರಕ್ಕೆ ಬಂದ ಬಂಡವಾಳಶಾಹಿ ಸರ್ಕಾರಗಳಿಗೆ ಜನಸಮುದಾ ಯದ ಆಶೋತ್ತರಗಳನ್ನು ನೆರವೇರಿಸಲು ದುಸ್ಸಾಧ್ಯವಾಯಿತು, ಜನರಲ್ಲಿ ಅತೃಪ್ತಿ ಹೆಚ್ಚಿತು. ನಿರುದ್ಯೋಗವೂಸಹ ಹೆಚ್ಚಿತು ಯುದ್ಧದಲ್ಲಿ ಸೋತಅಥವಾ ನಿರಾಶೆಹೊಂದಿದ್ದ ಬಂಡವಾಳಶಾಹಿ ರಾಷ್ಟ್ರಗಳಿಗೆ ಲಾಭದ ಉದ್ಯಮಗಳನ್ನು ನಡೆಸಲು, ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲು ಮತ್ತು ತಿಮಿಂಗಿಲದಂತೆ ಇದ್ದ ಹಿರಿಯ ಬಂಡವಾಳಶಾಹಿ ರಾಷ್ಟ್ರಗಳೊಡನೆ ಪೈಪೋಟಿ ನಡೆಸಿ ಸರಕು ಗಳನ್ನು ಮಾರಲು ಚೈತನ್ಯವಿರಲಿಲ್ಲ. ಒಂದುಪಕ್ಷ ಇದ್ದರೂ, ಹಿರಿಯ ಬಂಡ ವಾಳಶಾಹಿ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕಾ ಅಡ್ಡಿ ಬಂದವು. ಹೀಗಾಗಿ ಕಾರ್ಮಿಕವರ್ಗದಲ್ಲಿ ಆರ್ಥಿಕದುಃಸ್ಥಿತಿಯಿಂದ ಅಶಾಂತಿ ಹೆಚ್ಚಿತ್ತು ಮಾರ್ಕ್ಸ್-ಏಂಗೆರ ಸಮಾಜವಾದೀ ತತ್ತ್ವದ ಸತ್ಯ ಕಾರ್ಮಿಕ ವರ್ಗಕ್ಕೆ ಪುನಃ ಮನದಟ್ಟಾಯಿತು. ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಕಾರ್ಮಿಕರ ಚಳವಳಿ ಆರಂಭವಾಯಿತು ಬಂಡವಾಳವರ್ಗ ತನ್ನ ಸ್ವಾಮ್ಯಕ್ಕೆ ಅಪಾಯ ಒದಗಿರುವುದನ್ನು ಕಾರ್ಮಿಕರ ಚಳವಳಿಯಲ್ಲಿ ಕಂಡು ಹೆದ ರಿತು ಚುನಾವಣೆಗಳ ಮೂಲಕ ರಾಜ್ಯಶಕ್ತಿಯನ್ನು ತಮ್ಮ ಹತೋಟ ಯಲ್ಲಿಟ್ಟುಕೊಳ್ಳುವುದು ಬಂಡವಾಳವರ್ಗಕ್ಕೆ ಕಠಿಣವಾಯಿತು ಇನ್ನು ಹೆಚ್ಚು ಕಾಲ ನಿಧಾನಿಸಿದರೆ ಬಂಡವಾಳಶಾಹಿ ವ್ಯವಸ್ಥೆಗೇ ಮಿತ್ತೆಂದು ಬಗೆದು ಪ್ರಜಾ ಸತ್ತೆ ಸರ್ಕಾರವನ್ನು ಉರುಳಿಸಿ ಸರ್ವಾಧಿಕಾರವುಳ್ಳ (Dictatorship) ಸರ್ಕಾರಗಳು ಪೋಷಿತವಾದವು. ಇಟಲಿಯಲ್ಲಿ ಮುಸಲೋನಿ, ಜರ್ಮನಿ